ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ(ರಿ)
ದಿನಾಂಕ : 30-12-2025ರಂದು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ(ರಿ) ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ವತಿಯಿಂದ ಕುವೆಂಪುರವರ 122ನೇ ಜನ್ಮ ದಿನಾಚರಣೆಯ, ದತ್ತಿ ಉಪನ್ಯಾಸ, ವಿಶ್ವಮಾನವ ಪ್ರಶಸ್ತಿ ಪ್ರಧಾನ ಹಾಗೂ ಶಾಲಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮೊದಲಿಗೆ ಸಂಸ್ಥೆಯ ರೂವಾರಿಗಳಾದ ಹೆಚ್.ಜಲೀಲ್ ಸಾಬ್ ರವರು ಪ್ರಾಸ್ತಾವಿಕ ನುಡಿಗಳಲ್ಲಿ ವಿಶ್ವಮಾನವ ಸಂಸ್ಥೆಯ ಹುಟ್ಟಿಗೆ ಮೂಲ ಕಾರಣ ಹಾಗೂ ಪ್ರಸ್ತುತ ದಿನಮಾನದಲ್ಲಿ ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಸಹಕಾರಿಯಾಗಿರುವ ಅಂಶಗಳು ಹಾಗೂ ಸಂಸ್ಥೆ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ನೀಡುತ್ತಿರುವಂತಹ ಕೊಡುಗೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದ ಅತಿಥಿಗಳು ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ನ ಅಧ್ಯಕ್ಷರು ಹಾಗೂ ಗ್ರೇಡ್-1 ನಿವೃತ್ತ ಪ್ರಾಂಶುಪಾಲರಾದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರು ತಮ್ಮ ನುಡಿಗಳಲ್ಲಿ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯು ಕುವೆಂಪು ಮತ್ತು ಗಾಂಧೀಜಿಯವರ ತತ್ವಾದರ್ಶಗಳಿಂದ ರೂಪಿತಗೊಂಡು ನಡೆಯುತ್ತಿರುವ ಸಂಸ್ಥೆಯಾಗಿದ್ದು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸಿಕೊಡುವ ಮಹತ್ತರವಾದ ಕಾರ್ಯ ನಿರ್ವಹಿಸುತ್ತಿದೆ. ಅದಲ್ಲದೆ ಸುತ್ತಮುತ್ತಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಾಗೂ ಪೋಷಕರ ಪಾಲಿನ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಹಾಗೆಯೇ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ ಶ್ರೀ ನಿಸ್ಸಾರ್ ಅಹಮ್ಮದ್ ರವರು ಸಾಹಿತಿಗಳು ಹಾಗೂ ಉಪನ್ಯಾಸಕರು, ಹೊಸದುರ್ಗ ಇವರು ಈಗಿನ ವಿದ್ಯಾರ್ಥಿ ಜೀವನವೆಂಬುದು ನೀರಿನ ಮೇಲಿನ ಗುಳ್ಳೆಯ ಹಾಗೆ. ಇದನ್ನು ಅತ್ಯಂತ ಸೂಕ್ಷವಾಗಿ ಸಾಗಿದಾಗ ಮಾತ್ರ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ. ಇಲ್ಲವಾದರೆ ವಿದ್ಯಾರ್ಥಿ ಜೀವನ ಮುಂದಿನ ಭವಿಷ್ಯ ರೂಪಿಸಲು ನಿರ್ಧಾರಕ ಅಂಶವಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಈ ವರ್ಷದಿಂದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ(ರಿ) ಇವರ ವತಿಯಿಂದ ಮೊದಲನೇ ವಿಶ್ವಮಾನವ ಪ್ರಶಸ್ತಿಯನ್ನು ಕೊಡಮಾಡಲಾಯಿತು. ಈ ಪ್ರಶಸ್ತಿಯನ್ನು ಶ್ರೀ ಟಿ.ಎಂ.ವೀರೇಶ್, ಚಿತ್ರಕಲಾವಿದರು ಹಾಗೂ ಛಾಯಾಚಿತ್ರಕಾರರು, ಕ್ರೀಯೆಟಿವ್ ಆರ್ಟ್ಸ್ ಚಿತ್ರದುರ್ಗ ಇವರಿಗೆ ನೀಡಿ ಗೌರವಿಸಲಾಯಿತು.
ಉಳಿದಂತೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಟಿ.ಹೆಚ್.ಬುಡೇನ್ ಸಾಬ್ ಅಧ್ಯಕ್ಷರು. ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಉಪಾಧ್ಯಕ್ಷರಾದ ಶ್ರೀ ಚಳ್ಳಕೆರೆ ಯರಿಸ್ವಾಮಿ ಕಾರ್ಯದರ್ಶಿಗಳಾದ ಶ್ರೀ ಎಚ್.ಎಸ್.ಟಿ.ಸ್ವಾಮಿ, ಖಜಾಂಚಿಗಳಾದ ಶ್ರೀ ಕೆ.ವಿ.ನಾಗಲಿಂಗರೆಡ್ಡಿ ನಿರ್ದೇಶಕರಾದ ಡಾ.ಈ.ರುದ್ರಮುನಿ, ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯ ಸದಸ್ಯರುಗಳಾದ ಶ್ರೀ ಹೆಚ್.ಮೌಲಾನ್ ಸಾಬ್, ಶ್ರೀ ಮಹಮದ್ ಮಿರ್ಜಾ, ವಿಶ್ವಮಾನವ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಧಾ.ಹೆಚ್.ಆರ್. ವಿಶ್ವಮಾನವ ವಸತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಿ.ಆರ್.ಚನ್ನಬಸಪ್ಪ. ಶ್ರೀ ಬಿ.ಜಿ.ಶಿವರುದ್ರಯ್ಯ ರವರುಗಳು ಉಪಸ್ಥಿತರಿದ್ದರು.
Views: 57