

ಐಪಿಎಲ್ನ 45 ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗಿವೆ. ಕೊನೆಯ ಮುಖಾಮುಖಿಯಲ್ಲಿ ಧೋನಿ ಪಡೆ 12 ರನ್ಗಳಿಂದ ಗೆದ್ದಿತ್ತು. ಈ ಪಂದ್ಯಕ್ಕೂ ಮುನ್ನ ಲಕ್ನೋಗೆ ಭಾರಿ ಹಿನ್ನಡೆಯುಂಟಾಗಿದ್ದು, ತಂಡದ ನಾಯಕ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಕೃನಾಲ್ ಪಾಂಡ್ಯ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸದ್ಯ 10 ಅಂಕಗಳೊಂದಿಗೆ ಲಕ್ನೋ ಮೂರನೇ ಸ್ಥಾನದಲ್ಲಿದ್ದು, ಅಷ್ಟೇ ಅಂಕಗಳೊಂದಿಗೆ ಚೆನ್ನೈ ನಾಲ್ಕನೇ ಸ್ಥಾನದಲ್ಲಿದೆ.