Kichcha Sudeep: ‘ಇದು ಖುಷಿ ಮತ್ತು ದುಃಖ ಎರಡೂ ಹೌದು’: ಕ್ರಿಕೆಟ್​​ ಬಗ್ಗೆ ಮಾತಾಡುವಾಗ ಸುದೀಪ್​ ಹೀಗೆ ಹೇಳಿದ್ದೇಕೆ?

Kichcha Sudeep says people should watch state level cricket along with CCL and KCC

ನಟ ಕಿಚ್ಚ ಸುದೀಪ್​ (Kichcha Sudeep) ಅವರಿಗೆ ಕ್ರಿಕೆಟ್​ ಬಗ್ಗೆ ತುಂಬ ಆಸಕ್ತಿ ಇದೆ. ಸಿನಿಮಾಗಳ ಜೊತೆಯಲ್ಲಿ ಅವರು ಕ್ರಿಕೆಟ್​ ಆಟವನ್ನೂ ಅಷ್ಟೇ ಪ್ರೀತಿಸುತ್ತಾರೆ. ಈಗ ಅವರು ‘ಕನ್ನಡ ಚಲನಚಿತ್ರ ಕಪ್​’ (Kannada Chalanachitra Cup) ಮತ್ತು ‘ಸೆಲೆಬ್ರಿಟಿ ಕ್ರಿಕೆಟ್​ ಲೀಗ್​’ (Celebrity Cricket League) ಸಲುವಾಗಿ ತಯಾರಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಸೆಲೆಬ್ರಿಟಿಗಳಾದ ನಾವು ಕ್ರಿಕೆಟ್​ ಆಡುವಾಗ ಮೈದಾನದಲ್ಲಿ 25 ಸಾವಿರಕ್ಕೂ ಅಧಿಕ ಜನ ಸೇರುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೊಳ್ಳೆಯ ಟೂರ್ನಮೆಂಟ್​ ನಡೆದಾಗಲೂ ಇಷ್ಟು ಜನ ಸೇರುವುದಿಲ್ಲ. ಅಲ್ಲಿ ಕ್ರಿಕೆಟ್​ ನೋಡಲು ಹೋಗದೇ ಇರುವ ಜನರು ನಮ್ಮ ಆಟ ನೋಡೋಕೆ ಬರುತ್ತಾರೆ ಎಂಬುದು ಖುಷಿ ಮತ್ತು ಬೇಜಾರು ಎರಡೂ ಹೌದು. ಸ್ಟೇಟ್​ ಲೆವೆಲ್​ನಲ್ಲಿ ನಡೆಯುವ ಆಟವನ್ನು ಜನರು ಬಂದು ನೋಡುವಂತಾಗಬೇಕು’ ಎಂದು ಸುದೀಪ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

source https://tv9kannada.com/videos/kichcha-sudeep-says-people-should-watch-state-level-cricket-along-with-ccl-and-kcc-mdn-au42-520604.html

Leave a Reply

Your email address will not be published. Required fields are marked *