“ಛಲವಾದಿ ಸಮುದಾಯದ ಜನರಿಗೆ ಜಾತಿ ಸಮೀಕ್ಷೆಯಲ್ಲಿ ‘ಛಲವಾದಿ’ ಎಂದೇ ನಮೂದಿಸಲು ಮುಖಂಡರ ಮನವಿ”

ಚಿತ್ರದುರ್ಗ ಸೆ. 22

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ.22ರ ಇಂದಿನಿಂದ ಅ.7 ರವರೆಗೆ ಕೈಗೊಳ್ಳುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಮತ್ತು ಉಪ ಜಾತಿ ಕಾಲಂನಲ್ಲಿ ಛಲವಾದಿ ಬರೆಸುವಂತೆ ಸಮಾಜ ಬಾಂಧವರಿಗೆ ಛಲವಾದಿ ಸಮುದಾಯ ಮುಖಂಡರು, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಸಮಾಜ ಭಾಂದವರಲ್ಲಿ ಮನವಿ ಮಾಡಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾತಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಆರ್ಥಿಕ ಸ್ಥಿತಿಗತಿಗಳ ಆಯೋಗವು ಸಮೀಕ್ಷೆ ಕೈಗೊಳ್ಳುತ್ತಿದೆ. ಗಣತಿಗಾರರು ನಿಮ್ಮ ಮನೆ, ನಿಮ್ಮ ಬಳಿ ಬಂದಾಗ ಬಲಗೈ ಸಮುದಾಯದ ಬಂಧುಗಳು ಛಲವಾದಿ ಎಂಬುದಾಗಿ ನಮೂದಿಸುವುದರಿಂದ ಸಮಾಜದ ಜನಸಂಖ್ಯೆ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಗಮನಹರಿಸಲು ಸಹಾಯಕವಾಗುತ್ತದೆ. ಗಣತಿದಾರರು ಬಂದಾಗ ಬಲಗೈ, ಛಲವಾದಿ, ವಲಯ, ಮಹರ್, ಮಾಲಾ, ಪರಯನ್ ಹಾಗೂ ಬಲಗೈ ಸಂಬಂಧಿಸಿದ ಸಮುದಾಯದವರು ಕಡ್ಡಾಯವಾಗಿ ಜಾತಿಗಣತಿಯಲ್ಲಿ ಬಲಗೈ ಸಂಬಂಧಿತ ಜಾತಿಗಳನ್ನು ಮಾತ್ರ ನಮೂದಿಸಬೇಕು. ಯಾವುದೇ ಕಾರಣಕ್ಕೂ ಆದಿದ್ರಾವಿಡ, ಆದಿ ಆಂಧ್ರ ಅಥವಾ ಆದಿಕರ್ನಾಟಕ
ಅಂತೆಲ್ಲಾ ನಮೂದಿಸಬಾರದು. ಸಮಾಜದಿಂದಲೂ ಛಲವಾದಿ ಸಮಾಜ ಬಾಂಧವರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಈ ಹಿಂದೆ ನಡೆದ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ನಮ್ಮವರು ತಿಳಿಯದೆ ತಪ್ಪು ಮಾಡಿದ್ದಾರೆ ಅದರೆ ಈಭಾರಿ ಆ ರೀತಿಯ ತಪ್ಪನ್ನು ಮಾಡದೆ ಎಲ್ಲರು ಸಹಾ ಸರಿಯಾದ ರೀತಿಯಲ್ಲಿ ಛಲವಾದಿ ಎಂದು ಬರೆಸುವಂತೆ ಮನವಿ ಮಾಡಿದ್ದು, ನಾವು ಬೇರೆ ಬೇರೆ ರೀತಿಯಲ್ಲಿ ಬರೆಸುವುದರಿಂದ ನಮ್ಮ ಸಮುದಾಯ ಎಷ್ಟಿದೇ ಎಂದು ತಿಳಿಯುವುದು ಕಷ್ಟವಾಗುತ್ತದೆ, ಆದ್ದರಿಂದ ಈ ಗಣತಿಯಲ್ಲಿ ನಮ್ಮ ಸಮುದಾಯದವರೆಲ್ಲರೂ ಸಹಾ ಧರ್ಮದಲ್ಲಿ ಭೌದ್ದ, ಜಾತಿ ಮತ್ತು ಉಪ ಜಾತಿ ಕಾಲಂನಲ್ಲಿ ಛಲವಾದಿ ಬರೆಸುವುದರ ಮೂಲಕ ನಮ್ಮ ಜನಸಂಖ್ಯೆಯನ್ನು ಪ್ರದರ್ಶನ ಮಾಡಿ ಮುಂದಿನ ದಿನಮಾನದಲ್ಲಿ ಸರ್ಕಾರ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿ ಸಂವಿಧಾನದಲ್ಲಿ ನಮ್ಮ ಜಾತಿಗಳನ್ನು ನೋಡಿ ಸರ್ಕಾರ ನಮಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತದೆ ಹೋರೆತು
ಧರ್ಮವನ್ನಲ್ಲ ನಮಗೆ ಜಾತಿ ಮುಖ್ಯವಾಗಿದೆ ಧರ್ಮ ಹಿಂದೂವಾಗಲಿ ಭೌದ್ದ ಧರ್ಮವಾಗಲಿ ಯಾವುದಾದರೂ ಸಹಾ ನಡೆಯುತ್ತದೆ ಎಂದರು.

ಛಲವಾದಿ ಗುರುಪೀಠದ ಬಸವನಾಗಿ ದೇವ ಶ್ರೀಗಳು ಮಾತನಾಡಿ, ನಾಗ ಮೋಹನ್‍ದಾಸ್ ರವರು ನೀಡಿದಂತ ವರದಿಯಲ್ಲಿ ನಮ್ಮ ಸಮುದಾಯದ ಸಂಖ್ಯೆಯನ್ನು ಕಡಿಮೆಯಲ್ಲಿ ತೋರಿಸಲಾಗಿದೆ ಅದನ್ನು ಸರಿಪಡಿಸಲು ಈಗ ಮತ್ತೊಂದು ಅವಕಾಶ ನಮಗೆ ಸಿಕ್ಕಿದೆ ಈ ಹಿನ್ನಲೆಯಲ್ಲಿ ಇಂದಿನಿಂದ ಪ್ರಾರಂಭವಾಗುವ ಗಣತಿಯಲ್ಲಿ ಉಪ ಜಾತಿ ಕಾಲಂನಲ್ಲಿ ಛಲವಾದಿ ಎಂದು ಬರೆಸುವುದರ ಮೂಲಕ ನಮ್ಮ ಸಮುದಾಯದ ಶಕ್ತಿಯನ್ನು ಪ್ರದರ್ಶನ ಮಾಡಬೇಕಿದೆ. ಯಾವುದೇ ಕಾರಣಕ್ಕೂ ಆದಿದ್ರಾವಿಡ, ಆದಿ ಆಂಧ್ರ ಅಥವಾ ಆದಿಕರ್ನಾಟಕ ಅಂತೆಲ್ಲಾ ನಮೂದಿಸಬಾರದು ಎಂದು ತಿಳಿಸಿದರು.

ಗೋಷ್ಟಿಯಲ್ಲಿ ನಿವೃತ್ತ ಪೊಲೀಸ್ ಅಧೀಕ್ಷಕ ದಾವಣಗೆರೆ ಮಹಾಸಭಾ ಜಿಲ್ಲಾಧ್ಯಕ್ಷ, ಎನ್.ರುದ್ರಮುನಿ ಛಲವಾದಿ ತಿಪ್ಪೇಸ್ವಾಮಿ, ಕಟ್ಟಡ ಕಾರ್ಮಿಕ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಅಣ್ಣಪ್ಪ ಸ್ವಾಮಿ, ಗೋಸಿಕೆರೆ ಓಂಕಾರ್ ಮೂರ್ತಿ, ಹಾಲೇಶ್, ನರಸಿಂಹಮೂರ್ತಿ, ಮೂಡ್ಲಗಿರಿ ದೇವರಾಜು, ರಾಮಕೃಷ್ಣ, ಶಿವಕುಮಾರ್, ಭೂತೇಶ್, ಚಂದ್ರಶೇಖರ್, ನಟರಾಜ್, ಎಂ ಕೆ ವಿಜಯ್ ಕುಮಾರ್, ಜಗದೀಶ್ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು

Views: 8

Leave a Reply

Your email address will not be published. Required fields are marked *