ಬಳ್ಳಾರಿ : ‘ಮಹಾಕುಂಭಮೇಳ’ ಕ್ಕೆ ಕೆಕೆಆರ್‌ಟಿಸಿ ವಿಶೇಷ ಬಸ್ ಸೌಲಭ್ಯ

KKRTC SPECIAL BUS : ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಬಳ್ಳಾರಿಯಿಂದ ಕೆಕೆಆರ್​ಟಿಸಿ ವಿಶೇಷ ಬಸ್​ ಸೌಲಭ್ಯ ಒದಗಿಸಲಾಗುತ್ತಿದೆ.

ಬಳ್ಳಾರಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವತಿಯಿಂದ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಐತಿಹಾಸಿಕ ‘ಮಹಾಕುಂಭಮೇಳ’ಕ್ಕೆ ಹೋಗುವ ಭಕ್ತಾಧಿಗಳ ಅನುಕೂಲಕ್ಕಾಗಿ ಸಾಂದರ್ಭಿಕ ಒಪ್ಪಂದದ ಮೇರೆಗೆ ವಿಶೇಷ ಬಸ್​ಗಳನ್ನು ಒದಗಿಸಲಾಗುತ್ತಿದೆ ಎಂದು ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗದ ಡಿಟಿಒ ಚಾಮರಾಜ್‌ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಬಸ್​ಗಳನ್ನ ಪ್ರಾಸಂಗಿಕ ಕರಾರಿನ ಮೇರೆಗೆ ಕೊಡುತ್ತಿದ್ದೇವೆ. ಮದುವೆ, ಶಾಲಾ ಪ್ರವಾಸಕ್ಕೆ ಕೊಡುವಂತೆ ಬಸ್​ಗಳನ್ನು ಸಿಸಿ ಕೊಡುತ್ತಿದ್ದೇವೆ. ಯಾರಾದ್ರೂ 50 ಜನ ಗುಂಪಾಗಿ ಬಂದು ಪ್ಯಾಸೆಂಜರ್ ಲಿಸ್ಟ್​ ಕೊಟ್ಟರೆ, ಅದನ್ನ ಹಾಗೂ ವಾಹನದ ನಂಬರ್​ನ್ನು ನಾವು ಆರ್​ಟಿಒ ಆಫೀಸ್​ಗೆ ಸಲ್ಲಿಸುತ್ತೇವೆ. ನಂತರ ಅವರಿಂದ ಅನುಮತಿ ಪಡೆದು ಬಸ್​ನ್ನ ಓಡಿಸುತ್ತೇವೆ. ಒಂದು ವಾರ ಮುಂಚಿತವಾಗಿ ಬಂದು ಅರ್ಜಿ ಸಲ್ಲಿಸಬೇಕು ಎಂದರು.

ಬಳ್ಳಾರಿ, ಮೋಕಾ, ಕುರುಗೋಡು, ಕಂಪ್ಲಿ, ಎಮ್ಮಿಗನೂರು, ಸಿರುಗುಪ್ಪ, ತೆಕ್ಕಲಕೋಟ, ಹಳೇಕೋಟೆ, ತೋರಣಗಲ್ಲು, ಸಂಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ‘ಮಹಾಕುಂಭಮೇಳ’ಕ್ಕೆ ಹೋಗುವ ಭಕ್ತಾಧಿಗಳ ಅನುಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸಂಪರ್ಕಿಸಬೇಕಾದ ಅಧಿಕಾರಿಗಳ ದೂರವಾಣಿ ಸಂಖ್ಯೆ :

ಬಳ್ಳಾರಿ-1 ನೇ ಘಟಕದ ವ್ಯವಸ್ಥಾಪಕರ ಮೊ.7760992163
ಬಳ್ಳಾರಿ-2 ನೇ ಘಟಕದ ವ್ಯವಸ್ಥಾಪಕರ ಮೊ.7760992164
ಸಿರುಗುಪ್ಪ ಘಟಕದ ವ್ಯವಸ್ಥಾಪಕರ ಮೊ.7760992165
ಕುರುಗೋಡು ಘಟಕ ವ್ಯವಸ್ಥಾಪಕರ ಮೊ.9606483671
ಸಂಡೂರು ಘಟಕ ವ್ಯವಸ್ಥಾಪಕರ ಮೊ.7760992309

ಈ ವಿಶೇಷ ಬಸ್​ಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಮುಂಗಡವಾಗಿ ಕಾಯ್ದಿರಿಸಿ, ಭಕ್ತಾಧಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Source : https://www.etvbharat.com/kn/!state/kkrtc-special-bus-facility-for-mahakumbh-mela-karnataka-news-kas25020202541

Leave a Reply

Your email address will not be published. Required fields are marked *