
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ವಿಚಾರ ಆಗಾಗ ಸುದ್ದಿಯಾಗುತ್ತಾ ಇರುತ್ತದೆ. ಇದೀಗ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ ಅವರು ಪ್ರಧಾನಿ ಮೋದಿಯವರ ಶಿಕ್ಷಣದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ನಮ್ಮ ಪ್ರಧಾನಿಯವರು ವಿದ್ಯಾವಂತರಾಗಿರಬೇಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿ ಭಾನುವಾರ ಮಾತನಾಡಿದ ಕೇಜ್ರಿವಾಲ್, ನರೇಂದ್ರ ಮೋದಿಯವರ ಭಾಷಣವನ್ನು ನಾನು ಕೇಳಿದ್ದೇನೆ. ಅವರು ಹಳ್ಳಿಯ ಶಾಲೆಗೆ ಹೋಗುತ್ತಿದ್ದರು ಎಂದು ಹೇಳಿದರು. ಅಲ್ಲಿ ಅವರಿಗೆ ಹೆಚ್ಚು ಓದಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರಿಗೆ ಶಿಕ್ಷಣ ಸೆಇಯಾಗಿ ಆಗಿಲ್ಲ. ಆದ್ದರಿಂದ ನಾನು ಹೇಳುವುದಕ್ಕೆ ಬಯಸುವುದೇನೆಂದರೆ ಭಾರತದಂತಹ ಮಹಾನ್ ರಾಷ್ಟ್ರದ ಪ್ರದ್ಅನಿ ಶಿಕ್ಷಣ ಪಡೆಯಬೇಕಲ್ಲವೇ..? ಭಾರತ ಬಡ ರಾಷ್ಟ್ರವಾಗಿದ್ದು, ಬಡತನದಿಂದ ಶಾಲೆಗೆ ಹೋಗದಿರುವುದು ಅಪರಾಧವೇನಲ್ಲ. ಆದರೆ ನಮ್ಮ ಪ್ರಧಾನಿ ವಿದ್ಯಾವಂತರಾಗಿರಬೇಕು ಎಂದಿದ್ದಾರೆ.
ಪ್ರಧಾನಿಯವರು ನೋಟು ಅಮಾನ್ಯೀಕರಣ ಮಾಡಿದರು. ಅದು ನಮ್ಮ ಆರ್ಥಿಕತೆಯನ್ನು 10 ವರ್ಷ ಹಿಂದಕ್ಕೆ ಕೊಂಡೋಯ್ಯಿತು. ಯಾರೋ ನಮ್ಮ ಪ್ರಧಾನಿಯನ್ನು ಮೂರ್ಖರನ್ನಾಗಿಸಿದ್ದಾರೆ. ಭ್ರಷ್ಟಾಚಾರವನ್ನು ಕೊನೆಗೊಳಿಸಲು ನೋಟುಗಳನ್ನು ಬ್ಯಾನ್ ಮಾಡಿ ಎಂದು ಪ್ರಧಾನಿಯವರಿಗೆ ಹೇಳಿದರು. ಅದರಂತೆ ನೋಟ್ ಬ್ಯಾನ್ ಮಾಡಿದರು. ಆದರೆ ಅದರಿಂದ ಭ್ರಷ್ಟಾಚಾರ ಕೊನೆಗೊಂಡಿತೇ..? ಎಂದು ಪ್ರಶ್ನಿಸಿದ್ದಾರೆ.
The post ಬಡತನದಿಂದ ಶಾಲೆಗೆ ಹೋಗದಿರುವುದು ಅಪರಾಧವಲ್ಲ.. ಆದರೆ ನಮ್ಮ ಪ್ರಧಾನಿ ವಿದ್ಯಾವಂತರಾಗಬೇಕಲ್ಲವೇ : ಕೇಜ್ರಿವಾಲ್ ಪ್ರಶ್ನೆ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/D2SpyeL
via IFTTT
Views: 0