ಚಿತ್ರದುರ್ಗ ಆ. 18
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಕಟ್ಟಕಡೆಯ ಭೋವಿ ವ್ಯಕ್ತಿಯನ್ನು ಗುರುತಿಸಿ ಅಭಿವೃದ್ಧಿಯ ಕಡೆ ಕರೆದುಕೊಂಡು ಬರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕರ್ನಾಟಕ ಸರ್ಕಾರದ ಭೋವಿ ಅಭಿವೃದ್ದಿ ನಿಗಮಕ್ಕೆ ನೂತನ ಅಧ್ಯಕ್ಷರಾದ ಎಂ.ರಾಮಪ್ಪ ತಿಳಿಸಿದರು.
ಕರ್ನಾಟಕ ಸರ್ಕಾರದ ಭೋವಿ ಅಭಿವೃದ್ದಿ ನಿಗಮಕ್ಕೆ ನೂತನ ಅಧ್ಯಕ್ಷರಾಗಿ ಪ್ರಥಮ ಭಾರಿಗೆ ಚಿತ್ರದುರ್ಗಕ್ಕೆ ಆಗಮಿಸಿದ ಆವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಬಡತನದ ಹಿನ್ನೆಲೆಯಿಂದ ಬಂದಿದ್ದೇನೆ. ಬಡವರ ಕಷ್ಚಕಾರ್ಪಣ್ಯಗಳು ಹತ್ತಿರದಿಂದ ಅನುಭವಿಸಿದ್ದೇನೆ.
ಕಟ್ಟಕಡೆಯ ಭೋವಿ ವ್ಯಕ್ತಿಯನ್ನು ಗುರುತಿಸಿ ಅಭಿವೃದ್ಧಿಯ ಕಡೆ ಕರೆದುಕೊಂಡು ಬರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಾಜ್ಯ ಪ್ರವಾಸ ಮಾಡಿ ಸಮಾಜದ ಸ್ಥಿತಿಗಳನ್ನು ಸ್ವತಃ ಅರ್ಥೈಸಿಕೊಂಡು ಸ್ಪಂದಿಸುತ್ತೇನೆ. ಬಡವರು ಮುಗ್ದ ಜನರು ಯಾರ ಶಿಫಾರಸ್ಸು ಪಡೆಯದೆ ದಲ್ಲಾಳಿಗಳನ್ನು ಸಂಪರ್ಕಿಸಿದೆ ನೇರವಾಗಿ ನಿಗಮಕ್ಕೆ ಭೇಟಿ ನೀಡಿ, ಸಂವಿಧಾನದ ಅಡಿಯಲ್ಲಿ ಶಾಸಕರ ಸಚಿವರು ಗುರುತಿಸುವ ಅರ್ಹ ವ್ಯಕ್ತಿಗಳಿಗೂ ಹಾಗೂ ನಿರ್ಲಕ್ಷ್ಯಕ್ಕೆ ಒಳಪಟ್ಟ ಉತ್ಸಾಹಿ ಯುವಕರಿಗೆ ಸ್ಪಂದಿಸುವ ಕಾರ್ಯಕ್ಕೆ ಮೊದಲನೇ ಆದ್ಯತೆ ನೀಡುತ್ತೇನೆ ನಿಗಮಕ್ಕೆ ನೇಮಕಗೊಳ್ಳಲು ಕಾರಣೀಭೂತರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಚಿವ ಶಿವರಾಜ ತಂಗಡಗಿಯವರಿಗೆ ಗೌರವ ತರುವಂತೆ ಘನವ್ಯಕ್ತಿತ್ವದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಕಛೇರಿ ಕೆಲಸದ ಜೊತೆ ಜೊತೆಯಲ್ಲಿ ರಾಜ್ಯಾಪ್ರವಾಸ ಮಾಡಿ ಜನರ ಜೀವನ ಸ್ಥಿತಿಗತಿಯನ್ನು ಖುದ್ದಾಗಿ ಅರ್ಥೈಸಿಕೊಂಡು ಜನರಿಗೆ ಸಹಾಯ ಸ್ಪಂದನೆ ಸಹಕಾರ ಮಾಡಲಾಗುವುದು. ಜನರಿಗೆ ಸ್ಪಂದಿಸುವ ಮನೋಭಾವದೊಂದಿಗೆ ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯನ್ಮೂಖಗೊಳ್ಳುವೆ. ಸರ್ಕಾರ ನೀಡುವ ಯೋಜನೆಗಳನ್ನು ಸಮುದಾಯದ ಕಟ್ಟಕಡೆಯ ವ್ಯಕ್ತಿಗಳಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷರಾದ ತಾಜ್ ಪೀರ್, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್, ಓಬಿಸಿ ಅಧ್ಯಕ್ಷರಾದ ಎನ್.ಡಿ.ಕುಮಾರ್, ಲಕ್ಷ್ಮೀಕಾಂತ್, ಅಂಜನಪ್ಪ, ಮುದಾಸಿರ್ ನವಾಜ್, ಕನಕದಾಸ್, ಮಹಡಿ ಶಿವಮೂರ್ತಿ, ಗೀತಾ ನಂದಿನಿಗೌಡ, ಖುದ್ದುಸ್ ಆಲ್ಲಾಭಕ್ಷ್ಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Views: 21