ವಿಶ್ವದ ಅತಿದೊಡ್ಡ ಹಡಗುಯಾನ ಆರಂಭ.

ಮಿಯಾಮಿ: ಸುಮಾರು 10 ಸಾವಿರ ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ಹಡಗು ತನ್ನ ಮೊದಲ ಪ್ರಯಾಣವನ್ನು ಮಿಯಾಮಿ ಬಂದರಿನಿಂದ ಶನಿವಾರ ಆರಂಭಿಸಿದೆ.

1200 ಅಡಿ ಉದ್ದದ ಈ ಹಡಗು ದಕ್ಷಿಣ ಫ್ಲಾರಿಡಾದಿಂದ ಏಳು ದಿನಗಳ ಮೊದಲ ಯಾನ ಆರಂಭಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಾಯಲ್ ಕೆರಿಬಿಯನ್ ಗ್ರೂಪ್ ಅಧ್ಯಕ್ಷ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಜಾಸನ್ ಲಿಬರ್ಟಿ ಅವರು, ‘ವಿಶ್ವದ ಜನತೆಗೆ ಅತ್ಯುತ್ತಮವಾದ ಪಯಾಣದ ಅನುಭವಗಳನ್ನು ನೀಡಬೇಕೆಂಬುದು ಐವತ್ತಕ್ಕಿಂತ ಹೆಚ್ಚಿನ ವರ್ಷಗಳ ಕನಸಾಗಿತ್ತು’ ಎಂದು ಹೇಳಿದ್ದಾರೆ.

2022ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಈ ಹಡಗನ್ನು ಪ್ರದರ್ಶಿಸಲಾಯಿತು. ಒಂದೇ ದಿನದಲ್ಲಿ ಇದರ ಅತಿ ಹೆಚ್ಚಿನ ಬುಕಿಂಗ್‌ ಆಯಿತು. 53 ವರ್ಷಗಳ ಇತಿಹಾಸದಲ್ಲಿ ಇದು ದಾಖಲೆಯೇ ಸರಿ ಎಂದಿದ್ದಾರೆ.

ಈ ಹಡಗಿನ ಮೇಲಿನ 20 ಡೆಕ್‌ಗಳನ್ನು ಎಂಟು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಏಳು ಈಜುಕೊಳಗಳು, ಆರು ವಾಟರ್‌ಸ್ಲೈಡ್‌ಗಳು, ಐಸ್ ಸ್ಕೇಟಿಂಗ್ ರಿಂಕ್, ಥಿಯೇಟರ್ ಮತ್ತು 40ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು, ಬಾರ್‌ಗಳು ಮತ್ತು ಲಾಂಜ್‌ಗಳನ್ನು ಒಳಗೊಂಡಿರುವ ಈ ಹಡಗು, 2350 ಸಿಬ್ಬಂದಿ ಹಾಗೂ ಗರಿಷ್ಠ 7600 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *