MS Dhoni: ತನ್ನ ಶರ್ಟ್ ಮೇಲೆ ಧೋನಿಯ ಆಟೋಗ್ರಾಫ್ ಹಾಕಿಸಿಕೊಂಡ ಲೆಜೆಂಡ್ ಸುನಿಲ್ ಗವಾಸ್ಕರ್

MS Dhoni and Sunil Gavaskar

ಐಪಿಎಲ್ 2023 ರಲ್ಲಿ ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ CSK vs KKR) ನಡುವಣ ಪಂದ್ಯ ಕುತೂಹಲ ಕೆರಳಿಸಿತ್ತು. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಸಂಪೂರ್ಣ ಭರ್ತಿ ಆಗಿ ಸಿಎಸ್​ಕೆ ಅಭಿಮಾನಿಗಳು ಎಂಬುದಕ್ಕಿಂತ ಎಂಎಸ್ ಧೋನಿ (MS Dhoni) ಫ್ಯಾನ್ಸ್ ತುಂಬಿದ್ದರು. ಆದರೆ, ಚೆನ್ನೈ ಈ ಪಂದ್ಯದಲ್ಲಿ ಸೋಲು ಕಂಡಿತು. ಕೆಕೆಆರ್ 6 ವಿಕೆಟ್​ಗಳ ಜಯ ಸಾಧಿಸಿತು. ಪಂದ್ಯ ಮುಗಿದ ಬಳಿಕ ಅನೇಕ ವಿಶೇಷ ಘಟನೆಗಳು ನಡೆದಿವೆ. ಚೆಪಾಕ್​ನಲ್ಲಿ ಇದು ಸಿಎಸ್​ಕೆಯ ಕೊನೆಯ ಲೀಗ್ ಪಂದ್ಯ ಆಗಿದ್ದರಿಂದ ಧೋನಿ ಸೇರಿದಂತೆ ಸಿಎಸ್​ಕೆಯ ಎಲ್ಲ ಪ್ಲೇಯರ್ಸ್ ಇಡೀ ಮೈದಾನ ಸುತ್ತು ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಇದರ ನಡುವೆ ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಅವರು ಧೋನಿಯ ಆಟೋಗ್ರಾಫ್​ಗೆ ಓಡೋಡಿ ಬಂದರು.

ಹೌದು, ಐಪಿಎಲ್ 2023 ರಲ್ಲಿ ಇಡೀ ಕ್ರಿಕೆಟ್ ಜಗತ್ತೇ ಹೆಮ್ಮೆ ಪಡುವಂತಹ ಘಟನೆ ಸಂಭವಿಸಿತು. ಭಾರತೀಯ ಕ್ರಿಕೆಟ್ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿ ಲೆಜೆಂಡರಿ ಎನಿಸಿಕೊಂಡಿರುವ ಸುನಿಲ್ ಗವಾಸ್ಕರ್ ಅವರು ಮಹೇಂದ್ರ ಸಿಂಗ್ ಧೋನಿ ಅವರ ಆಟೋಗ್ರಾಫ್ ಕೇಳಿದರು. ಅದುಕೂಡ ಅವರು ಧರಿಸಿಕೊಂಡಿದ್ದ ಶರ್ಟ್ ಮೇಲೆ. ಇದಕ್ಕೆ ಒಪ್ಪಿದ ಧೋನಿ ಗವಾಸ್ಕರ್ ಅವರ ಶರ್ಟ್ ಮೇಲೆ ತನ್ನ ಹಸ್ತಾಕ್ಷರ ಹಾಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

KL Rahul: ಕೆಎಲ್ ರಾಹುಲ್ ಫೋಟೋ ವೈರಲ್: ಕಂಬ್ಯಾಕ್ ಯಾವಾಗ?

ಈ ಬಗ್ಗೆ ಮಾತನಾಡಿದ ಗವಾಸ್ಕರ್, ”ಧೋನಿಯನ್ನು ಪ್ರೀತಿ ಮಾಡದಿರುವವರು ಯಾರಿದ್ದಾರೆ ಹೇಳಿ?. ಅನೇಕ ವರ್ಷಗಳಿಂದ ಧೋನಿ ಭಾರತೀಯ ಕ್ರಿಕೆಟ್​ಗೆ ನೀಡಿರುವ ಕೊಡುಗೆ ಅದ್ಭುತ. ಇವರಿಗಿಂತ ಉತ್ತಮ ರೋಲ್ ಮಾಡೆಲ್ ಇನ್ನೊಬ್ಬರು ಬೇಕೇ?. ಅನೇಕ ಯುವಕರು ಧೋನಿಯನ್ನು ನೋಡಿ ಕಲಿಯುತ್ತಿದ್ದಾರೆ. ಧನ್ಯವಾದ ನಾನು ಅವರ ಆಟೋಗ್ರಾಫ್ ಪಡೆದಿದ್ದೇನೆ. ಇದನ್ನು ನಾನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ,” ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಎಂಎಸ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಸೀಸನ್ ಎಂದು ಹೇಳಲಾಗುತ್ತಿದೆ. ಈ ಸೀಸನ್ ಬಳಿಕ ಧೋನಿ ಕ್ರಿಕೆಟ್ ಲೋಕದಿಂದ ದೂರವಾಗಲಿದ್ದಾರಂತೆ. ಸದ್ಯ ಚೆನ್ನೈ ಆಡಿರುವ 13 ಪಂದ್ಯಗಳಲ್ಲಿ 7 ಗೆಲುವು, 5 ಸೋಲು ಕಂಡು 15 ಅಂಕ ಸಂಪಾದಿಸಿ ದ್ವಿತೀಯ ಸ್ಥಾನದಲ್ಲಿದೆ. ಸಿಎಸ್​ಕೆ ಇನ್ನೂ ಪ್ಲೇ ಆಫ್​ಗೆ ಲಗ್ಗೆಯಿಟ್ಟಿಲ್ಲ. ಎಲ್ಲಾದರು ಪ್ಲೇ ಆಫ್ ಪ್ರವೇಶಿಸಲು ವಿಫಲವಾದರೆ ಭಾನುವಾರ ನಡೆದ ಪಂದ್ಯ ಚೆಪಾಕ್​ನಲ್ಲಿ ಕೊನೆಯ ಮ್ಯಾಚ್ ಆಗಲಿದೆ. ಹೀಗಾಗಿ ಧೋನಿ ಸೇರದಂತೆ ಸಿಎಸ್​ಕೆ ಎಲ್ಲ ಆಟಗಾರರು ಪಂದ್ಯದ ಬಳಿಕ ಮೈದಾನಕ್ಕೆ ಬಂದಿದ್ದ ಪ್ರೇಕ್ಷಕರಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/sunil-gavaskar-asked-ms-dhoni-for-an-autograph-and-msd-signed-on-his-shirt-after-csk-vs-rr-match-vb-578918.html

Leave a Reply

Your email address will not be published. Required fields are marked *