Kichcha Sudeep: ‘ಕನ್ನಡದ ಧ್ವಜ ಯಾವಾಗ್ಲೂ ಮೇಲಿರಬೇಕು’: ಚೆನ್ನೈ ವಿರುದ್ಧ ಗೆದ್ದ ಖುಷಿಯಲ್ಲಿ ಸುದೀಪ್​ ಮಾತು

Kichcha Sudeep first reaction after Karnataka Bulldozers win over Chennai Rhinos in CCL

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮಾ.4) ಚೆನ್ನೈ ರೈನೋಸ್​ (Chennai Rhinos) ಮತ್ತು ಕರ್ನಾಟಕ ಬುಲ್ಡೋಜರ್ಸ್​ ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು. ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ತವರಿನಲ್ಲಿ ಕರ್ನಾಟಕ ಬುಲ್ಡೋಜರ್ಸ್​ (Karnataka Bulldozers) ತಂಡ ಜಯಭೇರಿ ಬಾರಿಸಿತು. ಪಂದ್ಯ ಗೆದ್ದ ಖುಷಿಯಲ್ಲಿ ಕಿಚ್ಚ ಸುದೀಪ್​ (Kichcha Sudeep) ಅವರು ಟಿವಿ9 ಜೊತೆ ಮಾತನಾಡಿದರು. ‘ಕನ್ನಡದ ಬಾವುಟ ಯಾವಾಗಲೂ ಮೇಲಿರಬೇಕು’ ಎಂದು ಅವರು ಹೆಮ್ಮೆಯಿಂದ ಹೇಳಿದರು. ತಮ್ಮ ತಂಡಕ್ಕೆ ಬೆಂಬಲ ನೀಡಿದ ಕ್ರಿಕೆಟ್​ಪ್ರೇಮಿಗಳಿಗೆ ಹಾಗೂ ಅಭಿಮಾನಿಗಳಿಗೆ ಸುದೀಪ್​ ಅವರು ಧನ್ಯವಾದ ಅರ್ಪಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

source https://tv9kannada.com/videos/kichcha-sudeep-first-reaction-after-karnataka-bulldozers-win-over-chennai-rhinos-in-ccl-mdn-au42-531231.html

Leave a Reply

Your email address will not be published. Required fields are marked *