Krishna Janmashtami: ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ ಹೇಗೆ? ಜನ್ಮಾಷ್ಟಮಿ ಮಂತ್ರವೇನು?

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶ್ರೀ ಕೃಷ್ಣನು (Lord Krishna) ಮಥುರಾ ಪಟ್ಟಣದಲ್ಲಿ ಅಷ್ಟಮಿ ತಿಥಿ ಅಥವಾ ಶ್ರಾವಣ ಮಾಸದಲ್ಲಿ ದೇವಕಿ ಮತ್ತು ವಾಸುದೇವನ ಪುತ್ರನಾಗಿ ಜನಿಸಿದನು. ದೇವಕಿ ಮಥುರಾದ ರಾಕ್ಷಸ ರಾಜ ಕಂಸನ (Kamsa) ಸಹೋದರಿ. ಒಂದು ಭವಿಷ್ಯವಾಣಿಯ ಪ್ರಕಾರ, ಕಂಸನ ಪಾಪಗಳಿಗೆ ಶಿಕ್ಷೆಯಾಗುತ್ತದೆ ಮತ್ತು ದೇವಕಿಯ ಎಂಟನೆಯ ಮಗನಿಂದ ಕಂಸನು ಕೊಲ್ಲಲ್ಪಡುತ್ತಾನೆ ಎಂಬುದು ಅವನಿಗೆ ತಿಳಿಯುತ್ತದೆ. ಆದ್ದರಿಂದ, ಕಂಸನು ತನ್ನ ಸ್ವಂತ ಸಹೋದರಿ ಮತ್ತು ಅವಳ ಪತಿಯನ್ನು ಬಂಧಿಸಿದನು. ಭವಿಷ್ಯವಾಣಿಯು ನಿಜವಾಗುವ ಸಾಧ್ಯತೆಯನ್ನು ತೊಡೆದುಹಾಕಲು ಅವನು ದೇವಕಿ ವಾಸುದೇವರಿಗೆ ಮಗು ಜನಿಸಿದ ತಕ್ಷಣ ಮಕ್ಕಳನ್ನು ಕೊಲ್ಲಲು ಪ್ರಾರಂಭಿಸುತ್ತಾನೆ.

ದೇವಕಿಗೆ ಎಂಟನೆಯ ಮಗ ಜನಿಸಿದಾಗ, ಇಡೀ ಅರಮನೆಯು ಮಾಂತ್ರಿಕವಾಗಿ ಪ್ರಚೋದಿತವಾದ ಗಾಢ ನಿದ್ರೆಯಲ್ಲಿ ಮುಳುಗಿತು, ಮತ್ತು ವಾಸುದೇವನು ಮಧ್ಯರಾತ್ರಿಯಲ್ಲಿ ವೃಂದಾವನದಲ್ಲಿರುವ ಯಶೋಧ ಮತ್ತು ನಂದನನ ಮನೆಗೆ ಮಗುವನ್ನು ವರ್ಗಾಯಿಸುವ ಮೂಲಕ ಕಂಸನ ಕೋಪದಿಂದ ಮಗುವನ್ನು ಉಳಿಸುವಲ್ಲಿ ಯಶಸ್ವಿಯಾದನು. ಈ ಶಿಶುವು ಭಗವಾನ್ ವಿಷ್ಣುವಿನ ಅವತಾರವಾಗಿತ್ತು ಮತ್ತು ಅಂತಿಮವಾಗಿ ಕಂಸನನ್ನು ಕೊಂದ ಶ್ರೀ ಕೃಷ್ಣ ಎಂದು ಕರೆಯಲ್ಪಟ್ಟಿತು.

ಕೃಷ್ಣ ಜನ್ಮಾಷ್ಟಮಿ ಪೂಜೆ ವಿಧಾನ

  • ಜನ್ಮಾಷ್ಟಮಿ ದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿ ಮನೆಯ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ.
  • ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಬೆಳಗಿಸಿ.
  • ಎಲ್ಲಾ ದೇವಾನು ದೇವತೆಗಳ ಜಲಾಭಿಷೇಕವನ್ನು ಮಾಡಿ. ಈ ದಿನ, ಶ್ರೀ ಕೃಷ್ಣನ ಮಗುವಿನ ರೂಪವನ್ನು ಅಂದರೆ ಬಾಲ ಗೋಪಾಲನನ್ನು ಪೂಜಿಸಲಾಗುತ್ತದೆ.
  • ಈ ದಿನ ಬಾಲ ಗೋಪಾಲನನ್ನು ಉಯ್ಯಾಲೆಯಲ್ಲಿ ಕೂರಿಸಿ.
  • ನಿಮ್ಮ ಇಚ್ಛೆಯಂತೆ ಗೋಪಾಲನಿಗೆ ಲಡ್ಡು ಅರ್ಪಿಸಿ.
  • ಈ ದಿನದಂದು ರಾತ್ರಿಯ ಪೂಜೆಯು ಮುಖ್ಯವಾಗಿದೆ. ಏಕೆಂದರೆ ಭಗವಾನ್ ಶ್ರೀ ಕೃಷ್ಣ ರಾತ್ರಿಯಲ್ಲಿ ಜನಿಸಿದನು.
  • ರಾತ್ರಿ ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಾಡಿ. ಗೋಪಾಲನಿಗೆ ಬೆಣ್ಣೆ, ಕಲ್ಲು ಸಕ್ಕರೆ, ಹಣ್ಣುಗಳು, ಸಿಹಿತಿಂಡಿಗಳು ಮತ್ತು ಒಣ ಹಣ್ಣುಗಳನ್ನು ಅರ್ಪಿಸಿ.
  • ನೈವೇದ್ಯವನ್ನು ಅರ್ಪಿಸಿದ ನಂತರ ಗೋಪಾಲನಿಗೆ ಆರತಿಯನ್ನು ಮಾಡಬೇಕು.

​ಶ್ರೀಕೃಷ್ಣ ಜನ್ಮಾಷ್ಟಮಿ ಮಂತ್ರ

‘ಕೃಂ ಕೃಷ್ಣಾಯ ನಮಃ’ ‘ಓಂ ಶ್ರೀಂ ನಮಃ ಶ್ರೀ ಕೃಷ್ಣಾಯ ಪರಿಪೂರ್ಣತಮಾಯ ಸ್ವಾಹಾ’ ‘ಗೋಕುಲನಾಥಾಯ ನಮಃ’ ‘ಗೋವಲ್ಲಭಾಯ ಸ್ವಾಹಾ’ ‘ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಕೃಷ್ಣಾಯ ಗೋವಿಂದಾಯ ಗೋಪಿಜನ ವಲ್ಲಭಾಯ ಶ್ರೀಂ ಶ್ರೀಂ ಶ್ರೀಂ’.

Source : https://tv9kannada.com/spiritual/krishna-janmashtami-2024-how-to-worship-krishna-janmashtami-what-is-janmashtami-mantra-kannada-news-ayb-890162.html

Leave a Reply

Your email address will not be published. Required fields are marked *