LSG vs CSK: ಸತತ 5 ಸೋಲುಗಳ ಬಳಿಕ ಕೊನೆಗೂ ಗೆದ್ದ ಚೆನ್ನೈ! ಲಖನೌ ವಿರುದ್ಧ ರೋಚಕ ಗೆಲುವು ತಂದುಕೊಟ್ಟ ನಾಯಕ ಧೋನಿ.

ಚೆನ್ನೈ ಸೂಪರ್ ಕಿಂಗ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್​ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ. ಧೋನಿ 11 ಎಸೆತಗಳಲ್ಲಿ 26 ರನ್​ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಜಯದ ಹಾದಿಗೆ ಮರಳಿದೆ. ಲಖನೌದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್​ಗಳ ರೋಚಕ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2ನೇ ಗೆಲುವು ಪಡೆದಿದೆ. ಲಖನೌ ಸೂಪರ್ ಜೈಂಟ್ಸ್ ನೀಡಿದ್ದ 167ರನ್​ಗಳ ಸಾಧಾರಣ ಗುರಿಯನ್ನ ಚೆನ್ನೈ ಸೂಪರ್​ ಕಿಂಗ್ ಪ್ರಯಾಸದಿಂದ ಕೊನೆಯ ಓವರ್​ನಲ್ಲಿ ತಲುಪಿತು. ನಾಯಕ ಧೋನಿ ಕೊನೆಯಲ್ಲಿ ಅಬ್ಬರಿಸಿ ಕೈತಪ್ಪುತ್ತಿದ್ದ ಗೆಲುವನ್ನ ಸಿಎಸ್​ಕೆ ಕಡೆಗೆ ತಿರುಗಿಸಿದರು.  19. 3 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಧೋನಿ ಕೇವಲ 11 ಎಸೆತಗಳಲ್ಲಿ26 ರನ್​ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

167ರನ್​ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಸಿಎಸ್​ಕೆ ಉತ್ತಮ ಆರಂಭ ಪಡೆದುಕೊಂಡಿತು. ಇಂದೆ ತಂಡದಲ್ಲಿ ಅವಕಾಶ ಪಡೆದಿದ್ದ ಶೇಖ್ ರಶೀದ್ ಉತ್ತಮ ಆರಂಭ ಒದಗಿಸಿಕೊಟ್ಟರು.  ರಚಿನ್ ರವೀಂದ್ರ ಜೊತೆಗೆ ಮೊದಲ ವಿಕೆಟ್​ಗೆ 4.5 ಓವರ್​ಗಳಲ್ಲಿ52 ರನ್ ಕಲೆಯಾಕಿ ಭದ್ರ ಬುನಾದಿಯಾಕಿದರು.  19 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 27 ರನ್​ಗಳಿಸಿ ಔಟ್ ಆದರು. ಮೊದಲ ವಿಕೆಟ್ ಬಳಿಕ ಸಿಎಸ್​ಕೆ ಪವರ್​ ಪ್ಲೇನಲ್ಲಿ ಸಿಕ್ಕಂತಹ ಆರಂಭವನ್ನ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ತ್ರಿಪಾಠಿ 10 ಎಸೆತಗಳಲ್ಲಿ ಕೇವಲ 9 ರನ್​ಗಳಿಸಿದರೆ,  ರವೀಂದ್ರ ಜೇಡೇಜಾ ದುಬೆಗಿಂತ ಮೇಲಿನ ಕ್ರಮಾಂಕಕ್ಕೆ ಬಡ್ತಿ ಪಡೆದರೂ ಕೇವಲ 7 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ವಿಜಯ್ ಶಂಕರ್ ಆಟ 9ಕ್ಕೆ ಸೀಮಿತವಾಯಿತು.

ಗೆಲುವಿನ ಗಡಿ ದಾಟಿಸಿದ ಧೋನಿ-ದುಬೆ

ಧೋನಿ ಬರುವವರೆಗೂ ರನ್​ಗಳಿಸಲು ಪರದಾಡುತ್ತಿದ್ದ ದುಬೆ ಧೋನಿ ಬಂದ ನಂತರ ಲಯಕ್ಕೆ ಮರಳಿದರು. ಧೋನಿ ಕೇವಲ 11 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ಸಹಿತ ಅಜೇಯ 26 ರನ್​ಗಳಿಸಿದರೆ, ದುಬೆ 37 ಎಸೆಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 43 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಸತತ 5 ಸೋಲು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಇಂದು ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್​​ಗೆ ಇಳಿದ ಲಖನೌ ತಂಡ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿರು. ಉತ್ತಮ ಫಾರ್ಮ್​ನಲ್ಲಿದ್ದ ಐಡೆನ್ ಮಾರ್ಕ್ರಮ್ (6) ಹಾಗೂ ನಿಕೋಲಸ್ ಪೂರನ್​ (8) ಕ್ರಮವಾಗಿ ಖಲೀಲ್ ಅಹ್ಮದ್ ಹಾಗೂ ಕಾಂಬೋಜ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

ನಂತರ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್​ 33 ಎಸೆತಗಳಲ್ಲಿ 50 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಇಂದು ತಮ್ಮ ನೈಜ ಆಟವನ್ನು ಆಡಲು ವಿಫಲರಾದ ಮಾರ್ಷ್ 25 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 30 ರನ್​ಗಳಿಸಿ ಜಡೇಜಾ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ನಂತರ ಬದೋನಿ ನಾಯಕನ ಜೊತೆ ಸೇರಿ 32 ರನ್​ ಸೇರಿಸಿದರು. ಬದೋನಿ 17 ಎಸೆತಗಳಲ್ಲಿ 1 ಬೌಂಡರಿ, ಸಿಕ್ಸರ್ ಸಹಿತ 22 ರನ್​ಗಳಿಗೆ ಸೀಮಿತವಾದರು.

5ನೇ ವಿಕೆಟ್​ಗೆ​ ಪಂತ್ ಜೊತೆಗೂಡಿ ಅಬ್ದುಲ್ ಸಮದ್ ಅಜೇಯ ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನ 170ಕ್ಕೆ ಹೆಚ್ಚಿಸಿದರು. ರಿಷಭ್ ಪಂತ್ ಎಸೆತಗಳಲ್ಲಿ 5 ಬೌಂಡರಿ, 5ಸಿಕ್ಸರ್​ಗಳ ಸಹಿತ ಅಜೇಯ 70 ರನ್​ಗಳಿಸಿದರೆ, ಸಮದ್ ಎಸೆತಗಳಲ್ಲಿ 3 ಸಿಕ್ಸರ್​ಗಳ ಸಹಿತ ಅಜೇಯ 30 ರನ್​ಗಳಿಸಿದರು.

ಸಿಎಸ್‌ಕೆ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಎಲ್‌ಎಸ್‌ಜಿ ಒಂದು ಬದಲಾವಣೆ ಮಾಡಲಿದೆ. ಸಿಎಸ್‌ಕೆ ತಂಡ ಆರ್ ಅಶ್ವಿನ್ ಮತ್ತು ಡೆವೊನ್ ಕಾನ್ವೇ ಅವರನ್ನು ಕೈಬಿಟ್ಟಿದೆ. ಅವರ ಸ್ಥಾನದಲ್ಲಿ ಜೇಮೀ ಓವರ್ಟನ್ ಮತ್ತು ಶೇಖ್ ರಶೀದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Source : News18 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *