Kiccha Sudeep: ನಿರ್ಮಾಪಕ ಕುಮಾರ್‌ ವಿರುದ್ಧ ಕಿಚ್ಚ ಸುದೀಪ್ ಕಾನೂನು ಸಮರ

Defamation case against producer N Kumar : ಎನ್ ಕುಮಾರ್ ಹಾಗೂ ಎನ್.ಎಮ್ ಸುರೇಶ್ ವಿರುದ್ಧ ಕಿಚ್ಚ ಸುದೀಪ್ ಕಾನೂನು ಸಮರಕ್ಕಿಳಿದಿದ್ದಾರೆ. ಲಾಯರ್ ನೋಟಿಸ್ ಮೂಲಕ ಪ್ರೊಡ್ಯೂಸರ್‌ ಎನ್‌ ಕುಮಾರ್ ಆರೋಪಕ್ಕೆ ಸುದೀಪ್ ಉತ್ತರ ನೀಡಿದ್ದಾರೆ.   

Kiccha Sudeep filed defamation case against producer : ನಿರ್ಮಾಪಕ ಎನ್.ಕುಮಾರ್ ಆರೋಪಕ್ಕೆ ಕಾನೂನು ಮೂಲಕ ಉತ್ತರ ಕೊಡೊಕೆ‌ ನಟ‌ ಸುದೀಪ್ ಸಜ್ಜಾಗಿದ್ದಾರೆ. ಎನ್ ಕುಮಾರ್ ಹಾಗೂ ಎನ್.ಎಮ್ ಸುರೇಶ್ ವಿರುದ್ಧ ಕಿಚ್ಚ ಸುದೀಪ್ ಕಾನೂನು ಸಮರಕ್ಕಿಳಿದಿದ್ದಾರೆ. ಲಾಯರ್ ನೋಟಿಸ್ ಮೂಲಕ ಪ್ರೊಡ್ಯೂಸರ್‌ ಎನ್‌ ಕುಮಾರ್ ಆರೋಪಕ್ಕೆ ಸುದೀಪ್ ಉತ್ತರ ನೀಡಿದ್ದಾರೆ. ಎನ್ ಕುಮಾರ್ ಹಾಗೂ ಎನ್.ಎಮ್ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. 

ನೀವು ನನ್ನ ತಾಳ್ಮೆ ಪರೀಕ್ಷಿಸಿದ್ದೀರಿ. ಸುಳ್ಳಿನ ಕಂತೆ ಕಟ್ಟಿ ತೇಜೋವಧೆ ಮಾಡಿದ್ದೀರಿ. ನಾನು ನ್ಯಾಯಾಲಯದ ಮತ್ತು ಸಂವಿಧಾನ ನಂಬಿರುವವನು. ನಾನು ನನ್ನದೇ ರೀತಿಯಲ್ಲಿ ಉತ್ತರ ಕೊಡಲು ಕಾಯುತ್ತಿದ್ದೆ. ನೀವು ಮಾಡಿರುವ ಎಲ್ಲಾ ಆರೋಪಗಳನ್ನು ಸಾಬೀತುಪಡಿಸಿ, ಇಲ್ಲವಾದಲ್ಲಿ 10 ಕೋಟಿ ಮಾನನಷ್ಟ ದಂಡ ಕಟ್ಟಿಕೊಡಿ ಎಂದು ಎನ್ ಕುಮಾರ್ ಹಾಗೂ ಎನ್.ಎಮ್ ಸುರೇಶ್ ಅವರಿಗೆ ನೋಟಿಸ್ ಕಳಿಸಲಾಗಿದೆ. 

ನೋಟಿಸ್ ತಲುಪಿದ ಕೂಡಲೇ ಇದಕ್ಕೆ ಪ್ರತ್ಯುತ್ತರ ಕಳಿಸಬೇಕು. ನೀವು ಮಾಡಿರುವ ಆರೋಪಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸುದೀಪ್ ಅಡ್ವಾನ್ಸ್ ತೆಗೆದುಕೊಂಡು ಕಾಲ್ ಶೀಟ್ ಕೊಡುತ್ತಿಲ್ಲವೆಂದು ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದ ನಿರ್ಮಾಪಕ ಎನ್.ಕುಮಾರ್ ಆರೋಪಿಸಿದ್ದರು. ಸುದ್ದಿಗೋಷ್ಠಿ ದಿನ, ಕುಮಾರ್ ಆತ್ಮಹತ್ಯೆ ಮಾಡಿಕೊಂಡ್ರೆ ಅದಕ್ಕೆ ಸುದೀಪ್ ಕಾರಣ ಎಂದು ಸುರೇಶ್ ಹೇಳಿದ್ದರು. ಈ ಹಿನ್ನೆಲೆ ಇದೀಗ ಇಬ್ಬರಿಗೂ ನೋಟಿಸ್‌ ಕಳಿಸಲಾಗಿದೆ.

Source : https://zeenews.india.com/kannada/entertainment/actor-sudeep-has-filed-a-defamation-case-against-producer-n-kumar-144330

Leave a Reply

Your email address will not be published. Required fields are marked *