ಕೆಪಿಎಸ್‌ಸಿ ಇಂದ 90 HK, 296 RPC ವೃಂದದ ಭೂಮಾಪಕರ ಹುದ್ದೆಗೆ ಅಧಿಸೂಚನೆ: ಅರ್ಜಿ ಆಹ್ವಾನ.

  • ಕೆಪಿಎಸ್‌ಸಿ ಇಂದ ಭೂಮಾಪಕರ ನೇಮಕ.
  • ಹುದ್ದೆಗಳ ಸಂಖ್ಯೆ ಹೆಚ್ಚಿಸಿ, ಪರಿಷ್ಕೃತ ಅಧಿಸೂಚನೆ.
  • 190 HK ಮತ್ತು 560 RPC ವೃಂದದ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ.
  • ಹೊಸದಾಗಿ ಅರ್ಜಿ ಸಲ್ಲಿಸಲು ದಿನಾಂಕಗಳು ಇಲ್ಲಿವೆ.

ಆಯೋಗವು 2023-24ನೇ ಸಾಲಿನ ಗ್ರೂಪ್-ಸಿ ವೃಂದದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ “ಭೂಮಾಪಕರು” ಹುದ್ದೆಗಳಿಗೆ ನೇಮಕ ಸಂಬಂಧ, ಇದೀಗ ಹೆಚ್ಚುವರಿ ಹುದ್ದೆಗಳನ್ನು ಸದರಿ ಇಲಾಖೆ ಸೇರ್ಪಡೆ ಮಾಡಿಕೊಳ್ಳಲು ಪರಿಷ್ಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಹಾಗೂ ಸರ್ಕಾರದ ಸೆಪ್ಟೆಂಬರ್ ತಿಂಗಳ 3 ವರ್ಷಗಳ ವಯಸ್ಸಿನ ಸಡಿಲಿಕೆ ನಿಯಮದ ಅದೇಶವನ್ನು ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಈ ಹಿಂದೆ ಉಳಿಕೆ ಮೂಲ ವೃಂದದ-264 ಮತ್ತು ಹೈದ್ರಾಬಾದ್- ಕರ್ನಾಟಕ ಸ್ಥಳೀಯ ವೃಂದದ 100 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಭೂಮಾಪಕರು ಅಧಿಸೂಚನೆಯನ್ನು ದಿನಾಂಕ 29-02-2024 ರಲ್ಲಿ ಹೊರಡಿಸಿ, ಅರ್ಜಿ ಆಹ್ವಾನಿಸಿತ್ತು. ಆದರೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ದಿನಾಂಕ 06-07-2024ರಂದು ನೇರ ನೇಮಕಾತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿ, ಹೆಚ್ಚುವರಿಯಾಗಿ ಹೈದೆರಾಬಾದ್ ಕರ್ನಾಟಕ ವೃಂದಕ್ಕೆ 90 ಹುದ್ದೆಗಳನ್ನು, ಉಳಿಕೆ ಮೂಲ ವೃಂದಕ್ಕೆ 296 ಹುದ್ದೆಗಳನ್ನು ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ದೃಢೀಕರಿಸಿ ಸಲ್ಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಈಗ ಪರಿಷ್ಕೃತ ಅಧಿಸೂಚನೆಯೊಂದಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಲಾಗಿದೆ. ಈಗ ಕೆಪಿಎಸ್‌ಸಿ ಒಟ್ಟಾರೆ 190 HK ಮತ್ತು 560 RPC ವೃಂದದ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯನ್ನು ಒಟ್ಟಿಗೆ ನಡೆಸಲಿದ್ದು, ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ನಂತರದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಜತೆಗೆ ದಿನಾಂಕ 10-09-2024ರಲ್ಲಿ ಗರಿಷ್ಠ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಗ್ರೂಪ್-ಸಿ ವೃಂದದ “ಭೂಮಾಪಕರ” ಹುದ್ದೆಗಳಿಗೆ “ಸಾಮಾನ್ಯ ಅರ್ಹತೆಯವರಿಗೆ -38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ರವರಿಗೆ -41 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ರವರಿಗೆ -43 ವರ್ಷಗಳನ್ನು ವಯಸ್ಸಿನ ಗರಿಷ್ಠ ಮಿತಿಯನ್ನು ಅನುಸರಿಸಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ನೇಮಕಾತಿ ಪ್ರಾಧಿಕಾರಕರ್ನಾಟಕ ಲೋಕಸೇವಾ ಆಯೋಗ
ಉದ್ಯೋಗ ಇಲಾಖೆಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ಹುದ್ದೆ ಹೆಸರುಭೂಮಾಪಕರು
ಹೈದೆರಾಬಾದ್ ಕರ್ನಾಟಕ ವೃಂದದ ಹುದ್ದೆಗಳ ಸಂಖ್ಯೆ90
ಉಳಿಕೆ ಮೂಲ ವೃಂದದ ಹುದ್ದೆಗಳ ಸಂಖ್ಯೆ296
ವೇತನ ಶ್ರೇಣಿRs.23,500- 47,650
ಭೂಮಾಪಕರ ನೇಮಕಾತಿ ವಿಧಾನಸ್ಪರ್ಧಾತ್ಮಕ ಪರೀಕ್ಷೆ.

ಭೂಮಾಪಕರು ಹುದ್ದೆಗೆ ಶೈಕ್ಷಣಿಕ ವಿದ್ಯಾರ್ಹತೆ

ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿಇ(ಸಿವಿಲ್) ಅಥವಾ ಬಿ.ಟೆಕ್ (ಸಿವಿಲ್) ಅಥವಾ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮದಲ್ಲಿ ಉತ್ತೀರ್ಣರಾಗಿರಬೇಕು. ಅಥವಾ
ಪದವಿ ಪೂರ್ವ ಶಿಕ್ಷಣ (ಪಿಯುಸಿ) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸಿದ 12ನೇ ತರಗತಿ (ಸಿಬಿಎಸ್‌ಇ ಅಥವಾ ಐಸಿಎಸ್‌ಇ) ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ ಶೇಕಡ.60 ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅಥವಾ
ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ‘ಲ್ಯಾಂಡ್ ಅಂಡ್ ಸಿಟಿ ಸರ್ವೆ’ಯ ಪದವಿ ಪೂರ್ವ ಡಿಪ್ಲೊಮ ಪಾಸ್. ಅಥವಾ
ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ‘ಐಟಿಐ ಇನ್ ಸರ್ವೆ ಟ್ರೇಡ್’ ನಲ್ಲಿ ಪಾಸ್ ಆಗಿರಬೇಕು.

ಭೂಮಾಪಕರು ಹುದ್ದೆಗೆ ವಯಸ್ಸಿನ ಅರ್ಹತೆಗಳು

  • ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.
  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 41 ವರ್ಷ.
  • ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ.

ಅಪ್ಲಿಕೇಶನ್‌ ಶುಲ್ಕ ವಿವರ

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.600.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಭೂಮಾಪಕರ ನೇಮಕಾತಿ ಸಂಬಂಧಿತ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ25-11-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ09-12-2024
ಅಪ್ಲಿಕೇಶನ್ ಸಲ್ಲಿಸುವ ವಿಧಾನ

ವೆಬ್‌ಸೈಟ್‌ www.kpsc.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಮೊದಲ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ವಿವರ, ಶೈಕ್ಷಣಿಕ ಅರ್ಹತೆ ವಿವರ ಮತ್ತು ಇತರೆ ವಿವರಗಳನ್ನು ಭರ್ತಿ ಮಾಡಿ.
ಎರಡನೇ ಹಂತವಾಗಿ ಇಲಾಖೆ ಕೇಳಲಾದ ಇತರೆ ವಿವರ ನೀಡಿ ಅಪ್ಲಿಕೇಶನ್‌ ಅನ್ನು ಸಬ್‌ಮಿಟ್‌ ಮಾಡಿ.
ಮೂರನೇ ಹಂತದಲ್ಲಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು.

ಈ ಹಿಂದೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ನಂತರದಲ್ಲಿ ಪ್ರಕಟಿಸಲಾಗುವುದು.

job description

titleಕರ್ನಾಟಕ ಭೂಮಾಪಕರು
descriptionಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಉದ್ಯೋಗ
dateposted2024-11-23
validthrough2024-12-09
employmenttypeFULL_TIME
industryಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಉದ್ಯೋಗ.
salaryINR 23500 to 47650 /month

skills and education

skills
qualificationsಸಿವಿಲ್ ಅಥವಾ ಸರ್ವೆ ವಿಭಾಗದಲ್ಲಿ ಬಿಇ, ಡಿಪ್ಲೊಮ, ಐಟಿಐ ಶಿಕ್ಷಣ. ಪಿಯುಸಿ ಪಾಸ್.
experiencerequirements0 Years

hiringorganization

organization nameಕರ್ನಾಟಕ ಲೋಕಸೇವಾ ಆಯೋಗ
Website URLhttps://www.kpsc.kar.nic.in/
organization logo

joblocation

streetaddressಕರ್ನಾಟಕದಾದ್ಯಂತ ನೇಮಕಾತಿ.
addresslocalityಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಡಿ ನೇಮಕ.
addressregionಕರ್ನಾಟಕ
postalcode560001
addresscountryIND

Source : https://vijaykarnataka.com/jobs/govt-jobs/kpsc-released-revised-notification-for-land-surveyor-recruitment-2024-apply-online-now/articleshow/115591043.cms

Leave a Reply

Your email address will not be published. Required fields are marked *