ಪೆಟ್ರೋಲ್‌ ಬಂಕ್‌ಗೆ ಡಿಕ್ಕಿ ಹೊಡೆದ ಕೆಮಿಕಲ್‌ ತುಂಬಿದ ಲಾರಿ, 40 ವಾಹನ ಭಸ್ಮ, 6 ಮಂದಿ ಸಾವು!

ಜೈಪುರ (ಡಿ.20): ಕೆಮಿಕಲ್‌ ತುಂಬಿದ ಲಾರಿಯೊಂದು ಎಲ್‌ಪಿಜಿ ತುಂಬಿದ ಟ್ರಕ್‌ ಹಾಗೂ ಇತರ ವಾಹನಗಳು ಮಾತ್ರವಲ್ಲ ಜೈಪು-ಅಜ್ಮೀರ್‌ ಹೆದ್ದಾರಿಯಲ್ಲಿದ್ದ ಪೆಟ್ರೋಲ್‌ ಬಂಕ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಕನಿಷ್ಠ 6 ಮಂದಿ ಸುಟ್ಟು ಭಸ್ಮವಾಗಿದ್ದರೆ, 41ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇಡೀ ಪ್ರದೇಶದಲ್ಲಿ ದೊಡ್ಡ ಮಟ್ಟದ ಅಗ್ನಿ ವ್ಯಾಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ವಾಹನಗಳ ನಡುವೆ ಢಿಕ್ಕಿ ನಡೆದಿದೆ. ಆ ಬಳಿಕ, ಬೆಂಕಿ ಭಂಕ್ರೋಟಾ ಪ್ರದೇಶಲ್ಲಿರುವ ಪೆಟ್ರೋಲ್‌ ಬಂಕ್‌ಗೆ ವ್ಯಾಪಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೆಟ್ರೋಲ್‌ ಬಂಕ್‌ನಲ್ಲಿ ನಿಲ್ಲಿಸಲಾಗಿದ್ದು ಹಲವಾರು ವಾಹನಗಳು ಕೂಡ ಬೆಂಕಿಗೆ ಆಹುತಿಯಾಗಿದೆ.  ಸುಮಾರು 20 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಲಾಯಿತು. ಘಟನೆಯ ನಂತರ, ಪೊಲೀಸರು ಗಾಯಾಳುಗಳನ್ನು ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ.

ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಇಂಧನ ಕೇಂದ್ರದಿಂದ ಭಾರಿ ಜ್ವಾಲೆಗಳು ಹೊರಬರುತ್ತಿರುವುದು ಸೋಶಿಯಲ್‌ ಮೀಡಿಯಾದಲ್ಲಿ ದಾಖಲಾಗಿದೆ. ಘಟನೆಯ ನಂತರ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

“ಜೈಪುರ-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಬೆಂಕಿ ಅವಘಡದಲ್ಲಿ ನಾಗರಿಕರು ಸಾವನ್ನಪ್ಪಿದ ದುಃಖದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗಿದೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ನಾನು ಎಸ್‌ಎಂಎಸ್ ಆಸ್ಪತ್ರೆಗೆ ಹೋಗಿ ತಕ್ಷಣ ಒದಗಿಸುವಂತೆ ವೈದ್ಯರಿಗೆ ಸೂಚಿಸಿದೆ. ಸ್ಥಳೀಯ ಆಡಳಿತ ಮತ್ತು ತುರ್ತು ಸೇವೆಗಳು ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳು ಮತ್ತು ರಕ್ಷಣಾ ಕಾರ್ಯವನ್ನು ಮುಂದುವರೆಸಿದೆ..’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಘಟನೆಯಲ್ಲಿ 41 ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಜೈಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಜಿತೇಂದ್ರ ಸೋನಿ ತಿಳಿಸಿದ್ದಾರೆ. “ಸುಮಾರು 40 ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ದಳ ಮತ್ತು ಆಂಬುಲೆನ್ಸ್‌ಗಳು ಸ್ಥಳಕ್ಕೆ ತಲುಪಿವೆ. ಪರಿಹಾರ ಕಾರ್ಯ ನಡೆಯುತ್ತಿದೆ. ಬೆಂಕಿಯನ್ನು ನಂದಿಸಲಾಗಿದೆ ಮತ್ತು ಒಂದರಿಂದ ಎರಡು ವಾಹನಗಳು ಮಾತ್ರ ಉಳಿದಿವೆ. ಘಟನೆಯಲ್ಲಿ ಸುಮಾರು 41 ಜನರು ಗಾಯಗೊಂಡಿದ್ದಾರೆ. ಒಂದರ ಹಿಂದೆ ಒಂದರಂತೆ ಹಲವು ವಾಹನಗಳು ಡಿಕ್ಕಿ ಹೊಡೆದುಕೊಂಡು ಬೆಂಕಿ ನಂದಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಜೈಪುರ ಡಿಎಂ ತಿಳಿಸಿದ್ದಾರೆ.

Source : https://kannada.asianetnews.com/india-news/rajasthan-jaipur-fuel-pump-chemical-laden-truck-crashes-6-killed-sets-off-huge-fire-san-sos081

Leave a Reply

Your email address will not be published. Required fields are marked *