160 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕೇವಲ 17.5 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ಗೆದ್ದು ಬೀಗಿತು. ಮಾತ್ರವಲ್ಲ ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಜೇಯ ಅರ್ಧಶತಕ ಸಿಡಿಸಿ ಲಖನೌ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ 2025ನೇ ಸಾಲಿನ 40ನೇ ಪಂದ್ಯದಲ್ಲಿ ಲಖನೌನ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ನಿಗದಿತ 20 ಓವರ್ಗಳಲ್ಲಿ 159 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. 160 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕೇವಲ 17.5 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ಗೆದ್ದು ಬೀಗಿತು. ಮಾತ್ರವಲ್ಲ ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಜೇಯ ಅರ್ಧಶತಕ ಸಿಡಿಸಿ ಲಖನೌ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಉತ್ತಮ ಆರಂಭದ ಹೊರತಾಗಿಯೂ ಧಿಡೀರ್ ಕುಸಿತ ಅನುಭವಿಸಿತು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಲಖನೌ ಪರವಾಗಿ ಆರಂಭಿಕರಾದ ಮಾರ್ಕ್ರಂ 52, ಮಿಚೆಲ್ ಮಾರ್ಷ್ 45, ಡೇವಿಡ್ ಮಿಲ್ಲರ್ 14 ಹಾಗೂ ಆಯುಷ್ ಬದೋನಿ 36 ರನ್ ಗಳಿಸಿದರು. ಉಳಿದ ಯಾವುದೇ ಆಟಗಾರರು ಕೂಡ ದೊಡ್ಡ ಮೊತ್ತ ಕಲೆಹಾಕಲು ನೆರವಾಯಿತು.
ಡೆಲ್ಲಿ ಪರವಾಗಿ ಅಮೋಘ ಬೌಲಿಂಗ್ ದಾಳಿ ನಡೆಸಿದ ಮುಖೇಶ್ ಕುಮಾರ್ 4, ಚಾಮೀರ ಹಾಗೂ ಮಿಚೆಲ್ ಸ್ಟಾರ್ಕ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಇನ್ನೂ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆರಂಭಿಕರಾದ ಅಭಿಷೇಕ್ ಪೋರೆಲ್ 51, ಕರುಣ್ ನಾಯರ್ 15, ಕೆಎಲ್ ರಾಹುಲ್ ಅಜೇಯ 57 ಹಾಗೂ ಅಕ್ಸರ್ ಪಟೇಲ್ ಅಜೇಯ 34 ರನ್ ಸಿಡಿಸುವ ಮೂಲಕ ಸುಲಭ ಜಯ ಸಾಧಿಸಿತು. ಲಖನೌ ಪರ ಏಡನ್ ಮಾರ್ಕಂ 2 ವಿಕೆಟ್ ಪಡೆದು ಮಿಂಚಿದರು. ಇಂದಿನ ಪಂದ್ಯ ಗೆಲ್ಲು ಮೂಲಕ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
Source : News18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1