ಸಾರಿಗೆ ಮುಷ್ಕರಕ್ಕೆ: ಚಿತ್ರದುರ್ಗದಲ್ಲಿ ಜನಜೀವನ ಅಸ್ತವ್ಯಸ್ತ.

ಚಿತ್ರದುರ್ಗ ಆ. 5

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ ಪರಿಣಾಮ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗ್ಗೆಯಿಂದಲೇ ಬಸ್ ಸಂಚಾರ ಇಲ್ಲದಿದ್ದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡಿದರು. ನಿನ್ನೆಯೇ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಸಹ ಕಡಿಮೆ ಇತ್ತು. ಮುಷ್ಕರದ ಗೊತ್ತಿಲ್ಲದೆ ಬಂದವರು ಪರದಾಟ ನಡೆಸಿದರು. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಖಾಸಗಿ, ಎಲೆಕ್ಟ್ರಿಕ್ ಬಸ್‍ಗಳ ಮೂಲಕ ಸೇವೆ ಒದಗಿ ಸಲಾಗುತ್ತಿದೆ.

ಕೆಎಸ್‍ಆರ್‍ಟಿಸಿ ನೌಕರರು  ಕರೆಯಲಾಗಿದ್ದ  ಮುಷ್ಕರದ ಪರಿಣಾಮ ಚಿತ್ರದುರ್ಗದಲ್ಲಿ ಬಸ್ ಸಂಚಾರ ಸ್ಥಗಿತ ಗೊಂಡಿತ್ತು. ಬಸ್ಸುಗಳು ಒಂದು ಸಹ ಸಂಚಾರಿ ಮಾಡದೆ ಇರುವುದು ಎದ್ದು ಕಾಣುತ್ತಿದ್ದು, ಕೆಎಸ್‍ಆರ್‍ಟಿಸಿ ಡ್ರೈವರ್ ಮತ್ತು ಕಂಡಕ್ಟರ್ ಸಿಬ್ಬಂದಿ ವರ್ಗದವರಿಗೆ ಸರ್ಕಾರ ನೀಡಬೇಕಾದ ಸಂಬಳ,  ಇತರ ಭತ್ಯೆಗಳನ್ನು ಸಕಾಲಕ್ಕೆ ನೀಡದಿರುವುದರಿಂದ ಕರೆ ನೀಡಲಾಗಿದ್ದ ಮುಷ್ಕರಕ್ಕೆ ಕೆ.ಎಸ್‍ಆರ್.ಟಿ.ಸಿ ಎಲ್ಲಾ ಸಿಬ್ಬಂದಿ ವರ್ಗದವರು ತಮ್ಮ ವಾಹನವನ್ನು ಚಲಿಸದೆ ನಿಲ್ಲಿಸಿರುವುದು ಕಂಡುಬಂದಿತ್ತು.ದೂರದ ಪ್ರಯಾಣದ ಕೆಲವು ಬಸ್ಸುಗಳು ಮಾತ್ರ ಎಲ್ಲೆಲ್ಲೋ ಒಂದು ಬೆರಳೆಣಿಕೆಯಂತೆ ಓಡಾಡುತ್ತಿದ್ದರು ಸಹ ಅವುಗಳಲ್ಲಿಯೂ ಸಹ ಜನ ಹತ್ತದೆ ನಿಂತಿರುವುದು ಕಾಣಬರುತ್ತಿತ್ತು. 

ಖಾಸಗಿ ಬಸ್ಸುಗಳು ಓಡಾಡುತ್ತಿದ್ದರಿಂದ  ಜನಗಳಿಗೆ ತೊಂದರೆಯಾಗುತ್ತಿರಲಿಲ್ಲ, ಕೆಎಸ್‍ಆರ್.ಟಿ.ಸಿ ಉಚಿತ ಘೋಷಣೆಯಿಂದ ಆ ಬಸ್ಸುಗಳನ್ನು ಖಾಸಗಿಯವರು ನಿಲ್ಲಿಸಿದ್ದರಿಂದ ಎಲ್ಲಾ ಪ್ರಯಾಣಿಕರು ಕೆಎಸ್‍ಆರ್‍ಟಿಸಿ ಬಸ್ಸನ್ನೇ ಅವಲಂಬಿಸಿದ್ದು,ಈಗ ಕೆಎಸ್‍ಆರ್‍ಟಿಸಿ ಬಸ್ ಮುಷ್ಕರದಿಂದ ಅವರಿಗೆ ತೊಂದರೆ ಎದ್ದು ಕಾಣುತ್ತಿತ್ತು. ಸದಾ ಗಿಜಿಗುಡುತ್ತಿದ್ದ ಚಿತ್ರದುರ್ಗ ಸರ್ಕಾರಿ ಬಸ್ ನಿಲ್ದಾಣ ಇಂದು ಕೆಎಸ್‍ಆರ್‍ಟಿಸಿ ನೌಕರರು  ಕರೆಯ ಲಾಗಿದ್ದ  ಮುಷ್ಕರದ ಪರಿಣಾಮ ಬಿಕೋ ಎನ್ನುತ್ತಿತ್ತು, ಪ್ರತಿ ದಿನ ಖಾಸಗಿ ಬಸ್‍ನವರು ಕೆಎಸ್ ಆರ್.ಟಿಸಿ. ಮುಂಭಾಗ ಬಂದು ಊರಿಗೆ ಕೂಗುತ್ತಾ ಪ್ರಯಾಣಿಕರನ್ನು ಸೆಳೆಯುತ್ತಿದ್ದರು ಆದರೆ ಇಂದು ಮುಷ್ಕರದ ಹಿನ್ನಲೆಯಲ್ಲಿ ಪ್ರಯಾಣಿಕರೆ ಅವರನ್ನು ಹುಡುಕಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂದಿತು. ಗ್ರಾಮಾಂತರ ಪ್ರದೇಶದಿಂದ ಬಂದತಹ ಪ್ರಯಾಣಿಕರು ಬಸ್ ಇಲ್ಲದೆ ಊರಿಗೆ ಹೋಗಲು ಪರದಾಡುತ್ತಿರುವುದು ಕಂಡು ಬಂದಿತು.  

 ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ಉಚಿತ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಪ್ರಯಾಣಿಕರು ಪ್ರಯಾಣ ಮಾಡುತ್ತಿರುವುದರಿಂದ ಕೆಎಸ್‍ಆರ್ಟಿಸಿ ಲಾಭದತ್ತ ಸಾಗಬೇಕಿತ್ತು. ಆದರೆ ಉಚಿತ ಪ್ರಯಾಣಿಕರ ಹಣವನ್ನು ರಾಜ್ಯ ಸರ್ಕಾರ ಕೆಎಸ್‍ಆರ್‍ಟಿಸಿಗೆ ಪಾವಸದೇ ಇರುವುದರಿಂದ ಸಂಬಳ ಸಾರಿಗೆಗಳಿಗೆ ತೊಂದರೆಯಾಗುವುದು ಕಂಡುಬಂತು. ರಾಜ್ಯ ಸರ್ಕಾರವು ಕೆಎಸ್‍ಆರ್ಟಿಸಿಯಲ್ಲಿ ಇಷ್ಟೆಲ್ಲಾ ಪ್ರಯಾಣಿಕರಿದ್ದರು ಸಹ ನಷ್ಟದಲ್ಲಿದೆ ಎಂಬುದನ್ನು ತೋರಿಸುವ ಮೂಲಕ ಜನಸಾಮಾನ್ಯರಿಗೆ ದಿಕ್ಕು ತಪ್ಪಿಸಿದ್ದಾರೆಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೆಎಸ್‍ಆರ್.ಟಿ.ಸಿ ಮುಷ್ಕರದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪ್ರಯಾಣದ ತೊಂದರೆ ಆಗಿರುವುದರಿಂದ ಕಾಲೇಜು ಗಳಲ್ಲಿ ನಡೆಸಬೇಕಿದ್ದ ಈ ದಿನದ ಆಂತರಿಕ ಪರೀಕ್ಷೆಗಳನ್ನು ಮುಂದೂಡಿದ್ದಾರೆ.

ತಾನು ಘೋಷಿಸಿದಂತ ಗ್ಯಾರಂಟಿ ಉಳಿಸಿಕೊಳ್ಳಲು ರಾಜ್ಯ ಸರ್ಕಾರ ರೈತರಿಗೆ ಜನಸಾಮಾನ್ಯರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಮತ್ತು ಅವರಿಗೆ ಸಿಗಬೇಕಾದ  ಪಿಂಚಣಿ, ರೈತರ ಮೂಲಭೂತ ಸೌಕರ್ಯ, ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನಗಳು ಹಾಗೂ ಬೇರೆ ಬೇರೆ ಯೋಜನೆಗಳಲ್ಲಿ ಪರಿಶಿಷ್ಟರು ಮತ್ತು ಇತರ ಜನಾಂಗದವರಿಗೆ ಸೌಲಭ್ಯಗಳನ್ನು ಕಡಿತಗೊಳಿಸಿರುವುದು,  ಜನಸಾಮಾನ್ಯರಿಗೆ ಹೊರೆಯಾ ಗುವಂತೆ ತೆರಿಗೆಗಳನ್ನು ಹೆಚ್ಚಿಸಿರುವುದು,  ಶುಲ್ಕಗಳನ್ನು ಹೆಚ್ಚಿಸಿರುವುದು ಹಾಗೂ ವಿದ್ಯುತ್ ಬಿಲ್‍ನ್ನು ಏರಿಕೆ ಮಾಡಿರುವುದು ಖಂಡನೀಯವಾಗಿದೆ ಎಂದು ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ ರವರು ತಿಳಿಸಿದ್ದಾರೆ. 

 ಜನಸಾಮಾನ್ಯರು,  ಎಲ್ಲರಿಗೂ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದು ತೆರಿಗೆ, ಇತರೆ ಹಣಕಾಸಿನ ಹೆಚ್ಚಳದ ಹೊರೆಯಾಗಿರುವುದನ್ನು ಇಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *