Skip to content
  • Sunday, March 22, 2026
  • ABOUT US
  • CONTACT US
  • PRIVACY POLICY

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • PRIVACY POLICY
  • Horoscope
  • Home
  • Sports
  • KKR vs RCB: ಭರ್ಜರಿ ಗೆಲುವಿನ ಬಳಿಕ ಹೀನಾಯ ಸೋಲು: 123 ರನ್​ಗೆ ಆಲೌಟ್ ಆದ ಆರ್​ಸಿಬಿ
Sports

KKR vs RCB: ಭರ್ಜರಿ ಗೆಲುವಿನ ಬಳಿಕ ಹೀನಾಯ ಸೋಲು: 123 ರನ್​ಗೆ ಆಲೌಟ್ ಆದ ಆರ್​ಸಿಬಿ

April 7, 2023
samagrasuddi

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಮೆರೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇದೀಗ ತಾನಾಡಿದ ದ್ವಿತೀಯ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ - ಬೌಲಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್​ಸಿಬಿ 200+ ರನ್ ಬಿಟ್ಟುಕೊಟ್ಟಿತು. ಅಲ್ಲದೆ 123 ರನ್​ಗೆ ಆಲೌಟ್ ಆಯಿತು. ಕೆಕೆಆರ್ 81 ರನ್​ಗಳ ಅಮೋಘ ಜಯ ಸಾಧಿಸಿತು.ಟಾಸ್​ ಸೋತು ​ಮೊದಲು ಬ್ಯಾಟಿಂಗ್​ಗೆ ಇಳಿದ ನಿತೀಶ್ ರಾಣಾ ಪಡೆ ಆರಂಭಿಕ ಆಘಾತದ ಹೊರತಾಗಿಯೂ ಬೃಹತ್​ ಮೊತ್ತ ಕಲೆ ಹಾಕಿತು. ರಹಮಾನುಲ್ಲಾ ಅವರು 3 ಸಿಕ್ಸರ್​ ಮತ್ತು 4 ಬೌಂಡರಿಗಳ ಮೂಲಕ 57 ರನ್​ ಗಳಿಸಿದರು. ವೆಂಕಟೇಶ್​ ಅಯ್ಯರ್​ (3), ಮಂದೀಪ್​ ಸಿಂಗ್​(0), ನಿತೀಶ್​ ರಾಣಾ (1) ರನ್​ ಗಳಿಸಿ ಪೆವಿಲಿಯನ್​ ಪರೇಡ್​ ನಡೆಸಿದರು.ರಿಂಕು ಸಿಂಗ್​ 3 ಸಿಕ್ಸರ್​ ಮತ್ತು 2 ಬೌಂಡರಿ ಸಹಾಯದಿಂದ 46 ರನ್​ ಗಳಿಸಿ ತಂಡಕ್ಕೆ ಆಸರೆಯಾದರು. ನಂತರ ಶುರುವಾಗಿದ್ದು ಶಾರ್ದೂಲ್​ ಠಾಕೂರ್​ ಅಬ್ಬರ. 234.48ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಇವರು ಕೇವಲ 29 ಎಸೆತಗಳಲ್ಲಿ 3 ಸಿಕ್ಸರ್, 9 ಬೌಂಡರಿ ಗಳಿಸುವ ಮೂಲಕ 68 ರನ್​ ಗಳಿಸಿ ತಂಡ ಬೃಹತ್​ ರನ್​ ಗಳಿಸುವಲ್ಲಿ ಸಹಕರಿಸಿದರು.ಟಾರ್ಗೆಟ್​ ಬೆನ್ನಟ್ಟಿದ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ನಾಯಕ ಡು ಪ್ಲೆಸಿಸ್ ಉತ್ತಮ ಆರಂಭ ಒದಗಿಸಿ ಭದ್ರ ಅಡಿಪಾಯ ಹಾಕುವ ಮುನ್ಸೂಚನೆ ನೀಡಿದರು. ಆದರೆ, ಕೊಹ್ಲಿ (21), ಡುಪ್ಲೆಸಿಸ್​ (23) ಔಟಾಗಿದ್ದೇ ತಡ ತಂಡದ ದಿಢೀರ್ ಕುಸಿತ ಕಂಡಿತು.ವರುಣ್ ಚಕ್ರವರ್ತಿ ಅವರು ಒಂದೇ ಓವರ್​ನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್ (5)​ ಮತ್ತು ಹರ್ಷಲ್​ ಪಟೇಲ್​ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ಗೆ ಕಳುಹಿಸಿದರು. ಮೈಕಲ್​ ಬ್ರೇಸ್​ವೆಲ್ (19) ಕ್ಯಾಚಿತ್ತು ನಿರ್ಗಮಿಸಿದರು. ಶಹಬಾಜ್ ಅಹ್ಮದ್​ ಅವರನ್ನು 1 ರನ್​ಗೆ ನರೈನ್​ ಔಟ್​ ಮಾಡಿದರು.ದಿನೇಶ್​ ಕಾರ್ತಿಕ್ (9), ಅನುಜ್​ ರಾವತ್​ (1) ಮತ್ತು ಕರ್ಣ್​ ಶರ್ಮಾ (1), ಆಕಾಶ್​ ದೀಪ್​ 1, ಡೇವಿಡ್​ ವಿಲ್ಲೆ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಆರ್​ಸಿಬಿ 17.4 ಓವರ್​ಗಳಲ್ಲಿ 123 ರನ್​ಗಳಿಗೆ ಸರ್ವಪತನ ಕಂಡಿತು. 81 ರನ್​ಗಳ ಜಯದೊಂದಿಗೆ ಕೆಕೆಆರ್ ಟೂರ್ನಿಯಲ್ಲಿ ಚೊಚ್ಚಲ ಗೆಲುವು ಸಾಧಿಸಿದೆ.

source https://tv9kannada.com/photo-gallery/cricket-photos/shardul-thakur-and-varun-chakravarthy-shine-kkr-defeated-rcb-by-81-runs-in-ipl-2023-cricket-news-in-kannada-vb-au48-550764.html

Post navigation

Good Friday 2023 : ಗುಡ್ ಫ್ರೈಡೆ ಆಚರಣೆ ಮತ್ತು ಮಹತ್ವದ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ…!
Faf Duplessis: ಹೀನಾಯ ಸೋಲಿನ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ದೂರಿದ್ದು ಯಾರನ್ನು ಗೊತ್ತೇ?

Leave a Reply Cancel reply

Your email address will not be published. Required fields are marked *

CITIES

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್ ಚಿತ್ರದುರ್ಗ ಮಾ. 18ತುಮಕೂರು ಜಿಲ್ಲೆಯ ತುರುವೇಕೆರೆಯ ವಿದ್ಯಾರಣ್ಯ ಡಿಎಡ್ ಕಾಲೇಜ್‍ನಲ್ಲಿ 2006 2007ನೇ ಸಾಲಿನ ಹಿರಿಯ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆ ಲಕ್ಷ್ಮೀಕಾಂತ್ ವಹಿಸಿದ್ದರು. ಶಿಕ್ಷಕರುಗಳಾದ ಶಿವಮೂರ್ತಿ,…

Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi
Cities

SSLC ಪರೀಕ್ಷೆ 2026: ಮಾರ್ಚ್ 18ರಿಂದ ಪರೀಕ್ಷೆ ಪ್ರಾರಂಭ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಟ್ಟುನಿಟ್ಟಿನ ನಿಯಮಗಳು!

March 14, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
Home Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.5 | ದಿನ 77

March 20, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.4 | ದಿನ 76

March 19, 2026
samagrasuddi
  • ​Day Special, ಮಾರ್ಚ್ 22: ಇತಿಹಾಸದ ಪುಟಗಳಲ್ಲಿನ ಸುವರ್ಣ ಅಕ್ಷರಗಳು ಮತ್ತು ವಿಶ್ವ ಜಲ ದಿನದ ವಿಶೇಷತೆ
  • Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79
  • ​Today’s Horoscope, March 22: ಇಂದು ಈ ರಾಶಿಯವರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಆತಂಕ ಬೇಡ, ಬದಲಿಗೆ ಅವರೊಂದಿಗೆ ಸಮಯ ಕಳೆಯಿರಿ.
  • ವಿಶ್ವ ಸಂತೋಷ ಸೂಚ್ಯಂಕ 2026: ಸತತ 9ನೇ ಬಾರಿಗೆ ಫಿನ್ಲೆಂಡ್ ಮೊದಲು; ಭಾರತದ ಸ್ಥಾನದಲ್ಲಿದೆ ಸುಧಾರಣೆ!
  • ​Day Special, ಮಾರ್ಚ್ 21: ಜಾಗತಿಕ ಇತಿಹಾಸ, ಸಂಸ್ಕೃತಿ ಮತ್ತು ಪ್ರಕೃತಿಯ ವಿಶೇಷ ಸಂಗಮ.
Copyright © 2026
CONTACT US
Theme by: Theme Horse
Proudly Powered by: WordPress