
ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಏ.18) : ಸಿಬ್ಬಂದಿ ನೇಮಕಾತಿ ಆಯೋಗದವರು ಸಹಾಯಕ ಸೆಕ್ಷನ್ ಆಫೀಸರ್, ಸಹಾಯಕ ಲೆಕ್ಕ ಪರಿಶೋಧನಾ ಅಧಿಕಾರಿ, ಸಹಾಯಕ ಲೆಕ್ಕಪತ್ರ ಅಧಿಕಾರಿ, ಆದಾಯ ತೆರಿಗೆ ಕೇಂದ್ರ ಅಬಕಾರಿ ಮತ್ತು ಸಿಬಿಐಸಿಯಲ್ಲಿ ಇನ್ಸ್‍ಪೆಕ್ಟರ್ EDನಲ್ಲಿ AEO ಮತ್ತು CBI, NIA, NCBನಲ್ಲಿ ಸಬ್ ಇನ್‍ಸ್ಪೆಕ್ಟರ್, ಕಿರಿಯ ಅಂಕಿ ಅಂಶ ಅಧಿಕಾರಿ, NHRC ಸಂಶೋಧನಾ ಸಹಾಯಕ, ಹಿರಿಯ ಸೆಕ್ರೆಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಗುಮಾಸ್ತ, ಅಂಚೆ ಸಹಾಯಕ, ವಿಂಗಡಣೆ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಸಂಯೋಜಿತ ಪದವಿ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
ಮೇ 3 ಅರ್ಜಿ ಸಲ್ಲಿಸಲು ಕೊನೆಯ ದಿನ.
ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಪಡೆದಿರಬೇಕು. ವಯೋಮಿತಿ 18 ರಿಂದ 32 ವರ್ಷದೊಳಗಿರಬೇಕು. ಪರೀಕ್ಷೆಯ ಸಂಭವನೀಯ ದಿನಾಂಕ 2023ರ ಜುಲೈ ಮಾಹೆಯಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಸಿಬ್ಬಂದಿ ನೇಮಕಾತಿ ಆಯೋಗದ ವೆಬ್‍ಸೈಟ್ www.ssckkr.kar.nic.in/https://ssc.nic.in ವೆಬ್‍ಸೈಟ್ ಭೇಟಿ ನೀಡಬಹುದು ಹಾಗೂ ಸಿಬ್ಬಂದಿ ನೇಮಕಾತಿ ಆಯೋಗದ ದೂರವಾಣಿ ಸಂಖ್ಯೆ: 080-25502520, 9483862020 ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಚಿತ್ರದುರ್ಗ ದೂರವಾಣಿ ಸಂಖ್ಯೆ 7022459064, 9945587060 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
The post ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ : ಮೇ 3 ಕೊನೆಯ ದಿನ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/F3B9cjK
via IFTTT
Views: 0