
ಇಂದಿನ ಡಬಲ್ ಹೆಡರ್ ಎರಡನೇ ಪಂದ್ಯದಲ್ಲಿ ಲಕ್ನೋ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಡೆಲ್ಲಿ ತಂಡ ಒಮ್ಮೆಯೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. 2020 ರಲ್ಲಿ ಮೊದಲ ಬಾರಿಗೆ ಫೈನಲ್ ಆಡಿತ್ತಾದರೂ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಂಬೈ ಎದುರು ಸೋತಿತ್ತು. ಈ ಬಾರಿ ಮೊದಲ ಪ್ರಶಸ್ತಿ ಗೆಲ್ಲುವುದು ಡೆಲ್ಲಿಯ ಪ್ರಯತ್ನ. ಈ ಬಾರಿ ಈ ತಂಡದ ನಾಯಕತ್ವವನ್ನು ಡೇವಿಡ್ ವಾರ್ನರ್ ವಹಿಸಿಕೊಂಡಿದ್ದು, ತಂಡವನ್ನು ಚಾಂಪಿಯನ್ ಮಾಡಲು ಯತ್ನಿಸಲಿದ್ದಾರೆ. ಇತ್ತ ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಳೆದ ಸೀಸನ್ನಲ್ಲಿ ಮೊದಲ ಬಾರಿಗೆ ಐಪಿಎಲ್ ಆಡಿತ್ತು. ಆಡಿದ ಮೊದಲ ಸೀಸನ್ನಲ್ಲಿಯೇ ಈ ತಂಡ ಪ್ಲೇ ಆಫ್ ಆಡಿತ್ತು. ಇದೀಗ ಕೆಎಲ್ ರಾಹುಲ್ ನಾಯಕತ್ವದಲ್ಲಿ ಈ ತಂಡವು ಈ ಬಾರಿ ಗೆಲುವಿನ ಆರಂಭ ಮಾಡಲು ಪ್ರಯತ್ನಿಸಲಿದೆ.
Views: 0