ಶತಮಾನದ ಮಹಾಕವಿ ಕುವೆಂಪುರವರಲ್ಲಿ ವೈಚಾರಿಕ ಚಿಂತನೆಯಿತ್ತು-ಎಂ.ಆರ್.ದಾಸೇಗೌಡ.

ಚಿತ್ರದುರ್ಗ : ಕುವೆಂಪುರವರ ಜನ್ಮದಿನದ ಅಂಗವಾಗಿ ಚಿತ್ರದುರ್ಗ ವಿಜ್ಞಾನ ಕೇಂದ್ರದಿಂದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಶ್ವಮಾನವ ದಿನಾಚರಣೆ ಉದ್ಗಾಟಿಸಿ ಮಾತನಾಡಿದ,ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಮೌಢ್ಯ, ಜಾತಿ, ಪುರೋಹಿತಶಾಹಿಗಳನ್ನು ಕಟುವಾಗಿ ವಿರೋಧಿಸುತ್ತಿದ್ದ ರಾಷ್ಟ್ರಕವಿ ಕುವೆಂಪುರವರ ಮಾತಿನ ಕಾವು ಇನ್ನು ಆರಿಲ್ಲ ಎಂದು ಹೇಳಿದರು.

ಧರ್ಮ ಜಾತಿಯಿಂದ ಪ್ರತಿಯೊಬ್ಬರು ಹೊರಬರಬೇಕಾದರೆ ನೈತಿಕ ಶಿಕ್ಷಣ ಬೇಕು. ಜಗತ್ತಿಗೆ ವಿಶ್ವಮಾನವ ಪ್ರೀತಿ ಬೇಕಿದೆ. ಜಾತಿ ಎನ್ನುವುದು ಕೆಟ್ಟ ರೋಗ. ಮನುಷ್ಯ ಕುಲ ಒಂದೆ ಎನ್ನುವ ಸಂದೇಶವನ್ನು ಕುವೆಂಪು ವಿಶ್ವಕ್ಕೆ ಸಾರಿದ್ದಾರೆ. ಜಾತಿ ಧರ್ಮ ನೈಸರ್ಗಿಕವಾದುದಲ್ಲ. ಸೃಷ್ಟಿ ಮಾಡಿಕೊಂಡಿರುವುದು. ಸಂಕುಚಿತವಾಗಿ ಬದುಕುವ ಬದಲು ವಿಶಾಲವಾದ ಮನೋಭಾವನೆಯಿಂದ ಜಾತಿ, ಧರ್ಮ, ಮತ, ಪಂಥಗಳನ್ನು ದಾಟಿ ವಿಶ್ವಮಾನವರಾಗಿ ಎಂದು ಹೇಳಿದ್ದ ಕುವೆಂಪುರವರ ವಿಚಾರಧಾರೆ, ಸಾಹಿತ್ಯಗಳನ್ನು ಇಂದಿನ ವಿದ್ಯಾರ್ಥಿಗಳು ಓದಬೇಕಿದೆ, ವರ್ಣಾಶ್ರಮ ಪದ್ದತಿಯನ್ನು ಬೇರು ಸಮೇತ ಕಿತ್ತು ಹಾಕಬೆನ್ನುವುದು ಕುವೆಂಪುರವರ ಆಸೆಯಾಗಿತ್ತು. ಹನ್ನರಡನೆ ಶತಮಾನದ ಬಸವಣ್ಣನವರ ಪರಂಪರೆಯನ್ನು ಅರ್ಥಮಾಡಿಕೊಂಡಿದ್ದ ಕುವೆಂಪುರವರು ದೇವಸ್ಥಾನ, ಮಂದಿರ, ಮಸೀದಿ, ಚರ್ಚ್‍ಗಳಿಂದ ಹೊರಬಂದು ಜ್ಞಾನದ ಮೂಲಕ ಭವಿಷ್ಯವನ್ನು ಕಂಡುಕೊಳ್ಳಬೇಕೆಂಬ ಸಂದೇಶವನ್ನು ಮನುಕುಲಕ್ಕೆ ಸಾರಿದರು. ಅವರ ಚಿಂತನೆ, ಆಚಾರ, ವಿಚಾರಗಳನ್ನು ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಜೆ.ಯಾದವರೆಡ್ಡಿ ಕರೆ ನೀಡಿದರು.

ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಹೇಮಂತರಾಜ್ ಮಾತನಾಡಿ ಕುವೆಂಪು, ಬುದ್ದ, ಬಸವ, ಅಂಬೇಡ್ಕರ್ ಇವರುಗಳನ್ನು ನೀವು ಓದದಿದ್ದರೆ ಎಷ್ಟೆ ಪದವಿ ಪಡೆದುಕೊಂಡರು ಪ್ರಯೋಜನವಿಲ್ಲ. ಮೌಢ್ಯ, ಪುರೋಹಿತಶಾಹಿಗಳನ್ನು ಕುವೆಂಪುರವರು ಬಲವಾಗಿ ವಿರೋಧಿಸುತ್ತಿದ್ದರು. ಸರ್ವಾಧಿಕಾರಿಗಳ ಕೈಯಲ್ಲಿ ಅಧಿಕಾರ ಕೊಟ್ಟಿರುವುದರಿಂದ ಪ್ರಜಾಪ್ರಭುತ್ವ ಸತ್ವ ಕಳೆದುಕೊಂಡಿದೆ. ಕುವೆಂಪುರವರ ವಿಚಾರವನ್ನು ಗ್ರಹಿಸದಿದ್ದರೆ ನಾಡನ್ನು ಕಟ್ಟುವುದು ಹೇಗೆ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು? ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವವಿದ್ಯಾನಿಲಯಗಳು ಖಾಸಗಿಕರಣಗೊಳ್ಳುವುದರಲ್ಲಿ ಅನುಮಾನವಿಲ್ಲ. ಓಟಿಗಾಗಿ ಕೆಲವು ಪಕ್ಷಗಳು ಧರ್ಮವನ್ನು ಹಿಡಿದುಕೊಂಡಿವೆ. ಜಾತಿ ಮೌಢ್ಯದ ವಿರುದ್ದ ಕುವೆಂಪುರವರ ಬದುಕು ಕೆಲಸ ಮಾಡಿತ್ತು. ಪುರೋಹಿತಶಾಹಿಗಳನ್ನು ಮನೆಗೆ ಕರೆಸದ ಏಕೈಕ ವ್ಯಕ್ತಿ ಎಂದರೆ ಅದು ಕುವೆಂಪು. ಬರಹಗಳಲ್ಲಿ ಮೌಢ್ಯಗಳನ್ನು ವಿರೋಧಿಸುತ್ತಿದ್ದರು. ವಚನ ಪರಂಪರೆಯ ಶಕ್ತಿ ಕುವೆಂಪುರವರಲ್ಲಿ ಪಾಕಗೊಂಡಿದೆ ಎಂದು ಹೇಳಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ಮಾತನಾಡುತ್ತ ಶತಮಾನದ ಮಹಾಕವಿ ಕುವೆಂಪುರವರಲ್ಲಿ ವೈಚಾರಿಕ ಚಿಂತನೆಯಿತ್ತು. ಅವರ ಸಂದೇಶ, ಬರಹ, ಕಾವ್ಯ ಇಂದಿನ ಯುವಶಕ್ತಿಗೆ ಮುಟ್ಟಬೇಕಿದೆ. ಮೌಢ್ಯ, ಜಾತಿಯತೆ ಬಗ್ಗೆ ಕಠೋರವಾಗಿ ಮಾತನಾಡುತ್ತಿದ್ದರು. ಭಕ್ತಿ ವಂಚನೆಯ ಜಾಲ, ಪೂಜೆ ಮಂಗ ಚೇಷ್ಟೆ ಎಂದು ಪುರೋಹಿತಶಾಹಿಗಳನ್ನು ಕೆಣಕುತ್ತಿದ್ದರು. ಶ್ರೇಷ್ಟ ವ್ಯಕ್ತಿತ್ವದ ಕುವೆಂಪುರವರನ್ನು ವಿದ್ಯಾರ್ಥಿಗಳು ಓದಬೇಕು ಎಂದರು.

ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಬಿ.ಟಿ.ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಸಾಂಸ್ಕøತಿಕ ಸಂಚಾಲಕ ಪ್ರೊ.ಎಲ್.ನಾಗರಾಜ್, ವಿಜ್ಞಾನ ಕೇಂದ್ರದ ಸದಸ್ಯ ಮನೋಹರ್ ವೇದಿಕೆಯಲ್ಲಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *