ಎಷ್ಟೋ ಬಾರಿ ಇಂಗು, ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ ಎಂಬ ಗಾದೆ ಮಾತನ್ನು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಆದರೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಅಂತ ಕಸ ಎಂದು ಬೀಸಾಡುವ ತೆಂಗಿನ ನಾರು ಕೂಡ ನಾನಾ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ನಿಮಗೆ ತಿಳಿದರೆ ಶಾಕ್ ಆಗಬಹುದು. ಅದು ಹೇಗಪ್ಪಾ ಅಂತ ಯೋಚಿಸ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಎಳೆಯದಿದ್ದಾಗ ಎಳನೀರು, ಬಲಿತರೆ ತೆಂಗಿನಕಾಯಿ, ಒಣಗಿದರೆ ಕೊಬ್ಬರಿ, ಕಸಗುಡಿಸಲು ಪೊರಕೆ, ಮದುವೆಗೆ ಚಪ್ಪರ, ಛಾವಣಿಗೆ ಹೊದಿಕೆ, ಹೊಲ ಗದ್ದೆಗೆ ಗೊಬ್ಬರ, ಮನೆ ಉರುವಲು ಹೀಗೆ ಪಟ್ಟಿ ಮಾಡುತ್ತಾ ಹೋದರೆ ತೆಂಗಿನ ಕಾಯಿ ಪ್ರಯೋಜನ ಸಾಕಷ್ಟಿದೆ.
ಇದಲ್ಲದೇ ಎಷ್ಟೋ ಬಾರಿ ಇಂಗು, ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ ಎಂಬ ಗಾದೆ ಮಾತನ್ನು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಆದರೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಅಂತ ಕಸ ಎಂದು ಬೀಸಾಡುವ ತೆಂಗಿನ ನಾರು ಕೂಡ ನಾನಾ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ನಿಮಗೆ ತಿಳಿದರೆ ಶಾಕ್ ಆಗಬಹುದು. ಅದು ಹೇಗಪ್ಪಾ ಅಂತ ಯೋಚಿಸ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಅತಿಸಾರ: ತೆಂಗಿನ ನಾರು ಅತಿಸಾರ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಅತಿಸಾರದಿಂದ ಬಳಲುತ್ತಿದ್ದರೆ ಶೀಘ್ರವೇ ನಿವಾರಿಸಿಕೊಳ್ಳಲು ತೆಂಗಿನ ನಾರಿನ ನೀರನ್ನು ಕುಡಿಯಿರಿ. ಬ್ರೆಜಿಲ್ನ ಅನೇಕ ಭಾಗಗಳಲ್ಲಿ ತೆಂಗಿನ- ನಾರಿನ ನೀರನ್ನು ಔಷಧೀಯವಾಗಿ ಬಳಸಲಾಗುತ್ತದೆ. ತೆಂಗಿನ ನಾರಿನ ನೀರನ್ನು ತಯಾರಿಸಲು ಮೊದಲು ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ನಂತರ ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ. ಬಳಿಕ ಇದನ್ನು ಫಿಲ್ಟರ್ ಮಾಡಿ ಮತ್ತು ಬೆಚ್ಚಗಿರುವಾಗ ಕುಡಿಯಿರಿ.
ಸಂಧಿವಾತ:ಸಂಧಿವಾತದಿಂದ ಬಳಲುತ್ತಿರುವವರಿಗೆ ತೆಂಗಿನ ನಾರು ಉತ್ತಮ ಔಷಧವಾಗಿದೆ. ನೀವು ಸಂಧಿವಾತ ನೋವಿನಿಂದ ಬಳಲುತ್ತಿದ್ದರೆ. ತೆಂಗಿನ ನಾರಿನ ಟೀ ಕುಡಿಯಿರಿ. ತೆಂಗಿನ ಸಿಪ್ಪೆಯಲ್ಲಿರುವ ಉರಿಯೂತ ನಿವಾರಕ ಗುಣಗಳು ಸಂಧಿವಾತದ ನೋವನ್ನು ಹೋಗಲಾಡಿಸುತ್ತದೆ.
ಹಲ್ಲು ಹೊಳೆಯುತ್ತದೆ: ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ, ತೆಂಗಿನ ನಾರು ಅವುಗಳನ್ನು ಮತ್ತೆ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ, ತೆಂಗಿನ ನಾರನ್ನು ಬಾಣಲೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. ಅದು ಕಪ್ಪು ಬಣ್ಣಕ್ಕೆ ತಿರುಗಿದ ನಂತರ ಉರಿಯನ್ನು ಆಫ್ ಮಾಡಿ. ಇದನ್ನು ಒಣಗಿಸಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಹೀಗೆ ಮಾಡಿದರೆ, ನಿಮ್ಮ ಹಲ್ಲುಗಳು ಮುತ್ತಿನಂತೆ ಬೆಳ್ಳಗಾಗುತ್ತದೆ.
ಅಡುಗೆ ಪಾತ್ರೆಗಳ ಸ್ವಚ್ಛ: ತೆಂಗಿನ ನಾರನ್ನು ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಕ್ರಬ್ಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಇವುಗಳಿಂದ ಪರಿಸರಕ್ಕೂ ಹಾನಿ ಆಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರಬ್ಗಳ ಬದಲಿಗೆ ತೆಂಗಿನ ನಾರನ್ನು ಬಳಸಿ. ನಿಮ್ಮ ವೆಚ್ಚವು ಕಡಿಮೆಯಾಗುತ್ತದೆ ಮತ್ತು ಪ್ರಕ್ರಿಯೆಯು ಸಹ ಉತ್ತಮವಾಗಿರುತ್ತದೆ. ನಿಂಬೆ ರಸವನ್ನು ತೆಂಗಿನ ನಾರಿಗೆ ಹಚ್ಚಿಕೊಂಡು ಪಾತ್ರೆಗಳನ್ನು ಸ್ವಚ್ಛಗೊಳಿಸಿ. ಆಗ ನಿಮ್ಮ ಪಾತ್ರೆಗಳು ಹೊಳೆಯುತ್ತಿರುತ್ತವೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1