ಕೃಷ್ಣ ಜನ್ಮಾಷ್ಟಮಿಯ ವಿಶೇಷತೆ : ದಿನಾಂಕ 16.08.2025 ಕೃಷ್ಣ ಜನ್ಮಾಷ್ಟಮಿಯನ್ನು ಭಾರತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಬಹಳ ಸಂತೋಷ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿ ಎಂಬ ಪದವು ಎರಡು ಪದಗಳಿಂದ ಕೂಡಿದೆ. ‘ಜನ್ಮ’ ಎಂದರೆ ಜನನ ಮತ್ತು ‘ಅಷ್ಟಮಿ’ ಎಂದರೆ ಎಂಟು ಮತ್ತು ಅದು ಭಾದ್ರಪದ ಮಾಸದ ಅಂಧಕಾರದ ಹದಿನೈದು ದಿನದ ಎಂಟನೆಯ ದಿನವಾಗಿದ್ದು ಭಗವಾನ್ ಕೃಷ್ಣನು ಜನಿಸಿದನು. ಜನಪ್ರಿಯ ಹಬ್ಬವನ್ನು ಗೋಕುಲಾಷ್ಟಮಿ ಮತ್ತು ಶ್ರೀ ಕೃಷ್ಣ ಜಯಂತಿ ಎಂದೂ ಕರೆಯುತ್ತಾರೆ. ಭಗವಾನ್ ಕೃಷ್ಣನ ಜನ್ಮ ಕ್ಷಣವನ್ನು ಗುರುತಿಸಲು ಮಧ್ಯರಾತ್ರಿಯ ಆಚರಣೆಗಳಿಗಾಗಿ ಶ್ರೀಕೃಷ್ಣನ ದೇವಾಲಯಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜುನಾಥ.ಕೆ.ಸಿ ಇಸ್ಕಾನ್ ಸಂಸ್ಥೆ. ಚಿತ್ರದುರ್ಗ ಜಿಲ್ಲೆ. ಪ್ರವಚಕರಾಗಿದ್ದು ಬಿ.ಇ ಮತ್ತು ಎಂ.ಬಿ.ಎ ಪದವಿದರರು. ಇವರು ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ಅತಿಥಿಗಳಾಗಿ ಆಗಮಿಸಿದ್ದರು, ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣನ ಜನ್ಮ ವೃತ್ತಾಂತವನ್ನು ವಿವರವಾಗಿ ವಿವರಿಸುವುದರ ಜೊತೆಗೆ ನಾಲ್ಕು ಯುಗಗಳಾದ ಕೃತ, ತ್ರೇತಾ, ದ್ವಾಪರ, ಕಲಿಯುಗಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಸಂಸ್ಥೆಯ ಪರವಾಗಿ ಇವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಎಸ್.ಎಂ.ಪೃಥ್ವೀಶ ಅವರು ಮಾತನಾಡುತ್ತಾ ಚಿಕ್ಕವಯಸ್ಸಿನಲ್ಲಿ ಮಕ್ಕಳಲ್ಲಿ ಸಂಸ್ಕಾರ ಕಲಿಸುವುದು ಶಾಲೆ ಹಾಗೂ ಕುಟುಂಬದ ಜವಬ್ದಾರಿಯಾಗಿರುತ್ತದೆ. ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜನೆ ಮಾಡುವುದರಿಂದ ಸಂಪ್ರದಾಯ ಸಂಸ್ಕೃತಿ ಬೆಳೆಸುವಲ್ಲಿ ಪೋಷಕರು ಸಹಕರಿಸಬೇಕು ಅಲ್ಲದೇ ಪ್ರತಿ ದಿನ ಪೋಷಕರು ರಾತ್ರಿ ಮಲಗುವ ಮುಂಚೆ ನೀತಿ ಕಥೆಗಳನ್ನು ಮಕ್ಕಳಿಗೆ ಹೇಳುವುದರ ಮೂಲಕ ಮಕ್ಕಳಲ್ಲಿ ಆಧ್ಯಾತ್ಮಿಕ ಮನೋಭಾವದ ಜೊತೆ ಸಂಸ್ಕಾರವಂತರಾಗಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ ತಿಪ್ಪೇಸ್ವಾಮಿ ಎನ್.ಜಿ ಅವರು ಮಾತನಾಡುತ್ತಾ ಕೃಷ್ಣನು ಜಗತ್ತನ್ನು ಸಲಹುವಾತನು. ಕಷ್ಟ ಕಾರ್ಪಣ್ಯಗಳ ನಿವಾರಕನು. ಈತನ ದಯೆ ಇದ್ದರೆ ಜಗತ್ತನ್ನೇ ಗೆಲ್ಲಬಹುದು ಶ್ರೀ ಕೃಷ್ಣನು ಗುರುವಾಗಿ, ಸ್ನೇಹಿತನಾಗಿ, ಧರ್ಮ ಪ್ರವರ್ತಕರಾಗಿ, ವಾಗ್ಮಿಯಾಗಿ ತಂತ್ರಜ್ಞಾನಿಯಾಗಿ ಇಡೀ ವಿಶ್ವಕ್ಕೆ ಭಗವದ್ಗೀತೆಯ ಸಾರಂಶವನ್ನು ತಿಳಿಸಿದವರು.
ಶ್ರೀ ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪುಟ್ಟ ಮಕ್ಕಳು ಬಣ್ಣ ಬಣ್ಣದ ಕೃಷ್ಣ ರಾಧೇಯ ವೇಷವನ್ನು ಧರಿಸಿ ನೃತ್ಯ ಮಾಡಿ ಮಕ್ಕಳನ್ನು ಪೋಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಐಸಿಎಸ್‌ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
Views: 11