ಪಾಕಿಸ್ತಾನ ನಮ್ಮಆಂತರಿಕ ವಿಚಾರದಲ್ಲಿ ಬೆರಳು ತೋರಿಸುವ ದುಸ್ಸಾಹಸ ಮಾಡದಂತ ಪಾಠ ಕಲಿಸಬೇಕಿತ್ತು : ಕೃಷ್ಣ ಭೈರೇಗೌಡ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 12 : ನಾವು ಯುದ್ಧಕ್ಕೆ ಹೋದಮೇಲೆ ತಾರ್ಕಿಕ ಅಂತ್ಯ ಸಿಗಬೇಕು ಅದನ್ನೆಲ್ಲ ಲೆಕ್ಕ ಹಾಕಿ ಯುದ್ಧಕ್ಕೆ ಹೋಗಬೇಕು ಅಮೆರಿಕಾ ಹೇಳಿದ ಕೂಡಲೇ ನಾವು ಯುದ್ಧವನ್ನು ಹಿಂತೆಗೆದರೆ ಹೇಗೆ? ನಮ್ಮ ಉದ್ದೇಶ ಈಡೇರಿದ್ಯಾ ಎಂಬುದು ನನ್ನ ಮೊದಲ ಪ್ರಶ್ನೆ? ಇದು ಭಾರತದ ನಾಗರೀಕರ ಎಲ್ಲರ ಮನಸ್ಸಿನಲ್ಲಿಯೂ ಉದ್ಭವವಾಗುವ ಪ್ರಶ್ನೆ ಇದಕ್ಕೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ಭಾರತ ಪಾಕ್ ನಡುವೆ ಕದನ ವಿರಾಮ ಹಿನ್ನೆಲೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿದ ಅವರನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪಾಕ್ ಭಾರತ
ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ ಆದರೆ ಸಾರ್ವಜನಿಕ ವಲಯದಲ್ಲಿ ಒಂದು ಪ್ರಶ್ನೆ ತಲೆಯೆತ್ತಿದೆ ಮೊದಲು
ನಾವು ಎಲ್ಲಾ ವಿಷಯವನ್ನು ಅವಲೋಕಿಸಿ ಯುದ್ಧ ಮಾಡಬೇಕು ಆರಂಭ ಮಾಡಿದ ಮೇಲೆ ಅವರಿಗೆ ಪಾಠ
ಕಲಿಸಬೇಕಾಗಿರುವುದು ನಮ್ಮ ಗುರಿ ಆದರೆ ನಿಜವಾಗಿಯೂ ಅವರಿಗೆ ಪಾಠ ಕಳಿಸಿದ್ದೀವಾ ಎಂಬುದು ನನ್ನ ಪ್ರಶ್ನೆ ಭಾರತಕ್ಕೆ ನಾವು
ಪಾಠ ಕಲಿಸಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಾರೆ ಅವರಿಗೆ ನಾವು ಪಾಠ ಕಲಿಸಿದ್ದೀವಿ ಎಂದು ಹೇಳಿಕೊಳ್ತೀವಿ ಪಾಕಿಸ್ತಾನ ನಮ್ಮ
ಆಂತರಿಕ ವಿಚಾರದಲ್ಲಿ ಬೆರಳು ತೋರಿಸುವ ದುಸ್ಸಾಹಸ ಮಾಡದಂತ ಪಾಠ ಕಲಿಸಬೇಕಿತ್ತು ಎಂದು ಕೇಂದ್ರ ಸರ್ಕಾರವನ್ನು
ಒತ್ತಾಯಿಸಿದ್ದಾರೆ.

1971ರಲ್ಲಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಇದೇ ರೀತಿ ತೊಂದರೆ ಕೊಟ್ಟಿತ್ತು ಅಂದು ಇಂದಿರಾಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ
ಮಾಡಿದ್ದಲ್ಲದೇ,ಪಾಕಿಸ್ತಾನವನ್ನೇ ಇಬ್ಬಾಗ ಮಾಡಿದ್ದರು ಬಳಿಕ ಸಾವಿರಾರು ಸೈನಿಕರು ಶರಣಾಗತಿಯಾಗಿದ್ದರು ಪಾಕಿಸ್ತಾನ ನಾವು
ಸೋತಿದ್ದೇವೆ ಎನ್ನುವ ಮಟ್ಟಕ್ಕೆ ಇಂದಿರಾಗಾಂಧಿ ಯುದ್ಧ ಮಾಡಿದ್ದರುಕಾಶ್ಮೀರ ನಮ್ಮ ಆಂತರಿಕ ವಿಷಯ ಎಂದು ಪಾಕಿಸ್ತಾನವು
ಒಪ್ಪಿಕೊಂಡಿದೆ ಆದರೆ ಅಮೆರಿಕ ಈಗ ಮಧ್ಯಸ್ಥಿಕೆ ವಹಿಸುವುದು ಎಷ್ಟು ಸರಿ? ಹಾಗಾದ್ರೆ ನಾವು ಇಷ್ಟು ದಿನ ತೆಗೆದುಕೊಂಡ ನಿಲುವು
ಏನಾಯ್ತು? ಕಾಶ್ಮೀರ ಭಾರತದ ಆಂತರಿಕ ವಿಷಯವೇ? ಅಥವಾ ಅಂತರಾಷ್ಟ್ರೀಯ ವಿಷಯವೇ?ಈಗ ನಾವೇ ಎಲ್ಲೋ ಒಂದ್ ಕಡೆ
ಇದನ್ನ ಅಂತರಾಷ್ಟ್ರೀಯ ವಿಷಯ ಮಾಡ್ತಿದ್ದೀವಾ? ಅಂತರಾಷ್ಟ್ರೀಯ ವಿಷಯ ಮಾಡುವ ಮೂಲಕ ಎಲ್ಲೆಂದರಲ್ಲಿ ಮಾತಾಡಲು ನಾವೇ
ಅವಕಾಶ ಮಾಡಿಕೊಟ್ಟಂಗಾಗಿದೆಕಾಶ್ಮೀರದ ಬಗ್ಗೆ ಯಾರು ಬೇಕಾದರೂ ಮಾತಾಡಬಹುದು ಉಪದೇಶ ಕೊಡಬಹುದು ಇದರಿಂದ
ನಮಗೆ ನಷ್ಟವೇ ಆಗಲಿದೆ ಎಂದ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಪಾಕಿಸ್ತಾನಕ್ಕೆ ಶಾಶ್ವತ ಪಾಠ ಕಲಿಸಬೇಕೆಂಬ ಸಂಕಲ್ಪ ನಾವು ಮಾಡಿದ್ದೇವೆ ಕದನ ವಿರಾಮ ಮಾಡುವಾಗ ನಮ್ಮ ಉದ್ದೇಶ
ಈಡೇರಿದ್ಯಾ ಎಂಬುದನ್ನು ಕೇಂದ್ರ ಸರ್ಕಾರ ಉತ್ತರಿಸಬೇಕಿದೆ ಎರಡು ದೇಶಗಳು ಕದನ ವಿರಾಮವನ್ನು ಗೌರವಿಸುತ್ತಿವೆ ಕದನ
ವಿರಾಮಕ್ಕೆ ಮುನ್ನ ನಮ್ಮ ಗುರಿ ಈಡೇರಿದ್ಯಾ ಎಂಬುದು ಪ್ರಶ್ನೆಯಾಗಿ ಉಳಿದಿದೆ ನಾವು ಪಾಕಿಸ್ತಾನದವರು ಮಾತನಾಡಿಕೊಳ್ಳುವುದು
ಒಂದು ಭಾಗ ಬೇರೆ ದೇಶದವರು ಮಧ್ಯಸ್ಥಿಕೆ ವಹಿಸುವುದು ಇನ್ನೊಂದು ಭಾಗ ಟ್ರಂಪ್ ಹೇಳಿದ ಕೂಡಲೇ ನಾವು ಮಂಡಿ ಊರಿದಾಗ
ನಮ್ಮ ಸಾರ್ವಭೌಮ ಏನಾಯ್ತು? ಅವರು ಏನ್ ಹೆಡ್ ಮಾಸ್ಟರ್ ನಾವು ಸ್ಕೂಲ್ ಮಕ್ಕಳಾ? ಅವರು ಹೇಳಿದ ಕೂಡಲೇ ನಾವು ಎಸ್

ಸಾರ್ ಅಂತ ಒಪ್ಪಿಕೊಂಡ್ರೆ ಹೇಗೆ? ಗುರಿ ಈಡೇರಿದ ನಂತರ ಒಪ್ಪಿಕೊಂಡಿದ್ದರೆ ನಮ್ಮ ಸಹಮತವಿತ್ತು.ಪಾಕಿಸ್ತಾನ ಇನ್ನೊಮ್ಮೆ ನಮ್ಮ
ವಿಚಾರದಲ್ಲಿ ಕೈ ಹಾಕದ ರೀತಿ ಬುದ್ಧಿ ಕಲಿಸಿದ್ದೀವಾ? ಇದು ಬಹಳ ಪ್ರಮುಖ ಪ್ರಶ್ನೆಯಾಗಿದೆ ಎಂದ ಸಚಿವ ತಿಳಿಸಿದರು.

ಅಮೆರಿಕ ದೊಡ್ಡಣ್ಣ ಹೇಳಿದ ಕೂಡಲೇ ಜಿ ಹೂಜೂರ್ ಎಂಬುವುದು ಎಷ್ಟು ಸರಿ ಅವರು ಬೇರೆ ಕಾಶ್ಮೀರ ಮೀಡಿಯಷನ್ ಮಾಡ್ತೀವಿ
ಅಂತ ಹೇಳ್ತಿದ್ದಾರೆ ಹಾಗಾದ್ರೆ ಅದು ಕಾಶ್ಮೀರ ಇಂಟನ್ರ್ಯಾಷನಲ್ ವಿಷಯವಾದರೆ ಹೇಗೆ? ನಾವಾಗಿಯೇ ಇದು ಆಂತರಿಕ ವಿಷಯ
ನಿಮಗೆ ಯಾರಿಗೂ ಸಂಬಂಧವಿಲ್ಲ ಎಂದು ಹೇಳಿದ್ದೇವೆ ಈಗ ನಾವೇ ಅಂತಾರಾಷ್ಟ್ರೀಯ ವಿಚಾರವಾಗಿ ಚರ್ಚೆ ಮಾಡುವುದಾದರೆ,
ನಮ್ಮ ಸಾರ್ವಭೌಮ ಏನಾಯ್ತು ಇವೆಲ್ಲಾ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಉತ್ತರಿಸಬೇಕಿದೆ ಎಂದು ಕೃಷ್ಣ ಭೈರೇಗೌಡ
ಹೇಳಿದರು.

Leave a Reply

Your email address will not be published. Required fields are marked *