LPG Price Cut: ಆಗಸ್ಟ್ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 100 ರೂ. ಇಳಿಕೆ ಕಂಡು ಬಂದಿದೆ. ಕಳೆದ ತಿಂಗಳು 1780 ರೂಪಾಯಿ ಇದ್ದ 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಇದೀಗ 1680 ರೂಪಾಯಿಗೆ ಲಭ್ಯವಾಗಲಿದೆ.

LPG Price Cut: ನಿರಂತರ ಹಣದುಬ್ಬರದಿಂದಾಗಿ ತತ್ತರಿಸಿದ್ದ ಜನರಿಗೆ ಆಗಸ್ಟ್ ಮಾಸದ ಮೊದಲ ದಿನವೇ ಶುಭ ಸುದ್ದಿಯೊಂದು ಸಿಕ್ಕಿದೆ. ಇದೀಗ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಘೋಷಿಸಿವೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 100 ರೂ.ಗಳಷ್ಟು ಇಳಿಕೆ ಮಾಡಿವೆ. ಕಳೆದ ತಿಂಗಳು 1780 ರೂಪಾಯಿ ಇದ್ದ 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಇದೀಗ 1680 ರೂಪಾಯಿಗೆ ಲಭ್ಯವಾಗಲಿದೆ.
27 ದಿನಗಳ ನಂತರ ಸಿಲಿಂಡರ್ ಬೆಲೆ ಇಳಿಕೆ:
ತೈಲ ಕಂಪನಿಗಳು ಜುಲೈ 4, 2023ರಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏಳು ರೂಪಾಯಿಗಳಷ್ಟು ಹೆಚ್ಚಿಸಿದ್ದವು. ಇದೀಗ 27 ದಿನಗಳ ನಂತರ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 100ರೂ.ಗಳಷ್ಟು ಕಡಿತಗೊಳಿಸಲಾಗಿದೆ. ಇದಕ್ಕೂ ಮೊದಲು ಮುನ್ನ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿತ್ತು.
ವಾಸ್ತವವಾಗಿ, ಮಾರ್ಚ್ 1, 2023ರಲ್ಲಿ 2119.50ರೂ. ಇದ್ದ ಸಿಲಿಂಡರ್ ಬೆಲೆಯನ್ನು ಏಪ್ರಿಲ್ ತಿಂಗಳಿನಲ್ಲಿ 2028 ರೂ.ಗಳಿಗೆ ಇಳಿಸಲಾಗಿದ್ದು. ಬಳಿಕ ಮೇ ತಿಂಗಳಿನಲ್ಲಿ 1856.50 ರೂ., ಜ್ಯೂನ್ ತಿಂಗಳಿನಲ್ಲಿ 1773 ರೂ. ಗಳಿಗೆ ಇಳಿಕೆ ಮಾಡಲಾಗಿತ್ತು. ಇದಾದ ನಂತರ ಇದರ ಬೆಲೆಯನ್ನು ಜುಲೈ ತಿಂಗಳಿನಲ್ಲಿ ಏಳು ರೂಪಾಯಿ ಹೆಚ್ಚಿಸುವ ಮೂಲಕ ಸಿಲಿಂಡರ್ ದರ 1780ರೂ.ಗಳಿಗೆ ತಲುಪಿತ್ತು.
ನಗರ | ಬೆಲೆ |
ದೆಹಲಿ | 1680 ರೂ. |
ಕೋಲ್ಕತ್ತಾ | 1802.50 ರೂ. |
ಮುಂಬೈ | 1640.50ರೂ. |
ಚೆನ್ನೈ | 1852.50ರೂ. |
ಪ್ರಸ್ತುತ, ವಾಣಿಜ್ಯ 19 ಕೆಜಿ ಸಿಲಿಂಡರ್‌ಗಳಲ್ಲಿ ಮಾತ್ರ ಕಡಿತ ಮಾಡಲಾಗಿದೆ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇನ್ನೂ ಯಾವುದೇ ಬದಲಾವಣೆಯಾಗಿಲ್ಲ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಯಾವುದೇ ರಾಜ್ಯಗಳಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಅಂದರೆ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ರಾಷ್ಟ್ರ ರಾಜಧಾನಿಯಲ್ಲಿ ದೇಶೀಯ ಸಿಲಿಂಡರ್ ಬೆಲೆ ಕಳೆದ ತಿಂಗಳಂತೆ 1103 ರೂ.ನಲ್ಲಿ ಸ್ಥಿರವಾಗಿದೆ. ಗಮನಾರ್ಹವಾಗಿ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಮಾರ್ಚ್ 01, 2023ರಂದು ಮಾಡಲಾಗಿತ್ತು. ಆದರೆ, ಕಳೆದ ಐದು ತಿಂಗಳುಗಳಿಂದ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಗ 1053 ರೂಪಾಯಿ ಇದ್ದ ಗೃಹೋಪಯೋಗಿ ಸಿಲಿಂಡರ್ ಬೆಲೆಯನ್ನು 1103ರೂ.ಗಳಿಗೆ ಏರಿಸಲಾಯಿತು. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರ ಯಾವಾಗ ಪರಿಹಾರ ನೀಡುತ್ತದೆ ಎಂಬುದನ್ನೂ ಕಾದುನೋಡಬೇಕಿದೆ.