

ಐಪಿಎಲ್ 10 ನೇ ಪಂದ್ಯದಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಲಕ್ನೋಗೆ ಇದು ಮೂರನೇ ಪಂದ್ಯವಾಗಿದ್ದು ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 12 ರನ್ಗಳಿಂದ ಸೋತಿತ್ತು. ಇದಕ್ಕೂ ಮುನ್ನ ಲಕ್ನೋ ತಂಡ ಡೆಲ್ಲಿ ಕ್ಯಾಪಿಟಲ್ ತಂಡವನ್ನು 50 ರನ್ಗಳಿಂದ ಸೋಲಿಸಿತ್ತು. ಇದೀಗ ಕಳೆದ ಪಂದ್ಯದಿಂದ ಹೊರಬರಲು ಲಕ್ನೋ ಹೋರಾಡಲಿದೆ. ಅದೇ ಹೊತ್ತಿಗೆ ಹೈದರಾಬಾದ್ ಗೆಲುವಿನ ಖಾತೆ ತೆರೆಯುವತ್ತ ಕಣ್ಣಿಟ್ಟಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿದ್ದ ಹೈದರಾಬದ್ 72 ರನ್ಗಳಿಂದ ಸೋತಿತ್ತು.
Views: 0