Baby Girl rescued: ಕೋಲ್ಕತ್ತಾದ ನೊನಾದಂಗದ ರೈಲ್ ಕಾಲೋನಿಯ ನಿವಾಸಿ ರೂಪಾಲಿ ಎಂಬಾಕೆ ತನ್ನ ಇನ್ನೂ 1 ತಿಂಗಳು ತುಂಬದ ನವಜಾತ ಶಿಶುವನ್ನು ಬೇರೊಬ್ಬ ಮಹಿಳೆಗೆ ಮಾರಾಟ ಮಾಡಿದ್ದಾಳೆ.

ನವದೆಹಲಿ: ಕೋಲ್ಕತ್ತಾದಲ್ಲಿ ತನ್ನ ನವಜಾತ ಹೆಣ್ಣು ಮಗುವನ್ನು ಬೇರೊಬ್ಬ ಮಹಿಳೆಗೆ ಮಾರಾಟ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ. ಆರೋಪಿ ತಾಯಿ ರೂಪಾಲಿ ಮೊಂಡಲ್ ತನ್ನ 21 ದಿನದ ಹೆಣ್ಣು ಮಗುವನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೋಲ್ಕತ್ತಾದ ನೊನಾದಂಗದ ರೈಲ್ ಕಾಲೋನಿಯ ನಿವಾಸಿ ರೂಪಾಲಿ ಎಂಬಾಕೆ ತನ್ನ ಇನ್ನೂ 1 ತಿಂಗಳು ತುಂಬದ ನವಜಾತ ಶಿಶುವನ್ನು ಬೇರೊಬ್ಬ ಮಹಿಳೆಗೆ ಮಾರಾಟ ಮಾಡಿದ್ದಾಳೆಂದು ಮಾಹಿತಿ ಪಡೆದ ಆನಂದಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಆಕೆಯನ್ನು ವಿಚಾರಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಮೂಲಗಳ ಪ್ರಕಾರ, ನವಜಾತ ಶಿಶು ಮಾರಾಟದ ಬಗ್ಗೆ ಆರೋಪಿ ತಾಯಿಯನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಆದರೆ ಆಕೆ ಅಧಿಕಾರಿಗಳಿಗೆ ಸೂಕ್ತ ಉತ್ತರ ನೀಡಿಲ್ಲ. ಹೀಗಾಗಿ ಆಕೆಯನ್ನು ಸೋಮವಾರ(ಜೈಲು 31) ಬಂಧಿಸಿದ್ದರು.
ಬಳಿಕ ತನ್ನ ಮಗುವನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಪ್ರಕರಣ ಸಂಬಂಧ ಪೊಲೀಸರು ರೂಪಾ ದಾಸ್ ಮತ್ತು ಸ್ವಪ್ನಾ ಸರ್ದಾರ್ ಎಂಬ ಇನ್ನಿಬ್ಬರು ಮಹಿಳೆಯರನ್ನು ಬಂಧಿಸಿದರು. ಆರೋಪಿ ಮಹಿಳೆ ರೂಪಾಲಿಯವರ ಪಕ್ಕದ ಮನೆಯವರಾದ ಪ್ರತಿಮಾ ಭುವಿನ್ಯಾ ಎಂಬುವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಬಂಧಿತ ಆರೋಪಿಗಳ ವಿರುದ್ಧ ಸೆಕ್ಷನ್ 317 (abandoning child), 370 (purchasing, disposing of person), 372 (selling minor), ಮತ್ತು 120 ಬಿ (criminal conspiracy) ಇದರ ಜೊತೆಗೆ ಬಾಲಾಪರಾಧಿ ನ್ಯಾಯದ ಅನ್ವಯವಾಗುವ ನಿಬಂಧನೆಗಳಡಿಯ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ (Care & Protection of Children).
ಕಠಿಣ ವಿಚಾರಣೆಯ ನಂತರ ಬಂಧಿತ ಆರೋಪಿಗಳು ಮಿಡ್ನಾಪುರದ ಕಲ್ಯಾಣಿ ಗುಹಾ ಎಂಬ ಮಹಿಳೆಯ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಅವರನ್ನು ಪರ್ನರ್ಶ್ರೀ ಪೊಲೀಸ್ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ಕಲ್ಯಾಣಿ ಗುಹಾರಿಗೆ ಮದುವೆಯಾಗಿ 15 ವರ್ಷಗಳಾದರೂ ಮಕ್ಕಳಿಲ್ಲದ ಕಾರಣ ಅವರು ನವಜಾತ ಶಿಶುವನ್ನು 4 ಲಕ್ಷ ರೂ. ಕೊಟ್ಟು ಖರೀದಿಸಿದ್ದರೆಂದು ತಿಳಿದುಬಂದಿದೆ. ಅಪ್ರಾಪ್ತ ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಶಿಶುಪಾಲನಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.