Knowledge Story: ಈ ವರದಿಯಲ್ಲಿ ಬಟ್ಟೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರ ಕಂಡು ಹಿಡಿಯೋಣ. ಬಟ್ಟೆ ಖರೀದಿ ಮಾಡುವ ವೇಳೆ ಎಲ್ಲರೂ ಬಹುತೇಕ ಗೊಂದಲಕ್ಕೆ ಒಳಗಾಗುತ್ತಾರೆ. ಬಣ್ಣ, ಸೈಜ್, ಕ್ವಾಲಿಟಿ, ಬೆಲೆ ಎಲ್ಲಾ ಅಂಶಗಳು ಬಟ್ಟೆ ಖರೀದಿ ವೇಳೆ ಪರಿಗಣನೆಗೆ ಬರುತ್ತವೆ.
![](https://samagrasuddi.co.in/wp-content/uploads/2024/03/image-163.png)
ಶಾಪಿಂಗ್ (Shopping) ಅಂತ ತೆರಳಿದ್ರೆ ಯಾವ ಬಟ್ಟೆ ಖರೀದಿ ಮಾಡಬೇಕು ಅನ್ನೋ ಗೊಂದಲ ಉಂಟಾಗೋದು ಸಹಜ. ಕೆಲವೊಮ್ಮೆ ಅವಸರದಲ್ಲಿ ಸಿಕ್ಕ ಶರ್ಟ್ (Shirt) ಖರೀದಿಸಿ ಮನಗೆ ಬಂದು ಫಿಟ್ಟಿಂಗ್ ಇಲ್ಲ ಅಂತ ಗೋಳಾಡೋದಕ್ಕಿಂತ ಮೊದಲೇ ಟ್ರೈ ಮಾಡಿ ತರೋದು ಬೆಸ್ಟ್.
ಇಂದಿನ ವರದಿಯಲ್ಲಿ ಬಟ್ಟೆ ಖರೀದಿಯಲ್ಲಿಯ ಕೆಲವು ಸೂಕ್ಷ್ಮ ಅಂಶಗಳ ಬಗ್ಗೆ ಹೇಳುತ್ತಿದ್ದೇವೆ. ಬಹುತೇಕ ಎಲ್ಲರೂ ಈ ಬಗ್ಗೆ ಮಾತನಾಡಿರುತ್ತಾರೆ. ಆದರೆ ಹೆಚ್ಚಿನ ಜನಕ್ಕೆ ಇದರ ಬಗ್ಗೆ ತಿಳಿದಿರಲ್ಲ.
![](https://samagrasuddi.co.in/wp-content/uploads/2024/03/image-7.jpeg)
ಬಟ್ಟೆ ಖರೀದಿ ವೇಳೆ ಶರ್ಟ್ ಗಳ ಕಾಲರ್ ಮೇಲೆ ಸೈಜ್ ನಮೂದು ಮಾಡಲಾಗಿರುತ್ತದೆ. XL, XXL, L ಎಂಬ ಪದಗಳನ್ನು ನೋಡಿರುತ್ತವೆ. ಇವುಗಳ ಆಧಾರದ ಮೇಲೆಯೇ ಬಟ್ಟೆ ಖರೀದಿ ಮಾಡಲಾಗುತ್ತದೆ. ಬೇರೆಯವರಿಗೆ ಬಟ್ಟೆ ಖರೀದಿಸುವ ವೇಳೆ XL, XXL, L ಆಧಾರದ ಮೇಲೆ ಬಟ್ಟೆ ಖರೀದಿ ನಡೆಯುತ್ತದೆ. ಆದರೆ ಈ ಪದದಲ್ಲಿರುವ X ಅಕ್ಷರದ ಅರ್ಥ ನಮಗೆ ತಿಳಿದಿದೆಯಾ?
ಈ X ಇಂಗ್ಲಿಷ್ ಪದದ ವಿಶೇಷ ಅಕ್ಷರದ ಅರ್ಥವೇನು ಎಂದು ನೋಡೋಣ ಬನ್ನಿ. ಏಕೆಂದರೆ ನೀವು ಈ ಪ್ರಶ್ನೆಯನ್ನು ಕೇಳಿದರೆ, ಹೆಚ್ಚಿನ ಜನರಿಗೆ ಉತ್ತರ ಗೊತ್ತಿರಲ್ಲ.
![](https://samagrasuddi.co.in/wp-content/uploads/2024/03/image-10.jpeg)
ವಾಸ್ತವವಾಗಿ, ‘X’ ಎಂದರೆ ಎಕ್ಸ್‌ಟ್ರಾ ಮತ್ತು ‘L’ ಎಂದರೆ ದೊಡ್ಡದಾದ (Long) ಬಟ್ಟೆ ಗಾತ್ರಗಳು XL, XXL. ಆದ್ದರಿಂದ, XL ಎಂದರೆ, ಎಕ್ಸ್ಟ್ರಾ ಲಾರ್ಜ್. ಎಕ್ಸ್‌ಎಕ್ಸ್‌ಎಲ್ ಎಂದರೆ ಎಕ್ಸ್‌ಟ್ರಾ ಎಕ್ಸ್‌ಟ್ರಾ ಲಾರ್ಜ್. ಅಂದರೆ, ಈ X ಅನ್ನು ಗಾತ್ರದ ಶ್ರೇಣಿಯನ್ನು ಸೂಚಿಸಲು ಬಳಸಲಾಗುತ್ತದೆ. ಎಕ್ಸ್ ಎಂಬುವುದು ಹೆಚ್ಚು ಎಂಬುದನ್ನು ಸೂಚಿಸುತ್ತದೆ.
ಸಾಮಾನ್ಯವಾಗಿ XL ಗಾತ್ರದ ಶರ್ಟ್ ಗಾತ್ರವು 42 ಇಂಚುಗಳಿಂದ 44 ಇಂಚುಗಳವರೆಗೆ ಇರುತ್ತವೆ. ಅಂತೆಯೇ, XXL ಶರ್ಟ್‌ಗಳು ಅಥವಾ ಬಟ್ಟೆ 44 ಇಂಚುಗಳಿಂದ 46 ಇಂಚುಗಳಷ್ಟಿರುತ್ತದೆ. ನಿಮ್ಮ ಶರ್ಟ್ ಸೈಜ್ ನಿಮಗೆ ತಿಳಿದಿದ್ದರೆ ನೇರವಾಗಿ ಖರೀದಿಸಬಹುದು. ಇಲ್ಲವಾದ್ರೆ ಎಲ್ಲವನ್ನೂ ಟ್ರಯಲ್ ಮಾಡಬೇಕಾಗುತ್ತದೆ. ಆದರೆ ಯಾವುದೇ ಬಟ್ಟೆ ಖರೀದಿ ಮುನ್ನ ತಡವಾದ್ರು ಒಮ್ಮೆ ಟ್ರಯಲ್ ಮಾಡಿ ಖರೀದಿಸಬೇಕು. ಕೆಲವೊಮ್ಮೆ ಫಿಟ್ಟಿಂಗ್ನಲ್ಲಿ ಸಮಸ್ಯೆ ಉಂಟಾಗಬಹುದು.
ಅದೇ ರೀತಿ ಬಟ್ಟೆಗಳಲ್ಲಿ XS, SM ಮತ್ತು L ಸಹ ಗಾತ್ರಗಳಿವೆ. ಚಿಕ್ಕದು, ಮಧ್ಯಮ ಚಿಕ್ಕದು, ಮಧ್ಯಮ ಮತ್ತು ದೊಡ್ಡದು ಎಂಬ ಸೂಚನೆಯಲ್ಲಿ XS, SM ಮತ್ತು L ಹಾಕಲಾಗಿರುತ್ತದೆ.
![](https://samagrasuddi.co.in/wp-content/uploads/2024/03/image-11.jpeg)
ಇನ್ನು ಒಂದೊಂದು ಕಂಪನಿಗಳ X, XL, XXL, L, S, XS, M ಬಟ್ಟೆಗಳು ಒಂದು ನಿರ್ದಿಷ್ಟ ಸೈಜ್ ಹೊಂದಿರುತ್ತವೆ. ಹಾಗಾಗಿ ಬೇರೆ ಬೇರೆ ಬ್ರಾಂಡ್ ಬಟ್ಟೆಗಲ್ಲಿ ಸೈಜ್ ಕೊಂಚ ಭಿನ್ನವಾಗಿರುತ್ತದೆ. ಆದ್ದರಿಂದ ಬಟ್ಟೆ ಖರೀದಿ ವೇಳೆ ಸೈಜ್ ಮುಖ್ಯವಾಗಿ ಗಮನಿಸಬೇಕಾಗುತ್ತದೆ.
![](https://samagrasuddi.co.in/wp-content/uploads/2024/03/image-12.jpeg)
ಬಟ್ಟೆ ಖರೀದಿ ಮಾಡುವ ವೇಳೆ ಎಲ್ಲರೂ ಬಹುತೇಕ ಗೊಂದಲಕ್ಕೆ ಒಳಗಾಗುತ್ತಾರೆ. ಬಣ್ಣ, ಸೈಜ್, ಕ್ವಾಲಿಟಿ, ಬೆಲೆ ಎಲ್ಲಾ ಅಂಶಗಳು ಬಟ್ಟೆ ಖರೀದಿ ವೇಳೆ ಪರಿಗಣನೆಗೆ ಬರುತ್ತವೆ..
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1