
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2025 ಐಪಿಎಲ್ನ 7ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 191 ರನ್ಗಳ ಗುರಿಯನ್ನ ಲಕ್ನೋ ಸೂಪರ್ ಜೈಂಟ್ಸ್ ಇನ್ನು 23 ಎಸೆತಗಳಿರುವಂತೆಯೇ ತಲುಪುವ ಮೂಲಕ ದಿಗ್ವಿಜಯ ಸಾಧಿಸಿದೆ.


ಸನ್‌ರೈಸರ್ಸ್ ಹೈದರಾಬಾದ್ ಅಬ್ಬರವನ್ನ ಅವರದ್ದೇ ದಾರಿಯಲ್ಲಿ ಹೋಗಿ ತವರಿನಲ್ಲಿ ಆರ್ಭಟಕ್ಕೆ ಲಕ್ನೋ ಸೂಪರ್ ಜೈಂಟ್ಸ್ (LSG) ಬ್ರೇಕ್ ಹಾಕಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2025 ಐಪಿಎಲ್ನ 7ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 191 ರನ್ಗಳ ಗುರಿಯನ್ನ ಲಕ್ನೋ ಸೂಪರ್ ಜೈಂಟ್ಸ್ ಇನ್ನು 23 ಎಸೆತಗಳಿರುವಂತೆಯೇ ತಲುಪುವ ಮೂಲಕ ದಿಗ್ವಿಜಯ ಸಾಧಿಸಿದೆ.

191 ರನ್ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡ 16.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕ ಬ್ಯಾಟರ್ ಐಡೆನ್ ಮಾರ್ಕ್ರಮ್ ((1) ವಿಕೆಟ್ ಬೇಗ ಕಳೆದುಕೊಂಡಿತು. ಆದರೆ ಮಿಚೆಲ್ ಮಾರ್ಷ್ (52) ಹಾಗೂ ಪೂರನ್ (70) ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿ ಪೂರನ್ 26 ಎಸೆತಗಳಲ್ಲಿ ತಲಾ 6 ಬೌಂಡರಿ, 6 ಸಿಕ್ಸರ್ಗಳ ಸಹಿತ 70 ರನ್ ಸಿಡಿಸಿ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಆದರೆ ಅಷ್ಟರಲ್ಲಾಗಲೇ ಪಂದ್ಯವನ್ನ ಹೈದರಾಬಾದ್ ಕೈಯಿಂದ ಕಸಿದುಕೊಂಡಿದ್ದರು. ಇವರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದಿದ್ದ ಮಿಚೆಲ್ ಮಾರ್ಷ್ ಕೂಡ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು. ಅವರು 31 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 52 ರನ್ಗಳಿಸಿದರು.

ನಾಯಕ ರಿಷಭ್ ಪಂತ್ (15) ಹಾಗೂ ಆಯುಷ್ ಬದೋನಿ (6) ಇಂದೂ ಕೂಡ ವಿಫಲರಾದರು. ಆದರೆ ಕೊನೆಯಲ್ಲಿ ಅಬ್ಬರಿಸಿದ ಹೈದರಾಬಾದ್ ತಂಡ ಮಾಜಿ ಆಲ್ರೌಂಡರ್ ಅಬ್ದುಲ್ ಸಮದ್ ಕೇವಲ 8 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳೊಂದಿಗೆ ಅಜೇಯ 22 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಡೇವಿಡ್ ಮಿಲ್ಲರ್ ಅಜೇಯ 13 ರನ್ ಸಿಡಿಸಿದರು.
ಸನ್‌ರೈಸರ್ಸ್ ಹೈದರಾಬಾದ್ ಪರ ನಾಯಕ ಪ್ಯಾಟ್ ಕಮಿನ್ಸ್ 29ಕ್ಕೆ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 37ಕ್ಕೆ1, ಆ್ಯಡಂ ಜಂಪಾ 46ಕ್ಕೆ1, ಹರ್ಷಲ್ ಪಟೇಲ್ 28ಕ್ಕೆ1 ವಿಕೆಟ್ ಪಡೆದರು.
ಹೆಡ್ ಆಟ ವ್ಯರ್ಥ
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಶಾರ್ದೂಲ್ ಠಾಕೂರ್ ದಾಳಿಗೆ ಸಿಲುಕಿ ಒದ್ದಾಡಿತು. ಇನ್ಫಾರ್ಮ್ ಬ್ಯಾಟರ್ಗಳಾದ ಅಭಿಷೇಕ್ ವರ್ಮಾ (6) ಹಾಗೂ ಇಶಾನ್ ಕಿಶನ್(0) 3ನೇ ಓವರ್ನಲ್ಲೇ ಶಾರ್ದೂಲ್ ಠಾಕೂರ್ ದಾಳಿಗೆ ಸಿಲುಕಿ ಔಟ್ ಆದರು.
ಟ್ರಾವಿಸ್ ಹೆಡ್ 28 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ 47 ರನ್ ಸಿಡಿಸಿ ಚೇತರಿಕೆ ನೀಡಿದರು. ಅವರು ಔಟಾಗುವ ಮುನ್ನ ನಿತೀಶ್ ಜೊತೆ ಸೇರಿ 3ನೇ ವಿಕೆಟ್ಗೆ 67 ರನ್ ಸೇರಿಸಿದರು. 4ನೇ ವಿಕೆಟ್ಗೆ 34 ರನ್ಗಳ ಜೊತೆಯಾಟ ನೀಡಿದ್ದ ಕ್ಲಾಸೆನ್(24) ದುರಾದೃಷ್ಟಕರ ರನ್ಔಟ್ಗೆ ಬಲಿಯಾದರು. ನಿತೀಶ್ ನೀಡಿದ ಕ್ಯಾಚ್ಅನ್ನ ಪ್ರಿನ್ಸ್ ಯಾದವ್ ಡ್ರಾಪ್ ಮಾಡಿದರು. ಆ ಚೆಂಡು ನೇರವಾಗಿ ನಾನ್ ಸ್ಟ್ರೈಕರ್ ಸ್ಟಂಪ್ಗೆ ಬಡಿಯಿತು. ಕ್ಲಾಸೆನ್ ಕ್ರೀಸ್ ಬಿಟ್ಟು ಹೋಗಿದ್ದರಿಂದ ರನ್ಔಟ್ ಆದರು. ಇದರ ಬೆನ್ನಲ್ಲೇ 28 ಎಸೆತಗಳಲ್ಲಿ 32 ರನ್ಗಳಿಸಿದ್ದ ನಿತೀಶ್ ಕುಮಾರ್ ರೆಡ್ಡಿ ರವಿ ಬಿಷ್ಣೋಯ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಕೊನೆಯಲ್ಲಿ ಅಬ್ಬರಿಸಿದ ಅನಿಕೇತ್ ವರ್ಮಾ 15 ಎಸೆತಗಳಲ್ಲಿ 5 ಸಿಕ್ಸರ್ಗಳ ಸಹಿತ 36 ರನ್, ನಾಯಕ ಪ್ಯಾಟ್ ಕಮಿನ್ಸ್ ಕೇವಲ 4 ಎಸೆತಗಳಲ್ಲಿ 3 ಸಿಕ್ಸರ್ಗಳ ನೆರವಿನಿಂದ 18 ರನ್ಗಳಿಸಿ ತಂಡದಮೊತ್ತವನ್ನು ಹೆಚ್ಚಿಸಿದರು.
ಲಕ್ನೋ ಪರ ಶಾರ್ದೂಲ್ ಠಾಕೂರ್ 24ಕ್ಕೆ 4 ವಿಕೆಟ್ ಪಡೆದು ಮಿಂಚಿದರೆ, ಆವೇಶ್ ಖಾನ್, ದಿಗ್ವೇಶ್ ರಥಿ, ಪ್ರಿನ್ಸ್ ಯಾದವ್ ಹಾಘೂ ರವಿ ಬಿಷ್ಭೋಯ್ ತಲಾ 1 ವಿಕೆಟ್ ಪಡೆದರು.
ಎರಡು ತಂಡಗಳ ಪ್ಲೇಯಿಂಗ್ XI
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮ್ಮಿನ್ಸ್(ನಾಯಕ), ಸಿಮರ್‌ಜೀತ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ.
ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಐಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ವಿಕೀ/ನಾಯಕ), ಡೇವಿಡ್ ಮಿಲ್ಲರ್, ಆಯುಷ್ ಬದೋನಿ, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಆವೇಶ್ ಖಾನ್, ದಿಗ್ವೇಶ್ ರಥಿ, ಪ್ರಿನ್ಸ್ ಯಾದವ್.
Source: News 18 Kannada