KL Rahul: ಕಎಲ ರಹಲ ಕಬಯಕ ಯವಗ? ಇಲಲದ ಉತತರ

ಐಪಿಎಲ್ ವೇಳೆ ಗಾಯಗೊಂಡಿದ್ದ ಕರ್ನಾಟಕದ ಆಟಗಾರ ಕೆಎಲ್ ರಾಹುಲ್ (KL Rahul) ಕಳೆದ ಕೆಲ ತಿಂಗಳುಗಳಿಂದ ಟೀಮ್ ಇಂಡಿಯಾದಿಂದ (Team India) ಹೊರಗುಳಿದಿದ್ದಾರೆ. ಆರ್​ಸಿಬಿ (RCB) ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಕೆಎಲ್ ರಾಹುಲ್ ಅವರ ಕಾಲಿಗೆ ಗಂಭೀರ ಗಾಯವಾಗಿತ್ತು. ಹೀಗಾಗಿ ಅರ್ಧದಲ್ಲೇ ಐಪಿಎಲ್​ನಿಂದ ಹೊರಗುಳಿದಿದ್ದರು.ಆ ಬಳಿಕ ಲಂಡನ್​ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕೆಎಲ್​ಆರ್ ಭಾರತಕ್ಕೆ ಮರಳಿ ವಿಶ್ರಾಂತಿಯಲ್ಲಿದ್ದರು. ಇದೀಗ ವಿಶ್ರಾಂತಿ ಪೂರ್ಣಗೊಳಿಸಿರುವ ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಾಣಿಸಿಕೊಂಡಿದ್ದಾರೆ. ಎನ್​ಸಿಎನಲ್ಲಿ ತಮ್ಮ ಫಿಟ್​ನೆಸ್​ಗಾಗಿ ಕಸರತ್ತನ್ನು ಆರಂಭಿಸಿರುವ ಕೆಎಲ್ ರಾಹುಲ್ ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಇದಾಗ್ಯೂ ವೆಸ್ಟ್ ಇಂಡೀಸ್​ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ.ಅಂದರೆ ಕೆಎಲ್ ರಾಹುಲ್ ಇನ್ನೊಂದು ತಿಂಗಳು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್​ನಲ್ಲಿ ತೊಡಗಿಸಿಕೊಳ್ಳಲಿದ್ದು, ಆ ಬಳಿಕವಷ್ಟೇ ಮೈದಾನಕ್ಕೆ ಮರಳಲಿದ್ದಾರೆ. ಅಂದರೆ ಆಗಸ್ಟ್ ವೇಳೆಗೆ ಕೆಎಲ್​ಆರ್​ ಸಂಪೂರ್ಣ ಫಿಟ್​ ಆಗುವ ವಿಶ್ವಾಸದಲ್ಲಿದ್ದಾರೆ.ಇತ್ತ ಆಗಸ್ಟ್ 31 ರಿಂದ ಏಷ್ಯಾಕಪ್ ಟೂರ್ನಿ ಪ್ರಾರಂಭವಾಗಲಿದೆ. ಈ ವೇಳೆಗೆ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮೈದಾನಕ್ಕಿಳಿಯುವ ವಿಶ್ವಾಸ ಹೊಂದಿದ್ದಾರೆ. ಹೀಗಾಗಿ ಏಷ್ಯಾಕಪ್ ತಂಡದ ಆಯ್ಕೆಗೆ ಕೆಎಲ್ ರಾಹುಲ್ ಲಭ್ಯರಿರಲಿದ್ದಾರೆ. ಅದರಂತೆ ಏಷ್ಯಾಕಪ್ ಟೂರ್ನಿಯ ಮೂಲಕ ಕೆಎಲ್ ರಾಹುಲ್ ಕಂಬ್ಯಾಕ್ ಮಾಡುವುದು ಖಚಿತ ಎಂದು ತಿಳಿದು ಬಂದಿದೆ. ಹೀಗಾಗಿ ಕನ್ನಡಿಗನನ್ನು ಮತ್ತೆ ಬ್ಲೂ ಜೆರ್ಸಿಯಲ್ಲಿ ನೋಡಲು ಆಗಸ್ಟ್ ತಿಂಗಳವರೆಗೆ ಕಾಯಲೇಬೇಕು.

source https://tv9kannada.com/photo-gallery/cricket-photos/kl-rahul-begins-rehab-at-nca-kl-rahul-come-back-kannada-news-zp-603660.html

Views: 0

Leave a Reply

Your email address will not be published. Required fields are marked *