ರಾಜ್ಯ ಸರ್ಕಾರ ವೆಂಟಿಲೇಷನ್‍ನಲ್ಲಿದೆ: ವಿಧಾನ ಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನ. 12: ಸರ್ಕಾರ ಇದ್ದಷ್ಟು ದಿನ ಸಿಎಂ ಕಾಸು ಮಾಡಿಕೊಂಡು ಹೋಗಬಹುದು ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಕೈ ಶಾಸಕರೇ ಮಾತಾಡುತ್ತಿದ್ದಾರೆ, ಸಿದ್ಧರಾಮಯ್ಯ ಮಾತು ಆಡಳಿತದಲ್ಲಿ ನಡೆಯುತ್ತಿಲ್ಲ ಡಿಕೆಶಿ ಆಡಿದ್ದೇ ಆಟ ಎಂಬ ಸ್ಥಿತಿ ನಿರ್ಮಾಣಾಗಿದೆ ರಾಜ್ಯ ಸರ್ಕಾರ ವೆಂಟಿಲೇಷನ್‍ನಲ್ಲಿದೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಸಿಎಂ ಸಿದ್ಧರಾಮಯ್ಯ
ಜೀವನ ತೆರೆದ ಪುಸ್ತಕ ಎಂದು ಹೇಳುತ್ತಾರೆ ಸಚಿವ ಜಮೀರ್ ಅಹ್ಮದ್ ತೆರೆದೆ ದುಡ್ಡು ಹಂಚುತ್ತಿದ್ದಾನೆ ವಯನಾಡ್‍ಗೆ ಅಕ್ಕಿ ಹೋಗಿದ್ದು ತೆರೆದೆ
ಹಂಚಿದ್ದಾರೆ ಪ್ರಧಾನಿಗೆ ಮಾಹಿತಿ ಇರಲ್ವಾ, 700ಕೋಟಿ ಹಣ ಮಾಹಾರಾಷ್ಟ್ರಕ್ಕೆ ಹೋಗಿದೆ ಕಾಂಗ್ರೆಸ್ ನಾಯಕರು ಸಾಕ್ಷಿಗುಡ್ಡೆ
ಕೇಳುತ್ತಾರೆಂದು ವ್ಯಂಗ್ಯವಾಡಿ ಭ್ರಷ್ಟಾಚಾರದ ಬಗ್ಗೆ ರಾಜ್ಯಪಾಲರಿಗೆ, ಸಿಎಂಗೆ ದೂರು ನೀಡಿದ್ದಾರೆ ಕಮಿಷನರ್, ಡಿಸಿಗೆಷ್ಟು ರೇಟ್ ಎಂದು
ಡಿಟೇಲಾಗಿ ದೂರು ನೀಡಿದ್ದಾರೆ ತೆರೆದ ಪುಸ್ತಕದ ಅಕೌಂಟನ್ನೆಲ್ಲಾ ದೂರಲ್ಲಿ ತೋರಿಸಿದ್ದಾರೆ ಬಾರ್ ಮಾಲೀಕರು ಪ್ರತಿಭಟನೆಗೆ ಕರೆ
ನೀಡಿದ್ದಾರೆ ರಾಜ್ಯದಲ್ಲಿ ವೈನ್ ಸ್ಟೋರ್, ಬಾರ್, ಪಬ್ ಗೆ ದರ ನಿಗದಿ ಮಾಡಿದ್ದಾರೆ ಚುನಾವಣೆಗಾಗಿ ವಾರದಲ್ಲಿ 900ಕೋಟಿ
ಸಂಗ್ರಹಿಸಿದ್ದಾರೆ ವಾರದಲ್ಲೇ 18ಕೋಟಿ ಸಂಗ್ರಹಿಸಿ ದಾಖಲೆ ಬರೆದಿದ್ದಾರೆ ಇಲಾಖೆಯ ಪ್ರಳಯಾಂತಕ ಅಧಿಕಾರಿಗಳಿಗೆ ಶಹಭ್ಭಾಷ್ ಗಿರಿ
ಕೊಡಬೇಕು ಎಂದರು.

ಹುಟ್ಟಿದರೂ ಎಸ್‍ಐಟಿ, ಸತ್ತರೂ ಎಸ್‍ಐಟಿ,ಮದುವೆಗೊಂದು ಎಸ್‍ಐಟಿ ಎಸ್‍ಐಟಿ ಮೂಲಕ ತನಿಖೆ ಮಾಡಿ ಮುಚ್ಚಿ ಹಾಕಿ ಎಂದು ಕಿಡಿ
ಕಾರಿದ್ದು,ಕೆಂಪಣ್ಣ ದೂರು ಕೊಟ್ಟಾಗ ಸಿದ್ಧರಾಮಯ್ಯ ಪಂಚೆ ಎತ್ತಿ ಊರೂರು ತಿರುಗಿದ್ದರು. ನಾವು ದಾಖಲೆ ಇದ್ದರೆ ಕೊಡಪ್ಪ ಎಂದು ಕೆಂಪಣ್ಣನ
ಕೇಳಿದ್ದೆವು,ಬದುಕಿರೋವರೆಗೂ ಕೆಂಪಣ್ಣ ದಾಖಲೆ ತಂದು ಕೊಡಲಿಲ್ಲ ಈಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶೇ.60ದೂರು
ದಾಖಲಾಗಿದೆ ಮನೆಹಾಳು ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಕ್ಕೆ ದುಡ್ಡಿಲ್ಲ ಶಾಸಕರು, ಮಂತ್ರಿಗಳಿಗೆ ಯಾವುದೇ ಹಣ ಬರದೆ ಬಕಪಕ್ಷಿಗಳಿಂತೆ
ಕಾದಿದ್ದಾರೆ ವರ್ಗಾವಣೆ ದಂಧೆ ಮೂಲಕ ಹಣ ಮಾಡುತ್ತಿದ್ದಾರೆ ಕರ್ನಾಟಕ ಎಟಿಎಂ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ ರಾಜ್ಯದ
ಹಣ ಬೇರೆ ರಾಜ್ಯಗಳಿಗೆ ಕಳಿಸುತ್ತಿದ್ದಾರೆ ಎಂದು ಆಶೋಕ್ ದೂರಿದರು.

ಅಂಬೇಡ್ಕರ್ ಪರಕೀಯ ಧರ್ಮ ಸೇರಲ್ಲ ಎಂದು ಹೇಳಿದ್ದರು ಇವರನ್ನೇ ಪರಕೀಯರು ಎಂದು ಪದ ಬಳಸಿದ್ದಾರೆಂದ ಆರ್ ಅಶೋಕ್‍ ಮುಸ್ಲಿಂ
ಧರ್ಮಕ್ಕೆ ಹೋದರೆ ದೇಶದಲ್ಲಿ ಭಯ ಸೃಷ್ಠಿ ಎಂದಿದ್ದಾರೆ. ಕ್ರೈಸ್ತ, ಮುಸ್ಲಿಂ ಧರ್ಮಕ್ಕೆ ಸೇರಿದರೆ ರಾಷ್ಟ್ರಕ್ಕೆ ಅಭದ್ರತೆ ಎಂದು ಹೇಳಿದ್ದರು ದೇಶ
ಭದ್ರತೆಗಾಗಿ ದೇಶದಲ್ಲೇ ಹುಟ್ಟಿದ ಭೌದ್ಧ ಧರ್ಮ ಸೇರುತ್ತೇನೆಂದಿದ್ದರು. ಕಾಂಗ್ರೆಸ್, ನೆಹರು ಅವರು ಅಂಬೇಡ್ಕರ್ ಅವರನ್ನು ಸೋಲಿಸಿದ್ದರು
ಈಗ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಚಿತ್ರ ಹಿಡಿದು ಓಡಾಡುತ್ತಾರೆ ಈ ಆಟ ಇನ್ನು ನಡೆಯಲ್ಲ, ಸರ್ಕಾರ ಬಹಳ ದಿನ ಉಳಿಯಲ್ಲ
ಎಂದು ಟೀಕಿಸಿದರು.

ಚನ್ನಪಟ್ಟಣದಲ್ಲಿ ಡಿಕೆಶಿ ಸಿಎಂ ಎಂದು ಘೋಷಿಸುತ್ತಿದ್ದಾರೆ ಜಮೀರ್ ಯಾವಾಗ ಯಾರ ಪರ ಇರುತ್ತಾನೋ ಗೊತ್ತಿಲ್ಲ ಕಾಂಗ್ರೆಸ್-ಜೆಡಿಎಸ್
ಮೈತ್ರಿ ಸರ್ಕಾರ ಐದು ವರ್ಷ ಅಂದಿದ್ದರು ಆಗಲೇ 14ಶಾಸಕರು ಪಕ್ಷ ಬಿಟ್ಟು ಬಿಜೆಪಿಗೆ ಬಂದಿದ್ದರು ಸಿದ್ಧರಾಮಯ್ಯ ಜತೆ ಇದ್ದರೆ
ಕಡಲೇಕಾಯಿಯೂ ಸಿಗಲ್ಲ ಎಂದು ಶಾಸಕರಿಗೆ ಗೊತ್ತಿದೆ ಮಠಾಧೀಶರು, ರಾಜಕಾರಣಿಗಳು, ಜೋತಿಷಿಗಳಿಂದ ಸರ್ಕಾರ ಉಳಿಯಲ್ಲ ಎಂದು ಭವಿಷ್ಯ ಗಟ್ಟಿ ಇದ್ದರೆ ನಾನೇ ಸಿಎಂ ಎನ್ನಲ್ಲ, ಜೊಳ್ಳಿದ್ದಾಗಲೇ ಹೇಳೋದು ಕೇರಳದಲ್ಲಿ ಅಲ್ಲಿನ ನಾಯಕರ ಬದಲು ಸಿಎಂ, ಡಿಸಿಎಂ
ಫೋಟೋ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಪ್ರಧಾನ ಕಾರ್ಯದರ್ಶೀ ಸಂಪತ್,
ಕುಮಾರ್ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜನ್, ವಕ್ತಾರ ನಾಗರಾಜ್ ಬೇದ್ರೇ ಕಚೇರಿ ಕಾರ್ಯದರ್ಶಿ ಶಂಭು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *