IPL 2023: ವಿಭಿನ್ನ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಲಕ್ನೋ ಸೂಪರ್ ಜೈಂಟ್ಸ್

IPL 2023: ಐಪಿಎಲ್​ನ 68ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ವಿಭಿನ್ನ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.ಕೆಕೆಆರ್ ತಂಡದ ತವರು ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ ಲಕ್ನೋ ತಂಡ ಜೆರ್ಸಿ ಬದಲಿಸಲು ನಿರ್ಧರಿಸಿರುವುದು ವಿಶೇಷ. ಅಂದರೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಲಕ್ನೋಗಿಂತ ಕೆಕೆಆರ್ ತಂಡಕ್ಕೆ ಹೆಚ್ಚಿನ ಪ್ರೇಕ್ಷಕರ ಬೆಂಬಲ ದೊರೆಯಲಿದೆ. ಆದರೆ ಈ ಬೆಂಬಲಕ್ಕೆ ಮಾಸ್ಟರ್ ಸ್ಟ್ರೋಕ್ ನೀಡಲು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಿರ್ಧರಿಸಿದ್ದಾರೆ.ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇ ಜೆರ್ಸಿ ಬದಲಾವಣೆ. ಅಂದರೆ ಪಶ್ಚಿಮ ಬಂಗಾಳದ ಜನರು ಕ್ರಿಕೆಟ್​ ಅನ್ನು ಎಷ್ಟು ಪ್ರೀತಿಸುತ್ತಾರೋ, ಅಷ್ಟೇ ಫುಟ್​​ಬಾಲ್​ ಅನ್ನು ಪ್ರೀತಿಸುತ್ತಾರೆ. ಅದರಲ್ಲೂ ಬಂಗಾಳದ ಪ್ರತಷ್ಠಿತ ಫುಟ್​ಬಾಲ್​ ಕ್ಲಬ್ ATK​ ಮೋಹನ್ ಬಗಾನ್​ಗೆ ಅಪಾರ ಅಭಿಮಾನಿಗಳಿದ್ದಾರೆ.ಇತ್ತ ಮೋಹನ್ ಬಗಾನ್ ಕ್ಲಬ್​ನ ಮಾಲೀಕರು ಸಂಜೀವ್ ಗೋಯೆಂಕಾ. ಅಂದರೆ ಇಂಡಿಯನ್ ಸೂಪರ್ ಲೀಗ್ (ಫುಟ್​ಬಾಲ್) ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗೋಯೆಂಕಾ ತಂಡಗಳನ್ನು ಹೊಂದಿದ್ದು, ಇದೀಗ ಇದನ್ನೇ ಮಾಸ್ಟರ್ ಸ್ಟ್ರೋಕ್ ಆಗಿ ಬಳಸಿ ಕೊಲ್ಕತ್ತಾ ಅಭಿಮಾನಿಗಳ ಮನಗೆಲ್ಲಲು ಪ್ಲ್ಯಾನ್ ರೂಪಿಸಿದ್ದಾರೆ.
ಅದರಂತೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ​ಮೋಹನ್ ಬಗಾನ್ ತಂಡದ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಪ್ರಸ್ತುತ ಇರುವ ಗಾಢ ನೀಲಿ ಜೆರ್ಸಿ ಬದಲಿಗೆ, ಹಸಿರು ಮತ್ತು ಮರೂನ್ ಬಣ್ಣಗಳ ಜೆರ್ಸಿಯಲ್ಲಿ ಎಲ್‌ಎಸ್‌ಜಿ ಈಡನ್ ಗಾರ್ಡನ್ಸ್‌ನಲ್ಲಿ ಕಾಣಿಸಿಕೊಳ್ಳಲಿದೆ. ಈ ಮೂಲಕ ಮೋಹನ್ ಬಗಾನ್ ಅಭಿಮಾನಿಗಳನ್ನು ಲಕ್ನೋ ಸೂಪರ್ ಜೈಂಟ್ಸ್​ನತ್ತ ಸೆಳೆಯುವ ಪ್ಲ್ಯಾನ್ ರೂಪಿಸಿದ್ದಾರೆ ಸಂಜೀವ್ ಗೋಯೆಂಕಾ.

source https://tv9kannada.com/photo-gallery/cricket-photos/ipl-2023-lsg-to-wear-jersey-similar-to-mohun-bagan-jersey-kannada-news-zp-579478.html

Leave a Reply

Your email address will not be published. Required fields are marked *