Skip to content
  • Sunday, March 22, 2026
  • ABOUT US
  • CONTACT US
  • PRIVACY POLICY

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • PRIVACY POLICY
  • Horoscope
  • Home
  • Sports
  • Lionel Messi: ಹೊಸ ಕ್ಲಬ್​ ಪರ ಕಣಕ್ಕಿಳಿಯಲಿದ್ದಾರೆ ಲಿಯೋನೆಲ್ ಮೆಸ್ಸಿ
Sports

Lionel Messi: ಹೊಸ ಕ್ಲಬ್​ ಪರ ಕಣಕ್ಕಿಳಿಯಲಿದ್ದಾರೆ ಲಿಯೋನೆಲ್ ಮೆಸ್ಸಿ

June 8, 2023
samagrasuddi

ಅರ್ಜೆಂಟೀನಾದ ಖ್ಯಾತ ಫುಟ್​ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಇಂಟರ್ ಮಿಯಾಮಿ ಕ್ಲಬ್ ಪರ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ. ಫ್ರಾನ್ಸ್​ನ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್​ ಜೊತೆಗಿನ ಒಪ್ಪಂದದ ಮುಕ್ತಾಯದ ಬೆನ್ನಲ್ಲೇ ಮೆಸ್ಸಿ ಮತ್ತೆ ಬಾರ್ಸಿಲೋನಾ ತಂಡಕ್ಕೆ ಹಿಂತಿರುಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.ಇದರ ಜೊತೆಗೆ ಸೌದಿ ಅರೇಬಿಯಾದ ಖ್ಯಾತ ಫುಟ್​ಬಾಲ್ ಕ್ಲಬ್ ಅಲ್ ಹಿಲಾಲ್ ಲಿಯೋನೆಲ್ ಮೆಸ್ಸಿಗೆ ಬಿಗ್ ಆಫರ್ ನೀಡಿದೆ ಎನ್ನಲಾಗಿತ್ತು. ಆದರೀಗ ಅಮೆರಿಕದ ಮೇಜರ್ ಲೀಗ್ ಸಾಕರ್ ತಂಡ "ಇಂಟರ್ ಮಿಯಾಮಿ" ಪರ ಆಡಲು ಸಹಿ ಹಾಕಲಿದ್ದೇನೆ ಎಂದು ಸ್ಪ್ಯಾನಿಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮೆಸ್ಸಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಯೂರೋಪ್​ನ ಇತರೆ ಕ್ಲಬ್​ಗಳಿಂದ ಆಫರ್ ಬಂದಿರುವುದನ್ನು ಖಚಿತಪಡಿಸಿದ ಮೆಸ್ಸಿ, ತಾನು ಯುರೋಪ್​ನಲ್ಲಿ ಆಡಿದ್ರೆ ಅದು ಬಾರ್ಸಿಲೋನಾ ತಂಡದ ಪರ ಮಾತ್ರ ಆಡುತ್ತೇನೆ ಎಂದು ನಿರ್ಧರಿಸಿದ್ದೆ. ಹೀಗಾಗಿ ಬೇರೆ ಕ್ಲಬ್​ಗಳ ಆಫರ್​ ಬಗ್ಗೆ ನಾನು ಆಸಕ್ತಿ ತೋರಲಿಲ್ಲ ಎಂದರು.2004 ರಿಂದ 2021 ರವರೆಗೆ ಸ್ಪೇನ್​ನ ಬಾರ್ಸಿಲೋನಾ ಕ್ಲಬ್ ಪರ ಆಡಿದ್ದ ಲಿಯೋನೆಲ್ ಮೆಸ್ಸಿ 778 ಪಂದ್ಯಗಳಲ್ಲಿ 672 ಗೋಲ್​ಗಳನ್ನು ಬಾರಿಸಿದ್ದರು. ಇದಾದ ಬಳಿಕ ಫ್ರಾನ್ಸ್​ನ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಪರ ಕಣಕ್ಕಿಳಿದಿದ್ದ ಫುಟ್​ಬಾಲ್ ಅಂಗಳದ ಮಾಂತ್ರಿಕ 75 ಪಂದ್ಯಗಳಲ್ಲಿ ಕೇವಲ 32 ಗೋಲುಗಳಿಸಲಷ್ಟೇ ಶಕ್ತರಾಗಿದ್ದರು.
2023 ರ ಆರಂಭದಿಂದಲೇ PSG ಯೊಂದಿಗಿನ ಮೆಸ್ಸಿಯ ಸಂಬಂಧವು ಹದಗೆಟ್ಟಿತ್ತು. ಇತ್ತ ಒಪ್ಪಂದ ಕೂಡ ಮುಗಿಯುತ್ತಿದ್ದಂತೆ ಕ್ಲಬ್ ತೊರೆಯಲು ಲಿಯೋನೆಲ್ ಮೆಸ್ಸಿ ನಿರ್ಧರಿಸಿದ್ದಾರೆ. ಅದರಂತೆ ಇದೀಗ ಹೊಸ ಕ್ಲಬ್ ಪರ ಒಪ್ಪಂದ ಮಾಡಿಕೊಂಡಿದ್ದು, ಇದಾಗ್ಯೂ ಇಂಟರ್ ಮಿಯಾಮಿ ಒಪ್ಪಂದ ಮೊತ್ತವನ್ನು ಬಹಿರಂಗಪಡಿಸಿಲ್ಲ.ಅಂದಹಾಗೆ ಲಿಯೋನೆಲ್ ಮೆಸ್ಸಿ ಈ ಹಿಂದೆ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಪರ ಆಡಲು ಸುಮಾರು 348 ಕೋಟಿ ರೂ. ಪಡೆದಿದ್ದರು ಎಂದು ವರದಿಯಾಗಿತ್ತು. ಹೀಗಾಗಿ ಈ ಬಾರಿ ಕೂಡ ಅಮೆರಿಕನ್ ಕ್ಲಬ್ ಪರ ಆಡಲು ಬೃಹತ್ ಮೊತ್ತದ ಒಪ್ಪಂದ ನಡೆದಿರುವ ಸಾಧ್ಯತೆ ಹೆಚ್ಚಿದೆ.

source https://tv9kannada.com/photo-gallery/lionel-messi-confirms-inter-miami-club-move-kannada-news-zp-596885.html

Tags: samagrasuddi, Sports news, ಸಮಗ್ರ ಸುದ್ದಿ

Post navigation

WTC Final 2023: ಭಾರತದ ವಿರುದ್ಧ ದಾಖಲೆಯ ಜೊತೆಯಾಟವನ್ನಾಡಿದ ಸ್ಮಿತ್- ಹೆಡ್..!
ICC: ಕಪಿಲ್ ಟು ರೋಹಿತ್; ಐಸಿಸಿ ಫೈನಲ್​ಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ಐವರು ನಾಯಕರಿವರು

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
Home Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.5 | ದಿನ 77

March 20, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.4 | ದಿನ 76

March 19, 2026
samagrasuddi
  • ಚಿತ್ರದುರ್ಗ: ಮಾ. 23ರಂದು ಉಜ್ಜಯಿನಿ ಮಠದಲ್ಲಿ ಜಗದ್ಗುರು ಶ್ರೀ ಮರುಳಾರಾಧ್ಯ ಶಿವಾಚಾರ್ಯರ 31ನೇ ಪುಣ್ಯ ಸ್ಮರಣೋತ್ಸವ.
  • Life Cycle Mutual Funds: ಸೆಬಿಯ ಹೊಸ ಮ್ಯೂಚುವಲ್ ಫಂಡ್ ನಿಯಮ, ಲಾಭ ಮತ್ತು ಅನಾನುಕೂಲಗಳ ಸಂಪೂರ್ಣ ಮಾಹಿತಿ.
  • RCB Ticket Scam Alert: ಐಪಿಎಲ್ ಟಿಕೆಟ್ ಹೆಸರಿನಲ್ಲಿ ವಂಚನೆ; ಬೆಂಗ್ಳೂರು ಪೊಲೀಸರಿಂದ ಹೈ-ಅಲರ್ಟ್!
  • ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.
  • ​Day Special, ಮಾರ್ಚ್ 22: ಇತಿಹಾಸದ ಪುಟಗಳಲ್ಲಿನ ಸುವರ್ಣ ಅಕ್ಷರಗಳು ಮತ್ತು ವಿಶ್ವ ಜಲ ದಿನದ ವಿಶೇಷತೆ
Copyright © 2026
CONTACT US
Theme by: Theme Horse
Proudly Powered by: WordPress