ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಕಭೀರಾನಂದ ನಗರದಲ್ಲಿನ ಶ್ರೀ ಕಬೀರಾನಂದಾಶ್ರಮದವತಿಯಿಂದ ನಡೆಯುತ್ತಿರುವ 96ನೇ ಶಿವರಾತ್ರಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮ.
ಚಿತ್ರದುರ್ಗ ಫೆ. 13
ಭಗವಂತನ ಕೃಪಾಕಟಾಕ್ಷವನ್ನು ಪಡೆಯಬೇಕಾದರೆ ಮೊದಲು ಗುರುವಿನ ಕೃಪಾಕಟಾಕ್ಷವನ್ನು ಪಡೆಯಬೇಕು ಆಗ ಮಾತ್ರ ಭಗವಂತನ ಕೃಪಾಕಟಾಕ್ಷವನ್ನು ಪಡೆಯಲು ಸಾಧ್ಯವಿದೆ ಎಂದು ಬೀದರ್‍ನ ಶ್ರೀ ಗುರುದೇವಾಶ್ರಮದ ಶ್ರೀ ಗಣಪತಿ ಮಹರಾಜ್ ತಿಳಿಸಿದರು.
ಚಿತ್ರದುರ್ಗ ನಗರದ ಕಭೀರಾನಂದ ನಗರದಲ್ಲಿನ ಶ್ರೀ ಕಬೀರಾನಂದಾಶ್ರಮದವತಿಯಿಂದ ನಡೆಯುತ್ತಿರುವ 96ನೇ ಶಿವರಾತ್ರಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶೀಗಳು, ಮಾನವನಿಗೆ ಭೌತಿಕವಾಗಿ ಆನಂದಕ್ಕಿಂತ ಮನಸ್ಸಿನ ಆನಂದ ಬಹಳ ಮುಖ್ಯವಾಗಿದೆ. ಮನಸ್ಸಿಬನ ಶಾಂತಿಗಾಗಿ ಪರಮಾತ್ಮನ ಮೊರೆ ಹೋಗಬೇಕಿದೆ. ಪರಮಾತ್ಮನ ಧಾನ್ಯ ಮಾಡದ ಹೊರೆತು ಆನಂದ ಸಿಗುವುದಿಲ್ಲ, ಮನಸ್ಸು ಅಂತರ್ ಮುಖವಾದಾಗ ಮಾತ್ರ ಆನಂದ ಸಿಗುತ್ತದೆ, ನಿದ್ರೆಯಲ್ಲಿ ಯಾವುದೇ ರೀತಿಯ ಭೌತಿಕ ಗುಣಗಳು ಇಲ್ಲ ಆದರೂ ಸಹಾ ನಿದ್ರೆಯನ್ನು ಮಾಡುವುದರ ಮೂಲಕ ಮನಸ್ಸಿಗೆ ಆನಂದ ಸಿಗುತ್ತದೆ ಎಂದರು.
ನಮ್ಮ ಮನಸ್ಸು ಪರಮಾತ್ಮನ ಕಡೆಗೆ ವಾಲಿದಾಗ ಮಾತ್ರ ಮೋಕ್ಷ ಸಿಗಲು ಸಾಧ್ಯವಿದೆ, ಪರಮಾತ್ಮನ ಕಡೆಗೆ ಶಾಂತಿಯ ಮಾರ್ಗವನ್ನು ತೋರಿಸುವವರು ಗುರುವಾಗಿದ್ದಾನೆ, ಭಗವಂತ ಬೇರೆ ಎಲ್ಲಾ ಪ್ರಾಣಿ ಪಕ್ಷಿಗಳಿಗಿಂತ ಮಾನವನಿಗೆ ಹೆಚ್ಚಿನ ರೀತಿಯಲ್ಲಿ ಬುದ್ದಿಯನ್ನು ನೀಡಿದ್ಧಾನೆ. ಇಂದಿನ ದಿನಮಾನದಲ್ಲಿ ವಿಜ್ಞಾನದಿಂದ ಎಲ್ಲವನ್ನು ಸಹಾ ಪಡೆಯಬಹುದಾಗಿದೆ, ಮಾನವನ ಬೌತಿಕ ಮತ್ತು ಅಧ್ಯಾತ್ಮಿಕದ ಬೆಳವಣಿಗೆಗೆ ಬುದ್ದಿ ಕಾರಣವಾಗಿದೆ. ಶಿವನ ಕಾರುಣ್ಯ ಪಡೆಯಲು ಗುರುವಿನ ಆಧಾರ ಕಾರಣವಾಗಿದೆ, ಪರಮಾತ್ಮನ ಕರುಣೆಯನ್ನು ಪಡೆಯಲು ಗುರುವಿನ ಕೃಪಾ ಕಟಾಕ್ಷ ಬೇಕಿದೆ. ಇಂದಿನ ದಿನಮಾನದಲ್ಲಿ ಸದ್ಗುರುವಿನ ಪಾತ್ರ ಅಧ್ಯಾತ್ಮಿಕವಾಗಿ ಹೆಚ್ಚಾಗಿದೆ. ನಮ್ಮನ್ನು ಪರಮಾತ್ಮನ ಕಡೆಗೆ ಕರೆದ್ಯೂಯಲು ಗುರುವಿನ ಪಾತ್ರ ಅಗತ್ಯವಾಗಿದೆ ಎಂದು ತಿಳಿಸಿದರು.

ಹಾವೇರಿಯ ಹಾನಗಲ್‍ನ ಆರಳೇಶ್ವರ ಸಿದ್ದಾರೂಢಮಠದ ಶ್ರೀ ಶಂಕರಾನಂದ ಶ್ರೀಗಳು ಮಾತನಾಡಿ, ಲೌಕಿಕ ಬದುಕಿನ ಜೀವನ ಸಾರ್ಥಕವಾಗುವುದಿಲ್ಲ, ಮುಕ್ತಿಯನ್ನು ಪಡೆಯಲು ಗುರುವಿನ ಪಾತ್ರ ಅತಿ ಮುಖ್ಯವಾಗಿದೆ, ಜಗತ್ತಿನಲ್ಲಿ ಮುಕ್ತಿಯನ್ನು ಪಡೆಯಲು ಮಾನವನಿಗೆ ಮಾತ್ರ ಇದೆ ಇದು ಬೇರೆ ಪ್ರಾಣಿ, ಪಕ್ಷಿಗಳಿಗೆ ಇಲ್ಲವಾಗಿದೆ, ಸುಖಗಳಲ್ಲಿ ದುಃಖ ಮಿಶ್ರಿತವಾಗಿದೆ, ದುಃಖ ಇಲ್ಲದ ಸುಖ ಮುಕ್ತಿಯ ಸುಖವಾಗಿದೆ, ಮುಕ್ತಿಯನ್ನು ಪಡೆಯಲು ಜ್ಞಾನ ಅಗತ್ಯವಾಗಿದೆ. ದೈವಿ ಸಂಪತ್ ಇದ್ದಾಗ ಮಾತ್ರ ಮುಕ್ತಿಯನ್ನು ಪಡೆಯಲು ಸಾಧ್ಯವಿದೆ, ಮನಸ್ಸುಗಳ ಶುದ್ದಿಗಾಗಿ ಸತ್ಸಂಗಗಳು ಆಗತ್ಯವಾಗಿದೆ ಎಂದರು.
ಹಾವೇರಿಯ ಕೂಸನೂರಿನ ಶ್ರೀ ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನಂದ ಶ್ರೀಗಳು ಮಾತನಾಡಿ, ಆಂತಃಕರಣದಲ್ಲಿ ದ್ವೇಷ ಪಾಪ ಕಾರ್ಯಗಳನ್ನು ಮಾಡಿದಾಗ ಮನಸ್ಸು ಚಂಚಲವಾಗುತ್ತದೆ, ಇದರ ನಿಗ್ರಹಣೆಗೆ ಗುರುವಿನ ಮೊರೆ ಹೋಗುವುದು ಅಗತ್ಯವಾಗಿದೆ. ಈ ರೀತಿಯಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನಮ್ಮ ಮನಸ್ಸು ಶಾಂತಿಯಿಂದ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಳಿಯಾಳದ ನಿತ್ಯಾನಂದಾಶ್ರಮದ ಶ್ರೀ ಸುಬ್ರಹ್ಮಣ್ಯ ಶ್ರೀಗಳು, ಹರಿಹರದ ಶ್ರೀ ಸಿದ್ದಾಶ್ರಮದ ಯೋಗಾನಂದ ಶ್ರೀಗಳು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಅನಿತಾ ಮಾತಾಜಿ ಸಾನೀಧ್ಯವನ್ನು ವಹಿಸಿದ್ದರು.
![]()