ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯ 11ನೇ ಪಂದ್ಯ ಲಕ್ನೋ ಸೂಪರ್ ಜೆಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಏಕಾನ ಸ್ಟೇಡಿಯಂ ನಲ್ಲಿ ನಡೆಯಿತು.
- ಟಾಸ್ಕ್ ಗೆದ್ದ ಲಕ್ನೋ ತಂಡ ಬ್ಯಾಟಿಂಗ್ ಮಾಡಲು ನಿರ್ಧರಿಸಿತು.
- ತವರಿನಲ್ಲಿ ತನ್ನ ಮೊದಲ ಗೆಲುವನ್ನು ಸಾಧಿಸುವ ಮೂಲಕ ಪ್ರಾರಂಭಿಕ ಗೆಲುವನ್ನು ಪಡೆದುಕೊಂಡಿದೆ.
- ಶಿಖರ್ ಧವನ್ 50 ಎಸೆತಗಳಲ್ಲಿ 70 ರನ್ 7 ಫೋರ್ ಹಾಗೂ 3 ಸಿಕ್ಸ ಹೊಡೆಯುವ ಮೂಲಕ ಭರ್ಜರಿ ಪ್ರಾರಂಭವನ್ನು ನೀಡಿದರು.

ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಪ್ರಾರಂಭಿಸಿದ ಲಕ್ನೋ ಸೂಪರ್ ಜೆಂಟ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಕ್ವಿಂಟನ್ ಡಿ ಕಾಕ್ 54(38), ಕೆ ಎಲ್ ರಾಹುಲ್ 15(9), ದೇವದತ್ ಪಡಿಕಲ್ 9(6), ಮಾರ್ಕಸ್ ಸ್ಟೋಯಿನಿಸ್ 19(12), ನಿಕೋಲಸ್ ಪೂರನ್ 42(21), ಆಯುಷ್ ಬದೋನಿ 8(10), ಕೃನಾಲ್ ಪಾಂಡ್ಯ 43(22), ರವಿ ಬಿಷ್ಣೊಯ್ 0(1), ಮೊಹ್ಸಿನ್ ಖಾನ್ 2(1), ನವೀನ್ ಉಲ್ಹಕ್ 0(0) ರನ್ ಗಳಿಸಿದರು. ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಸ್ಯಾಮ್ ಕರ್ರಾನ್ 3, ಅರ್ಷದೀಪ್ ಸಿಂಗ್ 2, ಕಗಿಸೋ ರಬಾಡ್ 1, ರಾಹುಲ್ ಚಹಾರ್ 1 ವಿಕೆಟ್ ಪಡೆದುಕೊಂಡರು.
ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಶಿಖರ್ ಧವನ್ ಹಾಗೂ ಜಾನಿ ಬೈಸ್ಟೋರ್ವ ಕಣಕ್ಕಿಳಿದರು. ಶಿಖರ್ ಧವನ್ 50 ಎಸೆತಗಳಲ್ಲಿ 70 ರನ್ 7 ಫೋರ್ ಹಾಗೂ 3 ಸಿಕ್ಸ ಹೊಡೆ ಮೂಲಕ ಭರ್ಜರಿ ಪ್ರಾರಂಭವನ್ನು ನೀದಿದರು. ಜಾನಿ ಬೈಸ್ಟೋರ್ವ 29 ಎಸೆತಗಳಲ್ಲಿ 42 ರನ್ 3 ಸಿಕ್ಸ್ ಹಾಗೂ ಫೋರ್ ಬಾರಿಸಿದರು. ಪ್ರಭಾಸಿಮ್ರಾನ್ ಸಿಂಗ್ 19(7), ಜಿತೇಶ್ ಶರ್ಮಾ 6(9), ಲಿಯಾಮ್ ಲಿವಿಂಗ್ಸ್ಟೋನ್ 28(17), ಸಾಮ್ ಕರ್ರಾನ್ 0(1), ಶಶಾಂಕ್ ಸಿಂಗ್ 9(7) ರನ್ಗಳನ್ನು ಹೊಡೆದರು.ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ಲಕ್ನೋ ತಂಡದ ಮೊಹ್ಸಿನ್ ಖಾನ್ 2 ಹಾಗೂ ಮಯಾಂಕ್ ಯಾದವ್ 3 ವಿಕೆಟ್ ಪಡೆದರು.
ಲಕ್ನೋ ಸೂಪರ್ ಜೇಂಟ್ಸ್ ತಂಡ ನೀಡಿದ ಟಾರ್ಗೆಟ್ಟನ್ನು ತಲುಪುವ ಗುರಿೊಂದಿಗೆ ಪಂಜಾಬ್ ತಂಡ ಆರಂಭಿಕವಾಗಿ ಶಿಖರ್ ಧವನ್ ಮತ್ತು ಜಾನಿ ಬೈಸ್ಟೋರ್ವ ಭರ್ಜರಿ ಆರಂಭವನ್ನು ಮಾಡಿದ್ದಾದರೂ, ಗೆಲುವಿನ ಗುರಿಯನ್ನು ಸಾಧಿಸಲಾಗಲಿಲ್ಲ.
ಆದರೆ ಈ ಟೂರ್ನಿಯ 2ನೇ ಪಂದ್ಯ ಆಡುತ್ತಿರುವ ಲಕ್ನೋ ತಂಡ ತವರಿನಲ್ಲಿ ತನ್ನ ಮೊದಲ ಗೆಲುವನ್ನು ಸಾಧಿಸುವ ಮೂಲಕ ಪ್ರಾರಂಭಿಕ ಗೆಲುವನ್ನು ಪಡೆದುಕೊಂಡಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1