ಕೆಲಸದಿಂದ ಅಮಾನತ್ತು ಮಾಡುವವರೆಗೂ ಹೋರಾಟವನ್ನು ಮಾಡಲಾಗುವುದು: ಎಂ.ಸತೀಶ್ ಕುಮಾರ್

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 06 ತಾಲ್ಲೂಕಿನ ಭರಮಸಾಗರದ ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು, ಇದರ ಬಗ್ಗೆ ಸಂಬಂಧಪಟ್ಟವರಿಗೆ ಸಾಕ್ಷಿ ಹಾಗೂ ಮಾಹಿತಿಯನ್ನು ನೀಡಿದ್ದರೂ ಸಹಾ ಪಿಡಿಓರವರ ಮೇಲೆ ಯಾವುದೇ ಕ್ರಮವನ್ನು ಕೈಗ್ಗೊಂಡಿಲ್ಲ, ಅವರು ಕೆಲಸದಿಂದ ಅಮಾನತ್ತು ಮಾಡುವವರೆಗೂ ಹೋರಾಟವನ್ನು ಮಾಡಲಾಗುವುದೆಂದು ಬಂಜಾರ(ಲಂಬಾಣಿ)ಸಮಾಜದ ಜಿಲ್ಲಾಧ್ಯಕ್ಷರಾದ ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭರಮಸಾಗರದ ಪಿಡಿಓ ವಿರೇಶ್ ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರ ಮಾಡಿದ್ದಾರೆ. ಪಂಚಾಯಿತಿಯಲ್ಲಿ ಇರಬೇಕಾದ ಅಗತ್ಯವಾದ ದಾಖಲೆಗಳನ್ನು ಬೇರೆ ಯಾರೊ ಮನೆಯಲ್ಲಿ ಇಟ್ಟಿದ್ದಾರೆ. ಪಂಚಾಯಿತಿಯಿಂದ ಯಾವ ದಾಖಲೆಗಳು ಸಹಾ ಹೊರಗಡೆ ಹೋಗಬಾರದೆಂದು ಕಾನೂನು ಇದ್ದರೂ ಸಹಾ ಅದನ್ನು ಮೀರಿ ಕಾನೂನನ್ನು ಗಾಳಿಗೆ ತೂರಿ ಕಡತಗಳನ್ನು ಪಂಚಾಯಿತಿಯಿಂದ ಹೊರಗಡೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಪ್ರಶ್ನಿಸಿದ ಪಂಚಾಯಿತಿಯ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ಪಂಚಾಯಿತಿಯಿಂದ ಪಂಚಾಯಿತಿಗೆ ಪಿಡಿಓರವರನ್ನು ವರ್ಗಾವಣೆ ಮಾಡಬಹುದು ಆದರೆ ತಾಲ್ಲೂಕಿನಿಂದ ತಾಲ್ಲೂಕಿನೆ ಪಿಡಿಓರವರನ್ನು ವರ್ಗಾವಣೆ ಮಾಡುವಂತಿಲ್ಲ ಇದಕ್ಕೆ ಕಾನೂನು ಒಪ್ಪುವುದಿಲ್ಲ ಆದರೆ ಇದನ್ನು ಮೀರಿ ವಿರೇಶ್‍ರವರನ್ನು ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ವರ್ಗಾವಣೆಯನ್ನು ಮಾಡಲಾಗಿದೆ. ಪಂಚಾಯಿತಿಯಲ್ಲಿನ ಕಡತಗಳನ್ನು ಅಲ್ಲಿನ ಪ್ರಭಾವಿ ವ್ಯಕ್ತಿಯೊರ್ವರ ಮನೆಗೆ ಸಾಗಿಸಿ ಅಲ್ಲಿ ಬದಲಾವಣೆಯನ್ನು ಮಾಡಿದ್ದಾರೆ. ಇದ್ದಲ್ಲದೆ ಸರ್ಕಾರದ 15ನೇ ಹಣಕಾಸಿನಲ್ಲಿ ಕಾಮಗಾರಿಯನ್ನು ಪಂಚಾಯಿತಿ ಸದಸ್ಯರ ಯಾವುದೇ ರಕ್ತ ಸಂಬಂಧಿಗಳಿಗೆ ನೀಡುವಂತಿಲ್ಲ ಎಂದು ಇದ್ದರೂ ಸಹಾ ಪಂಚಾಯಿತಿಯ ಸದಸ್ಯರ ತಮ್ಮನಿಗೆ 26 ರೂ. ಲಕ್ಷದ ಕಾಮಗಾರಿಯನ್ನು ನೀಡಲಾಗಿದೆ. ಇದನ್ನು ತನಿಖೆಯನ್ನು ನಡೆಸಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ಪಂಚಾಯಿತಿಯಲ್ಲಿ ಕಳೆದ ಹಲವಾರು ವರ್ಷದ ಹಿಂದೆ ಸರ್ಕಾರದ ಜಾಗವನ್ನು ಖಾಸಗಿಯರಿಗೆ ವರ್ಗಾವಣೆಯನ್ನು ಮಾಡಿಕೊಡಲಾಗಿದೆ ಇದನ್ನು ವಾಪಾಸ್ಸ್ ಪಡೆಯಬೇಕು, ಇದರ ಬಗ್ಗೆ ನೊಂದಾಣಿ ಇಲಾಖೆಯವರು ನಿವೇಶನವನ್ನು ವಾಪಾಸ್ಸ್ ಪಡೆಯುವಂತೆ ಸೂಚನೆ ನೀಡಿದ್ದರು ಅಹಾ ಇದರ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ, ಈತನ ಬಗ್ಗೆ ಹಲವಾರು ಬಾರಿ ಜಿ.ಪಂ.ಮುಖ್ಯಸ್ಥರನ್ನು ಕಂಡು ಅವ್ಯವಹಾರದ ಸಾಕ್ಷಿಯನ್ನು ನೀಡಿದರೂ ಸಹಾ ಇದುವರೆವಿಗೂ ಯಾವುದೇ ಕ್ರಮವನ್ನು ಅವರ ಮೇಲೆ ಕೈಗ್ಗೊಂಡಿಲ್ಲ, ಪಂಚಾಯಿತಿ ಪಿಡಿಓ ವಿರೇಶ್ ಅಮಾನತ್ತು ಆಗುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸತೀಶ್ ತಿಳಿಸಿದರು.
ಗ್ರಾಮದ ಮುಖಂಡರಾದ ಕೋಟ್ರೇಶ್ ಮಾತನಾಡಿ ಭರಮಸಾಗರ ಪಂಚಾಯಿತಿ ಪಿಡಿಓ ವೀರೇಶ್‍ರವರು ಮಾಡುತ್ತಿರುವ ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಲು ಹೋದಾಗ ನನ್ನ ಮೇಲೆ ಹಲ್ಲೆಯನ್ನು ನಡೆಸಿದ್ದಾರೆ ಇದ್ದಲ್ಲದೆ ಪಂಚಾಯಿತಿಯ ನೌಕರರನ್ನು ಸೇರಿಸಿಕೊಂಡು ನನ್ನ ಮೇಲೆ ಅಟ್ರಾಸಿಟಿ ಪ್ರಕರಣವನ್ನು ದಾಖಲು ಮಾಡಲು ಮುಂದಾಗಿದ್ದಾರೆ.ತಳವರ್ಗದವರಿಗೆ ಈ ಅಟ್ರಾಸಿಟಿ ಎನ್ನುವುದು ಒಂದು ಅಸ್ತ್ರವಾಗಿ ವರವಾಗಿದ್ದರೆ  ಇದು ಮೇಲ್ವರ್ಗದವರಿಗೆ ಶಾಪವಾಗಿದೆ. ಮಾತೇತ್ತಿದ್ದರೆ ಅಟ್ರಾಸಿಟಿ ಹಾಕುತ್ತೇನೆ ಎಂದು ಬೆದರಿಸುತ್ತಾರೆ ಎಂದು ದೂರಿದರು.
ಪಿಡಿಓ ಆಗಿ ಕೆಲಸ ಮಾಡುತ್ತಿದ್ದ ವಿರೇಶ್ ರವರು ಗ್ರಾಮದಲ್ಲಿನ ಕಸವನ್ನು ಖಾಸಗಿಯವರ ನಿವೇಶನ ಹಾಗೂ ಪಾರ್ಕಗಳಲ್ಲಿ ಹಾಕುವುದಕ್ಕೆ ನಿರ್ದೆಶನ ನೀಡಿದ್ದಾರೆ ಎಂದು ಪಂಚಾಯಿತಿಯ ನೌಕರರು ಕಸವನ್ನು ಅಲ್ಲಿ ಹಾಕುತ್ತಿದ್ದಾರೆ ಇದರ ಬಗ್ಗೆ ಗ್ರಾಮಸ್ಥರು ವಿಚಾರಿಸಿದಾಗ ಇಲ್ಲಿಗೆ ಕಸವನ್ನು ಹಾಕಲು ವಿರೇಶ್ ರವರು ತಿಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ ಕಸವನ್ನು ಹಾಕಲು ನಿರ್ಧಿಷ್ಟವಾದ ಜಾಗ ಇದ್ದರೂ ಸಹಾ ಅದನ್ನು ಬಳಕೆ ಮಾಡದೇ ಬೇರೆ ಕಡೆಗಳಲ್ಲಿ ಹಾಕುತ್ತಾ ರೋಗಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂದರು.
ಗೋಷ್ಟಿಯಲ್ಲಿ ಶ್ರೀನಿವಾಸ್, ಗೀರೀಶ್, ಕುಪ್ಪಾನಾಯ್ಕ್ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *