ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ಪೋಲಿಸ್  ಅಧಿಕಾರಿಯನ್ನು ಅಮಾನತ್ತಿಗೆ ಆಗ್ರಹ: ಗೋವಿಂದ ಕಾರಜೋಳ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817.

ಚಿತ್ರದುರ್ಗ: ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ಮಾಡಿರುವ ಪೋಲಿಸ್  ಅಧಿಕಾರಿಯನ್ನು ಕೆಲಸದಿಂದ ಅಮಾನತ್ತು ಮಾಡಬೇಕು ಈ ಘಟನೆಯ ಬಗ್ಗೆ ಪೋಲಿಸ್ ಇಲಾಖೆ ತನಿಖೆಯನ್ನು ಮಾಡಬೇಕೆಂದು ಸರ್ಕಾರವನ್ನು ಹಾಗೂ ಪೋಲಿಸ್ ಇಲಾಖೆಯನ್ನು ಸಂಸದರಾದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.


ಚಿತ್ರದುರ್ಗ ಜಿಲ್ಲಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನುಮಂತೇಗೌಡರವರ ಆರೋಗ್ಯವನ್ನು ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ನಿನ್ನೆ ರಾತ್ರಿ ನಗರದ ಐಶ್ವರ್ಯ ಪೋಟ್ ಬಳಿ ಮಧುಗಿರಿನ ಬಿಜೆಪಿ ಜಿಲ್ಲಾಧ್ಯಕ್ಷರ ಹನುಮಂತೇಗೌಡ ಹಾಗೂ ಪಿಎಸ್.ಐ. ಗಾದ್ರಿ ಲಿಂಗಪ್ಪ ಗೌಡರವರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರು ಸಹಾ ಇಬ್ಬರ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ. ಇವರನ್ನು ಕೊಲೆ ಮಾಡುವ ಹಿನ್ನಲೆಯಲ್ಲಿ ಪೋಲಿಸ್ ಅಧಿಕಾರಿ ತನ್ನ ಬಳಿ ಇದ್ದ ಪಿಸೂಲ್‍ನ್ನು ತೆಗೆದು ಇವರ ಮೇಲೆ ಗುರಿ ಇಟ್ಟಿದ್ದಾನೆ. ಇದನ್ನು ತಪ್ಪಿಸುವ ಸಲುವಾಗಿ ಹನುಮಂತೆಗೌಡ ಅವರ ಕೈಯನ್ನು ಹಿಡಿದಿದ್ದಾನೆ ಈ ಸಮಯದಲ್ಲಿ ಅವರ ಬೆರಳಿಗೆ ಗಾಯವಾಗಿದೆ, ಇದರಿಂದ ಆತ ನನನ್ನು ಹೊಡೆದಿದ್ದಾನೆ ಎಂದು ಹನುಮಂತೇಗೌಡರವರ ಮೇಲೆ ಹಲ್ಲೆ ಮಾಡಿದ್ದಾನೆ ಎದೆಗೆ, ತಲೆಗೆ, ಗುಪ್ತಾಂಗಕ್ಕೆ ಬೂಟ್ ಕಾಲಿನಿಂದ ಹೊಡೆದಿದ್ದಾನೆ. ಇದರಿಂದ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.


ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಸಾರ್ವಜನಿಕರಿಗೆ ರಕ್ಷಣೆಯನ್ನು ನೀಡಬೇಕಾದ ಆರಕ್ಷಕರೇ ಜನತೆಯ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಕೆಲವು ಪೋಲಿಸರು ರಾಕ್ಷಸ ಪ್ರವೃತ್ತಿಯನ್ನು ಹೊಂದಿದ್ದಾರೆ. ಸರ್ಕಾರ ಇಂತಹವರ ಬಗ್ಗೆ ಅನುಕುಂಪವನ್ನು ತೋರಿಸುತ್ತಿದೆ. ಜನತೆಯ ರಕ್ಷಣೆಯನ್ನು ನೀಡುತ್ತಿಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತೆಗೌಡರವರ ಮೇಲೆ ಹಲ್ಲೆ ಮಾಡಿದ ಪೋಲಿಸ್ ಅಧಿಕಾರಿ ಕೆಲಸದಿಂದ ಅಮಾನತ್ ಆಗಬೇಕು ಇದರ ಬಗ್ಗೆ ಪೋಲಿಸ್ ಇಲಾಖೆವತಿಯಿಂದ ತನಿಖೆಯಾಗಬೇಕು ಆತನಿಂದ ಖಾಕಿ ಬಟ್ಟೆಯನ್ನು ಶಾಶ್ವತವಾಗಿ ಕಳಚುವ ಕಾರ್ಯವಾಗಬೇಕು ಸಂಸದರು ಆಗ್ರಹಿಸಿ ಇದರ ಬಗ್ಗೆ ಸದನದ ಒಳಗೂ ಹಾಗೂ ಹೊರಗೂ ಸಹಾ ಹೋರಾಟವನ್ನು ಮಾಡಲಾಗುವುದು ಈ ಸರ್ಕಾರದಲ್ಲಿ ಸ್ಲಗರ್, ಕಳ್ಳರಿಗೆ ದರೋಡೆಕೋರರಿಗೆ ರಾಜ ಮರ್ಯಾದೆ ಕೂಡಲಾಗುತ್ತಿದೆ. ಆದರೆ ಇಂತಹ ವ್ಯಕ್ತಿಗಳ ಮೇಲೆ ವಿನಾ ಕಾರಣ ಹಲ್ಲೆ ಮಾಡುತ್ತಿದ್ದಾರೆ ಎಂದು ಸಂಸದರು ದೂರಿದರು.   


ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಪೋಲಿಸರ ಈ ನಡೆಯನ್ನು ಖಂಡಿಸಿದ ಅವರು ವಿನಾಕಾರಣ ನಮ್ಮವರ ಮೇಲೆ ಹಲ್ಲೆ ಮಾಡಿದ್ದಾರೆ. ಹನುಮಂತೇಗೌಡ ರವರು ಸೌಮ್ಯ ಸ್ವಭಾದವರಾಗಿದ್ದಾರೆ ನಮ್ಮ ಪಕ್ಷದ ಸಂಘಟನೆಯನ್ನು ಮಾಡುವಲ್ಲಿ ತೊಡಗಿದ್ದಾರೆ. ಪೋಲಿಸರಿಗೆ ಇವರ ಗುರುತನ್ನು ಹೇಳಿದರು ಸಹಾ ಪೋಲಿಸದರು ಹಲ್ಲೆ ಮಾಡಿದ್ದಾರೆ. ಇನ್ನೂ ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದೆ. ನಗರದಲ್ಲಿ ಹಲವಾರು ಜನ ವಿನಾ ಕಾರಣ ತೊಂದರೆಯನ್ನು ನೀಡುತ್ತಾರೆ ಅಂತಹರಿಗೆ ಪೋಲಿಸ್ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳಲಿ ಆದರೆ ವಿನಾ ಕಾರಣ ಏನು ಮಾಡದ ಇಂತಹ ವ್ಯಕ್ತಿಗಳ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯವರು ಅತನ ಮೇಲೆ ಸೂಕ್ತವಾದ ಕ್ರಮವನ್ನು ಜರುಗಿಸಬೇಕಿದೆ. ಈ ಪ್ರಕರಣವನ್ನು ನಮ್ಮ ನಾಯಕರ ಗಮನಕ್ಕೂ ಸಹಾ ತೆಗೆದುಕೊಂಡು ಹೋಗಲಾಗವುದು ಎಂದರು. 


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಮಾಜಿ ಅಧ್ಯಕ್ಷ ನರೇಂದ್ರನಾಥ್, ಮುಖಂಡರಾದ ಕುಮಾರಸ್ವಾಮಿ, ಮೋಹನ್, ಬೇದ್ರೇ ನಾಗರಾಜ್, ವೆಂಕಟೇಶ್ ಯಾದವ್, ಶಂಭು ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *