ಒಂದು ಕಡೆ ವಿಕೆಟ್ ಉರುಳುತ್ತಿದ್ರೆ, ಇತ್ತ ಒಂದು ಕಡೆ ಬಟ್ಲರ್ ಗಟ್ಟಿಯಾಗಿ ನಿಂತು ಆರ್‌ಆರ್‌ಗೆ ಆಸರೆಯಾದರು. ಕೊನೆ ಬಾಲ್‌ವರೆಗೂ ಬಟ್ಲರ್ ಗೆಲುವಿಗಾಗಿ ಹೋರಾಟ ಮಾಡಿದ್ರು.
ಇಂದು ಚುಟುಕು ಸಮರದಲ್ಲಿ ಐಪಿಎಲ್ (IPL) ಅಂಕಪಟ್ಟಿಯ ಟಾಪರ್ಸ್‌ಗಳ ನಡುವೆ ಕಾಳಗ ನಡೆಯಿತು. ಮೊದಲ ಸ್ಥಾನದಲ್ಲಿರೋ ಆರ್‌ಆರ್ (RR), 2ನೇ ಸ್ಥಾನದಲ್ಲಿರೋ ಕೆಕೆಆರ್ (KKR) ಚಾಲೆಂಜ್ ಮಾಡಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ (Kolkatta Night Riders) ಹಾಗೂ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಗಳು ಇದುವರೆಗೆ 28 ಪಂದ್ಯಗಳಲ್ಲಿ ಮುಖಾಮುಖಿಯಾಗಿತ್ತು. ಈ ವೇಳೆ ಕೆಕೆಆರ್ ತಂಡ 14 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಆರ್‌ಆರ್ ತಂಡ 13 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನೂ ಈ ಸೀಸನ್‌ನಲ್ಲಿ ಎರಡು ತಂಡಗಳು ಮೊದಲಿನಿಂದಲೂ ಸದ್ದು ಮಾಡಿಕೊಂಡೇ ಬಂದಿದೆ. ಕೆಕೆಆರ್ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಟಾಸ್ ಗೆದ್ದು ಆರ್‌ಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 223 ರನ್‌ಗಳಿಸಿತು. 2 ವಿಕೆಟ್‌ಗಳಿಂದ ಆರ್‌ಆರ್ ತಂಡ ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದೆ.
ಬಟ್ಲರ್ ಏಕಾಂಗಿ ಹೋರಾಟ
ಒಂದು ಕಡೆ ವಿಕೆಟ್ ಉರುಳುತ್ತಿದ್ರೆ, ಇತ್ತ ಒಂದು ಕಡೆ ಬಟ್ಲರ್ ಗಟ್ಟಿಯಾಗಿ ನಿಂತು ಆರ್‌ಆರ್‌ಗೆ ಆಸರೆಯಾದರು. ಕೊನೆ ಬಾಲ್‌ವರೆಗೂ ಬಟ್ಲರ್ ಗೆಲುವಿಗಾಗಿ ಹೋರಾಟ ಮಾಡಿದ್ರು. ಕೊನೆಗೂ ಬಟ್ಲರ್ ಆರ್‌ಆರ್‌ಗೆ ಗೆಲುವು ತಂದುಕೊಟ್ರು. ರಣರೋಚಕ ಪಂದ್ಯದಲ್ಲಿ ಆರ್‌ಆರ್ ತಂಡ ಗೆದ್ದು ಬೀಗಿದೆ. ಶತಕ ಬಾರಿಸುವ ಮೂಲಕ ಆರ್‌ಆರ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ ಜೋಸ್ ಬಟ್ಲರ್. 55 ಬಾಲ್‌ನಲ್ಲಿ ಭರ್ಜರಿ ಶತಕ ಬಾರಿಸಿದ್ರು.
ಕೈ ಕೊಟ್ಟ ಆರ್‌ಆರ್ ಬ್ಯಾಟರ್ಸ್!
ಈ ಗುರಿ ಬೆನ್ನಟ್ಟಿದ ಆರ್‌ಆರ್‌ಗೆ ಆರಂಭಿಕ ಆಘಾತ ಎದುರಾಗಿತ್ತು. 9 ಎಸೆತಗಳಲ್ಲಿ 19 ರನ್ ಬಾರಿಸಿ ಯಶಸ್ವಿ ಜೈಸ್ವಾಲ್ ವಿಕೆಟ್ ಒಪ್ಪಿಸಿದ್ರು. ಇನ್ನೂ ಹರ್ಷಿತ್ ರಾಣ ಎಸೆದ 5ನೇ ಓವರ್ನ 2ನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ನರೈನ್ಗೆ ಕ್ಯಾಚ್ ನೀಡಿ ಔಟಾದ್ರು. 8 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ರು.
ಇನ್ನೂ ಹರ್ಷಿತ್ ರಾಣ ಎಸೆದ 8ನೇ ಓವರ್ನಲ್ಲಿರಿಯಾನ್ ಪರಾಗ್ ಕ್ಯಾಚ್ ನೀಡಿ ಔಟಾದ್ರೆ, ಸುನಿಲ್ ನರೈನ್ ಎಸೆದ 9ನೇ ಓವರ್ನ 4 ಎಸೆತದಲ್ಲಿ ಧ್ರುವ್ ಜುರೇಲ್ ಎಲ್‌ಬಿಡಬ್ಲ್ಯೂಗೆ ಔಟಾದ್ರು.
ಸುನೀಲ್ ನರೈನ್ ಅಬ್ಬರ!
ಕೆಕೆಆರ್ ಪರ ಬ್ಯಾಟಿಂಗ್ ಮಾಡಲು ಬಂದ ಸುನೀಲ್ ನರೈನ್ ಹಾಗೂ ಸಾಲ್ಟ್ ಜೋಡಿಗೆ ಆಘಾತ ಎದುರಾಯ್ತು. ಸಾಲ್ಟ್ ಅಂದುಕೊಂಡಂತೆ ಪರ್ಫಾಮ್ ಮಾಡಲಿಲ್ಲ. ಆವೇಶ್ ಖಾನ್‌ಗೆ ಕ್ಯಾಚ್ ನೀಡಿ ಸಾಲ್ಟ್ ಔಟಾದ್ರು. ಇದಾದ ಬಳಿಕ ಸುನೀಲ್ ನರೈನ್ ಅಬ್ಬರಿಸಿ ಬೊಬ್ಬರಿದ್ರು. ಮೈದಾನದ ಮೂಲೆ ಮೂಲೆಗೂ ಬಾಲ್ ಕಳಿಸಿ ಆರ್‌ಆರ್ ಬೌಲರ್ಸ್‌ಗೆ ಕಾಟ ಕೊಟ್ರು. 49 ಬಾಲ್‌ಗಳಲ್ಲಿ ಸೆಂಚೂರಿ ಬಾರಿಸಿ ಅಬ್ಬರಿಸಿದ್ರು. ಇವರಿಗೆ ರಸೆಲ್ ಕೂಡ ಸಾಥ್ ಕೊಟ್ರು. ಇನ್ನೂ ನರೇನ್ 109 ರನ್‌ಗಳಿಸಿ ಬೋಲ್ಟ್‌ಗೆ ವಿಕೆಟ್ ಒಪ್ಪಿಸಿದ್ರು.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಕುಲ್ದೀಪ್ ಸೇನ್, ಯುಜ್ವೇಂದ್ರ ಚಹಲ್.
ಕೊಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಫಿಲಿಪ್ ಸಾಲ್ಟ್, ಸುನಿಲ್ ನರೈನ್, ಅಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1