KPSC Recruitment: ಜ್ಯೂನಿಯರ್​ ಪ್ರೋಗ್ರಾಮರ್​ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

KPSC Job Alert: ಈ ಹುದ್ದೆಗಳನ್ನು ಹೊರಗುತ್ತಿಗೆ ಅವಧಿ ಮೇರೆಗೆ ಆಯ್ಕೆ ಮಾಡಲಾಗುತ್ತಿದೆ.

ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜ್ಯೂನಿಯರ್​ ಪ್ರೋಗ್ರಾಮರ್​, ಡಾಟಾಬೇಸ್​ ಆಡ್ಮಿನ್​ ನೆಟ್ವರ್ಕ್​ ಆಡ್ಮಿನ್​ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹಾರ್ಡ್​ವೇರ್​​ ಟೆಕ್ನಿಷಿಯನ್​ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ.

ಹುದ್ದೆಗಳ ವಿವರ: ಜೂನಿಯರ್​ ಪ್ರೋಗ್ರಾಮರ್​-1, ಡಾಟಾ ಬೇಸ್​ ಆಡ್ಮಿನ್​-1, ನೆಟ್​ವರ್ಕ್​ ಆಡ್ಮಿನ್​-1, ಹಾರ್ಡ್​ವೇರ್​ ಟೆಕ್ನಿಷಿಯನ್​-1 ಸೇರಿದಂತೆ ಒಟ್ಟು 4 ಹುದ್ದೆಗಳು.

ವಿದ್ಯಾರ್ಹತೆ: ಕಂಪ್ಯೂಟರ್​ ಸೈನ್ಸ್​​ ಅಥವಾ ಮಾಹಿತಿ ತಂತ್ರಜ್ಞಾನ​, ಇ &​ ಸಿನಲ್ಲಿ ಇಂಜಿನಿಯರಿಂಗ್​ ಪದವಿ ಅಥವಾ ಎಂಎಸ್ಸಿಯಲ್ಲಿ ಸಿಎಸ್​​, ಐಟಿ, ಐಎಸ್ ಐಚ್ಚಿಕ ವಿಷಯಗಳಲ್ಲಿ​​ ಪದವಿ. ಕೆಪಿಎಸ್​ಸಿ ಅಧಿಸೂಚನೆ

ಆಯ್ಕೆ ಹೇಗೆ?: ಅಭ್ಯರ್ಥಿಗಳನ್ನು ಕಿರು ಪರೀಕ್ಷೆ ನಡೆಸಿದ ಬಳಿಕ ಶಾರ್ಟ್​ಲಿಸ್ಟ್ ಮಾಡಿ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದಲ್ಲಿ ಎನ್​ಐಸಿ ಸಂಸ್ಥೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಇರಲಿದೆ. ಅಭ್ಯರ್ಥಿಗಳನ್ನು 3 ವರ್ಷದ ಅವಧಿಗೆ ಗುತ್ತಿಗೆ ಆಧಾರದಡಿ ಆಯ್ಕೆ ಮಾಡಲಾಗುತ್ತದೆ. 1 ವರ್ಷದ ನಂತರ ಕಾರ್ಯದಕ್ಷತೆ ಪರಿಶೀಲಿಸಿ ನಂತರದ ಅವಧಿಯ ಬಗ್ಗೆ ನಿರ್ಧರಿಸಲಾಗುತ್ತದೆ. ಮೊದಲ ಮೂರು ತಿಂಗಳು ಪ್ರೊಬೇಷನರಿ ಅವಧಿ ಇರಲಿದೆ. ಕೆಪಿಎಸ್​ಸಿ ನಿಯಮದ ಅನುಸಾರ ವೇತನ ಮತ್ತು ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ನಿಗದಿತ ವಿದ್ಯಾರ್ಹತೆ ಮತ್ತು ಅಗತ್ಯ ಸೇವಾನುಭವದ ದಾಖಲೆ, ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿ ಕುರಿತ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 7 ದಿನಗಳೊಳಗಾಗಿ ಈ ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ: ಸುರಳ್ಕರ್​ ವಿಕಾಸ್​ ಕಿಶೋರ್​, ಭಾ.ಆ.ಸೇ, ಕಾರ್ಯದರ್ಶಿಗಳು, ಕರ್ನಾಟಕ ಲೋಕ ಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001. ಜುಲೈ 24ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 31 ಡೆಯ ದಿನಾಂಕ.

Source : https://m.dailyhunt.in/news/india/kannada/etvbhar9348944527258-epaper-etvbhkn/pu+exam+dvitiya+piyusi+puraka+parikshe+2+velaapatti+prakata+vidyaarthigalige+mattondu+avakaasha-newsid-n522764436?listname=newspaperLanding&topic=homenews&index=0&topicIndex=0&mode=pwa&action=click

Leave a Reply

Your email address will not be published. Required fields are marked *