ನ್ಯಾಯಾಲಯ ಸಂಕೀರ್ಣ ಸ್ಥಳಾಂತರ ವಿರೋಧ: ಹಾಲಿ ಜಾಗದಲ್ಲೇ ನಿರ್ಮಾಣಕ್ಕೆ ವಕೀಲರ ಆಗ್ರಹ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 18

ನ್ಯಾಯಾಲಯಗಳ ಸಂಕೀರ್ಣವನ್ನು ಆದಷ್ಟು ಶೀಘ್ರದಲ್ಲಿ ಹಾಲಿ ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿರುವ ಸ್ಥಳದಲ್ಲಿಯೇ ನಿರ್ಮಾಣ ಮಾಡಬೇಕು ಹಾಗೂ ಮುಂಬರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆಯಲ್ಲಿ ಜಿಲ್ಲಾವಾರು ಅಥವಾ ವಕೀಲರ ಸಂಖ್ಯೆಯನ್ನು ಆಧರಿಸಿ 2 ಜಿಲ್ಲೆಗಳಿಗೊಂದರಂತೆ ಕ್ಷೇತ್ರಗಳನ್ನಾಗಿ ವಿಂಗಡಿಸಿ ಜಿಲ್ಲೆಗಳಿಂದ ಪ್ರತಿನಿಧಿಸಲು ಅವಕಾಶ ಕಲ್ಪಿಸುವಂತೆ ತಿದ್ದುಪಡಿ ತರಬೇಕೆಂದು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಸಚಿವರ ರಾಜ್ಯ ವಕೀಲರ ಪರಿಷತ್ತಿನ್ನು ಆಗ್ರಹಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣವು ಚಿತ್ರದುರ್ಗ ನಗರದ ಹೃದಯಭಾಗದಲ್ಲಿ ಕಾರ್ಯ ಕಲಾಪಗಳನ್ನು ನಿರ್ವಹಿಸುತ್ತಿರುವುದು ಸರಿಯಷ್ಟೆ, ನ್ಯಾಯಾಲಯದ ಕೊಠಡಿಗಳು ತುಂಬಾ ಕಿರಿದವುಗಳಾಗಿದ್ದು, ವಕೀಲರ ಸಂಖ್ಯೆ ಕಕ್ಷೀದಾರರ ಹಿತದೃಷ್ಟಿ ಮತ್ತು ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದ್ದು, ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಲು ತುಂಬಾ ತೊಂದರೆಯಾಗಿದ್ದು, ಅನೇಕ ನ್ಯಾಯಾಲಯಗಳ ಕೊಠಡಿಗಳಲ್ಲಿ ವಕೀಲರುಗಳಿಗೆ 23071 ಇಲ್ಲದಂತಾಗಿರುತ್ತದೆ. ಮತ್ತು ಇತ್ತೀಚೆಗೆ ನ್ಯಾಯಾಲಯಗಳ ಸಂಕೀರ್ಣವನ್ನು ಚಿತ್ರದುರ್ಗ ನಗರದ ಹೊರ ಭಾಗದಲ್ಲಿರುವ ಅಮೃತ ಆಯರ್ವೇದಿಕ್ ಆಸ್ಪತ್ರೆಯ ಪಕ್ಕದಲ್ಲಿರುವ ಸಾರ್ವಜನಿಕ ರುದ್ರಭೂಮಿಯ (ಯಂಗಮ್ಮನಕಟ್ಟೆ) ಬಳಿ ತಗ್ಗು ಉಬ್ಬು ಹೊಂದಿರುವ ಗುಡ್ಡಗಾಡು ಪ್ರದೇಶವಾಗಿದ್ದು, ನ್ಯಾಯಾಲಯದ ಸಂಕೀರ್ಣವನ್ನು ನಿರ್ಮಾಣ ಮಾಡಲು ಯೋಗ್ಯವಾದ ಪ್ರದೇಶವಾಗಿರುವುದಿಲ್ಲ ಮತ್ತು ನಗರದ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಂದ ಸುಮಾರು 5-6 ಕಿ.ಮೀ.ಅಂತರದಲ್ಲಿರುವ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು ಇದು ಅವೈಜ್ಞಾನಿಕವಾಗಿದ್ದು ಮತ್ತು ಸಾಮಾನ್ಯ ಬಡ ವೃಂದದವರಿಗೂ ಸಹ ತುಂಬಾ ಅನಾನುಕೂಲವಾದ ಪ್ರದೇಶವಾಗಿರುತ್ತದೆ. ಸಂಕೀರ್ಣಗಳನ್ನು ಕಕ್ಷಿದಾರರಿಗೆ ಸಾರಿಗೆ ಸಂಪರ್ಕವಿಲ್ಲದೆ ತುಂಬಾ ತೊಂದರೆಯಾಗುತ್ತದೆ, ಅಲ್ಲದೆ ವಕೀಲರ ನಿರ್ಮಿಸಲು ತುಂಬಾ ಹಣಕಾಸಿನ ವೆಚ್ಚವನ್ನು ಭರಿಸಬೇಕಾಗುತ್ತದೆ. ಬಹು ಸಂಖೆಯ ಸಾರ್ವಜನಿಕರಿಗೂ ಸಹ ತುಂಬಾ ತೊಂದರೆಯಾಗುವುದರಿಂದ ಮತ್ತು ಸಾರ್ವಜನಿಕವಾಗಿ ಎಲ್ಲರೂ ಸಹ ವಿರೋಧ ಮಾಡುತ್ತಿದ್ದಾರೆ. ಈ ಎಲ್ಲಾ ದೃಷ್ಟಿಗಳಿಂದ ನ್ಯಾಯಾಲಯದ ಸಂಕೀರ್ಣವನ್ನು ಅತೀ ಶೀಘ್ರದಲ್ಲಿ ಹಾಲಿ ಇರುವ ಜಾಗದಲ್ಲಿಯೇ ನಿರ್ಮಾಣ ಮಾಡಲು ಜನಪ್ರತಿನಿಧಿಗಳ, ಜಿಲ್ಲಾಡಳಿತ ಹಾಗೂ ಸಚಿವರ ಗಮನಕ್ಕೆ ತರಲಾಗಿದೆ ಎಂದರು.

ಮುಂಬರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆಯಲ್ಲಿ ಜಿಲ್ಲಾವಾರು ಅಥವಾ ವಕೀಲರ ಸಂಖ್ಯೆಯನ್ನು ಆಧರಿಸಿ ಜಿಲ್ಲೆಗಳಿಗೊಂದರಂತೆ ಕ್ಷೇತ್ರಗಳನ್ನಾಗಿ ವಿಂಗಡಿಸಿ ಜಿಲ್ಲೆಗಳಿಂದ ಪ್ರತಿನಿಧಿಸಲು ಅವಕಾಶ ಕಲ್ಪಿಸುವಂತೆ ತಿದ್ದುಪಡಿ ತರಬೇಕೆಂದು ರಾಜ್ಯ ವಕೀಲರ ಪರಿಷತ್ತನ್ ಆಗ್ರಹಿಸಿದ್ದು, ವಕೀಲರ ರಾಜ್ಯ ಪರಿಷತ್ತಿನ ಸಂಖ್ಯೆಯನ್ನು ಆಧರಿಸಿ 2 ಜಿಲ್ಲೆಗಳಿಗೊಂದರಂತೆ ಕ್ಷೇತ್ರಗಳನ್ನಾಗಿ ವಿಂಗಡಿಸಿ ಜಿಲ್ಲೆಗಳಿಂದ ಪ್ರತಿನಿಧಿಸಲು ಅವಕಾಶ ಕಲ್ಪಿಸುವಂತೆ ತಿದ್ದುಪಡಿ ತರಬೇಕೆಂದು ರಾಜ್ಯ ವಕೀಲರ ಪರಿಷತ್ತಿನ ಗಮನಕ್ಕೆ ತರಲಾಗಿದೆ ಎಂದರು.

ಗೋಷ್ಟಿಯಲ್ಲಿ ವಿನಯಕುಮಾರ್, ಸಚಿನ್ ಬಾಬು, ಶಿವು ಮಲ್ಲಿಕಾರ್ಜನ್, ವಂದನಾ ಭಾಗವಹಿಸಿದ್ದರು.

Views: 34

Leave a Reply

Your email address will not be published. Required fields are marked *