KL Rahu Cricket News: ಕಳೆದ ವರ್ಷ ವಿರಾಟ್-ರೋಹಿತ್ ಅವರ ಬ್ಯಾಟಿಂಗ್ ಫಾರ್ಮ್ಯಾಟ್ ಕಳಪೆಯಾಗಿದ್ದ ಸಂದರ್ಭದಲ್ಲಿ ಟೀಂ ಇಂಡಿಯಾಗೆ ಅರ್ಧಶತಕಗಳ ಕೊಡುಗೆ ನೀಡಿ ತಂಡಕ್ಕೆ ನೆರವಾದವರು ಕೆಎಲ್ ರಾಹುಲ್.
KL Rahul, Asia cup 2023: ಏಷ್ಯಾಕಪ್ 2023ಕ್ಕೂ ಮುನ್ನ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಈ ವರ್ಷ ನಡೆಯಲಿರುವ ಏಷ್ಯಾ ಕಪ್ 2023 ರಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರು ರಾಹುಲ್ ಸ್ಥಾನಕ್ಕೆ ಈ ಡ್ಯಾಶಿಂಗ್ ಬ್ಯಾಟ್ಸ್‌ಮನ್ ನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಕಳೆದ ವರ್ಷ ವಿರಾಟ್-ರೋಹಿತ್ ಅವರ ಬ್ಯಾಟಿಂಗ್ ಫಾರ್ಮ್ಯಾಟ್ ಕಳಪೆಯಾಗಿದ್ದ ಸಂದರ್ಭದಲ್ಲಿ ಟೀಂ ಇಂಡಿಯಾಗೆ ಅರ್ಧಶತಕಗಳ ಕೊಡುಗೆ ನೀಡಿ ತಂಡಕ್ಕೆ ನೆರವಾದವರು ಕೆಎಲ್ ರಾಹುಲ್. ಆದರೆ ಈ ಬಾರಿಯ ಏಷ್ಯಾಕಪ್‌ನಲ್ಲಿ ಅವರ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡುವ ಪರಿಸ್ಥಿತಿ ಬಂದಿದೆ.
ಐಪಿಎಲ್ 2023ರಲ್ಲಿ ಫೀಲ್ಡಿಂಗ್ ವೇಳೆ ಕೆಎಲ್ ರಾಹುಲ್ ತೀವ್ರವಾಗಿ ಗಾಯಗೊಂಡಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೇ ಕಾರಣದಿಂದಾಗಿ ಐಪಿಎಲ್ 16 ನೇ ಸೀಸನ್ ನಿಂದ ಅರ್ಧಕ್ಕೆ ಹೊರಹೋಗಬೇಕಾಯಿತು. ಬಳಿಕ ಮೊಣಕಾಲು ಶಸ್ತ್ರಚಿಕಿತ್ಸೆಯ ಒಳಗಾದ ರಾಹುಲ್ ಬೆಂಗಳೂರಿನ ಎನ್‌ಸಿಎಯಲ್ಲಿ ರಿಹ್ಯಾಬ್ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ.
ಆದರೆ ಕ್ರಿಕ್ ಬಝ್ ವರದಿಯಲ್ಲಿ ಅವರು ಏಷ್ಯಾಕಪ್‌ವರೆಗೆ ಸಂಪೂರ್ಣ ಫಿಟ್ ಆಗಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಅವರು ಏಷ್ಯಾಕಪ್‌ನಲ್ಲಿ ಆಡುವುದಿಲ್ಲ. ಆದರೆ ಅವರ ಸ್ಥಾನದಲ್ಲಿ ಇಬ್ಬರು ಆಟಗಾರರಾದ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇದ್ದು, ಬದಲಿಯಾಗಿ ಯಾರು ಅವಕಾಶ ಪಡೆಯುತ್ತಾರೆ ಎಂದು ಕಾದುನೋಡಬೇಕಿದೆ.
ಕೆಎಲ್ ರಾಹುಲ್ ಏಷ್ಯಾಕಪ್ ನಿಂದ ಹೊರಬಿದ್ದ ನಂತರ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.
ಇಶಾನ್ ಕಿಶನ್ ಭಾರತ ಪರ 14 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 42.5 ಸರಾಸರಿಯ 13 ಇನ್ನಿಂಗ್ಸ್‌ಗಳಲ್ಲಿ 510 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಒಂದು ದ್ವಿಶತಕವೂ ಸೇರಿದೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್ ಅವರ ODI ವೃತ್ತಿಜೀವನವನ್ನು ನೋಡುವುದಾದರೆ, ಅವರು ಭಾರತಕ್ಕಾಗಿ 11 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 10 ಇನ್ನಿಂಗ್ಸ್‌ಗಳ 66 ಸರಾಸರಿಯಲ್ಲಿ 330 ರನ್ ಗಳಿಸಿದ್ದಾರೆ. ವಿಶೇಷವೆಂದರೆ ಇವರಿಬ್ಬರೂ ಬ್ಯಾಟ್ಸ್ ಮನ್ ಗಳಾಗಿ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ.