Skip to content
  • Monday, March 23, 2026
  • ABOUT US
  • CONTACT US
  • PRIVACY POLICY

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • PRIVACY POLICY
  • Horoscope
  • Home
  • Sports
  • Kedar Jadhav: ಮುಂದಿನ ಪಂದ್ಯದಲ್ಲಿ ಕೇದರ್ ಜಾಧವ್ ಕಣಕ್ಕೆ: ಅಭ್ಯಾಸದ ವೇಳೆ ಅಬ್ಬರಿಸಿದ ಕಾಮೆಂಟೇಟರ್
Sports

Kedar Jadhav: ಮುಂದಿನ ಪಂದ್ಯದಲ್ಲಿ ಕೇದರ್ ಜಾಧವ್ ಕಣಕ್ಕೆ: ಅಭ್ಯಾಸದ ವೇಳೆ ಅಬ್ಬರಿಸಿದ ಕಾಮೆಂಟೇಟರ್

May 4, 2023
samagrasuddi

ಐಪಿಎಲ್ 2023  ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಥಿತಿ ಸುರಕ್ಷಿತವಾಗಿಲ್ಲ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಗೆಲುವು ಮತ್ತು ನಾಲ್ಕು ಸೋಲು ಕಂಡು 10 ಅಂಕ ಸಂಪಾದಿಸಿದೆ. -0.030 ರನ್​ರೇಟ್ ಹೊಂದಿದೆ. ಹೀಗಾಗಿ ಮುಂಬರುವ ಮ್ಯಾಚ್​ಗಳು ಬೆಂಗಳೂರಿಗೆ ಮಹತ್ವದ್ದಾಗಿದೆ.ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೇ 6 ರಂದು ಆಡಲಿದೆ. ಇದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯದಲ್ಲಿ ಕೇದರ್ ಜಾಧವ್ ಕಣಕ್ಕಿಳಿಯುವ ಸಾಧ್ಯತೆ ಇದೆ.ಗಾಯದ ಕಾರಣ ಐಪಿಎಲ್​ನಿಂದ ಹೊರಬಿದ್ದಿರುವ ಆರ್​ಸಿಬಿ ಆಟಗಾರ ಡೇವಿಡ್ ವಿಲ್ಲಿ ಬದಲಿಗೆ ಮೊನ್ನೆಯಷ್ಟೆ ಬೆಂಗಳೂರು ಮ್ಯಾನೇಜ್ಮೆಂಟ್ ಐಪಿಎಲ್ 2023 ರಲ್ಲಿ ಮರಾಠಿ ಕಾಮೆಂಟ್ರಿ ಪ್ಯಾನೆಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೇದಾರ್ ಜಾಧವ್​ ಅವರನ್ನು ಆಯ್ಕೆ ಮಾಡಿದೆ.38 ವರ್ಷದ ಕೇದಾರ್ ಜಾಧವ್ ಇದೀಗ ಆರ್​ಸಿಬಿ ಕ್ಯಾಂಪ್ ಸೇರಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಮೈದಾನದಲ್ಲಿ ಫೋರ್, ಸಿಕ್ಸರ್ ಸಿಡಿಸಿ ತಾನಿನ್ನೂ ಫಿಟ್ ಆಗಿದ್ದೇನೆ, ನನ್ನಲ್ಲೂ ಕ್ರಿಕೆಟ್ ಆಡುವ ಶಕ್ತಿಯಿದೆ ಎಂದು ತೋರಿಸಿದ್ದಾರೆ.ಆರ್​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಇವರು ಮಾತನಾಡಿದ್ದು, ನಾನು ವಿಶ್ರಾಂತಿಯನ್ನು ಬಯಸಿದ್ದೆ. ಆದರೆ, ಬಳಿಕ ನಾನು ನನ್ನ ಫ್ಯಾಶನ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮನವರಿಕೆ ಆಯಿತು. ಹೀಗಾಗಿ ಮತ್ತೆ ಕ್ರಿಕೆಟ್​ಗೆ ಮರಳಿದೆ ಎಂದು ಕೇದರ್ ಜಾಧವ್ ಹೇಳಿದ್ದಾರೆ.ನಾನು ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಲು ಪ್ರಥಮ ದರ್ಜೆ ಕ್ರಿಕೆಟ್ ಆಡಿದೆ. ಅಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. ನನ್ನಲ್ಲಿ ಇನ್ನಷ್ಟು ಕ್ರಿಕೆಟ್ ಬಾಕಿಯಿದೆ. ದೊಡ್ಡ ಸ್ಕೋರ್ ಕಲೆಹಾಕಬೇಕು ಎಂಬ ಹಸಿವಿದೆ. ನಾನೀಗ ಎಲ್ಲದಕ್ಕೂ ಸಿದ್ದವಿದ್ದೇನೆ ಎಂಬುದು ಜಾಧವ್ ಮಾತು.ಕೇದದರ್ ಜಾಧವ್ ಆರ್​ಸಿಬಿ ತಂಡದಲ್ಲಿ ಮಧ್ಯಮ ಕ್ರಮಾಂಕದ ಬಲ ತುಂಬಲಿದ್ದಾರೆ. ಸದ್ಯ ಬೆಂಗಳೂರು ತಂಡದಲ್ಲಿ ಫಾಪ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಬಿಟ್ಟರೆ ಇತರೆ ಯಾವ ಬ್ಯಾಟರ್​ ಕೂಡ ಅಬ್ಬರಿಸುತ್ತಿಲ್ಲ. ಹೀಗಾಗಿ ಜಾಧವ್ 4 ಅಥವಾ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

source https://tv9kannada.com/photo-gallery/cricket-photos/kedar-jadhav-is-now-all-set-to-play-against-dc-in-rcbs-next-match-against-delhi-capitals-ipl-2023-vb-569769.html

Post navigation

DC vs RCB, IPL 2023: ಗೆಲ್ಲಲೇ ಬೇಕಾಗಿರುವ ಆರ್​ಸಿಬಿಗೆ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?: ಇಲ್ಲಿದೆ ಮಾಹಿತಿ
ತನ್ನ ರಾಜ್ಯದ ಹಿಂಸಾಚಾರ ನಿಲ್ಲಿಸಲು ಮೋದಿಗೆ ಮನವಿ ಮಾಡಿದ ಮೇರಿ ಕೋಮ್: ಅಂಥದ್ದೇನಾಗ್ತಿದೆ ಮಣಿಪುರದಲ್ಲಿ..?

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80

March 23, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
Home Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.5 | ದಿನ 77

March 20, 2026
samagrasuddi
  • ಕರ್ನಾಟಕ ಆಯುಷ್ ಇಲಾಖೆ ನೇಮಕಾತಿ 2026:ಬೆಂಗಳೂರಿನಲ್ಲಿ ಖಾತೆ ಸಹಾಯಕ ಹುದ್ದೆಗೆ ನೇರ ಸಂದರ್ಶನ | AYUSH Karnataka Recruitment
  • ಇತಿಹಾಸದಲ್ಲೇ ಮೊದಲ ಬಾರಿಗೆ 94ರ ಗಡಿ ದಾಟಿದ ಡಾಲರ್: ರೂಪಾಯಿ ಮೌಲ್ಯ ತೀವ್ರ ಕುಸಿತಕ್ಕೆ ಕಾರಣಗಳೇನು?
  • ಹವಾಮಾನ ಬದಲಾವಣೆಯಿಂದ ಕಾಡುತ್ತಿರುವ ಒಣ ಕೆಮ್ಮು: ಕಾರಣ, ಲಕ್ಷಣ ಮತ್ತು ಪರಿಹಾರ.
  • ​Day Special, ಮಾರ್ಚ್ 23: ದೇಶಪ್ರೇಮದ ಕಿಚ್ಚು ಮತ್ತು ಜಾಗತಿಕ ಬದಲಾವಣೆಯ ದಿನ – ಒಂದು ಸಮಗ್ರ ನೋಟ
  • Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80
Copyright © 2026
CONTACT US
Theme by: Theme Horse
Proudly Powered by: WordPress