ಮಹರ್ಷಿ ವಾಲ್ಮೀಕಿ ಯಾವುದೇ ಒಂದು ಸಮಾಜದ ಸ್ವತ್ತಲ್ಲ : ಸಚಿವ ಡಿ.ಸುಧಾಕರ್.

ಹಿರಿಯೂರು ಆ. 17: ಮಹರ್ಷಿ ವಾಲ್ಮೀಕಿಯವರು ಯಾವುದೇ ಒಂದು ಸಮಾಜದ ಸ್ವತ್ತಲ್ಲ, ಜಾತಿ-ಮತ-ಕುಲವನ್ನು ಮೀರಿ ಎತ್ತರಕ್ಕೆ ಬೆಳೆದಂತಹ ವ್ಯಕ್ತಿಯಾಗಿದ್ದು ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವ ಮೂಲಕ ಅವರು ಜಗತ್ತಿಗೆ ಸಾರಿದ ಸಂದೇಶಗಳು ಇಡೀ ಮನುಕುಲಕ್ಕೆ ಆದರ್ಶಪ್ರಾಯವಾಗಿವೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜಕಲ್ಯಾಣ ಇಲಾಖೆ, ನಗರಸಭೆ
ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಮಹಾಕಾವ್ಯವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲೇ ಒಂದು ಅತ್ಯದ್ಭುತವಾದ
ಗ್ರಂಥವಾಗಿದ್ದು, ಈ ವಾಲ್ಮೀಕಿ ರಾಮಾಯಣವು ಇಂಡೋನೇಷಿಯಾ, ಸೇರಿದಂತೆ ಆಗ್ನೇಯದ ಹಲವು ರಾಷ್ಟ್ರಗಳಲ್ಲಿ ಕೂಡ ಅತ್ಯಂತ ಪ್ರಸಿದ್ದಿ
ಪಡೆದಿದೆ, ವಾಲ್ಮೀಕಿಯವರು ಮಾನವ ಜನಾಂಗದ ಕಲ್ಯಾಣಕ್ಕಾಗಿಯೇ ಸಂಸ್ಕøತದಲ್ಲಿ ರಾಮಾಯಣ ಮಹಾಕಾವ್ಯವನ್ನು ರಚಿಸಿದರು
ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರುಗಳು ಹಿರಿಯೂರನ್ನು ಕಟ್ಟಿದಂತಹ ಕೆಂಚಪ್ಪ ನಾಯಕರ ಹೆಬ್ಬಾಗಿಲು ಇದೆ, ಆ
ಸರ್ಕಲ್ ಗೆ ಕೆಂಚಪ್ಪನಾಯಕರ ಸರ್ಕಲ್ ಎಂದು ಹೆಸರಿಡಬೇಕು ಎಂದರಲ್ಲದೆ, ರಸ್ತೆ ಅಗಲೀಕರಣ ಕಾಮಗಾರಿಯನ್ನು ಅತಿ ತ್ವರಿತವಾಗಿ
ಮುಗಿಸಬೇಕು ಎಂಬುದಾಗಿ ಸಚಿವರಿಗೆ ಮನವಿ ಮಾಡಿದರು.
ಮನವಿಗೆ ಪ್ರತಿಕ್ರಿಯಿಸಿದ ಸಚಿವರಾದ ಡಿ.ಸುಧಾಕರ್ ರವರು ರಸ್ತೆ ಅಗಲೀಕರಣ ಕಾಮಗಾರಿಯನ್ನು ಸುಮಾರು 80 ಕೋಟಿ ವೆಚ್ಚದಲ್ಲಿ
ನಡೆಸಲಾಗುತ್ತಿದ್ದು, ಕಾಮಗಾರಿ ನಡೆಸಲು ಹೆಚ್ಚು ಕೆಲಸಗಾರರು ಕಾರ್ಯಪ್ರವೃತ್ತರಾಗಿದ್ದು, ನಗರದಲ್ಲಿ ಅತಿ ಬೇಗನೆ ಈ ರಸ್ತೆ ಅಗಲೀಕರಣ
ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂಬುದಾಗಿ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ.ನಾಗಭೂಷಣ್ ಮಾತನಾಡಿ, ವಿಶ್ವಕವಿ ಎಂದೇ ಪ್ರಸಿದ್ಧಿಯಾಗಿರುವ ಮಹರ್ಷಿ
ವಾಲ್ಮೀಕಿಯವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ರಾಮಾಯಣ ಮಹಾಕಾವ್ಯದ ಮೂಲಕ ಪಿತೃವಾಕ್ಯ ಪರಿಪಾಲನೆ,
ಸಹೋದರರ ಭ್ರಾತೃತ್ವದಂತಹ ವಿಶಿಷ್ಟ ಮೌಲ್ಯಗಳನ್ನು ಅವರು ಜಗತ್ತಿಗೆ ಸಾರಿದರು ಎಂದರಲ್ಲದೆ,
ಇಂದಿನ ಯುವಜನಾಂಗ ತಮ್ಮ ಬದುಕಿನಲ್ಲಿ ವಾಲ್ಮೀಕಿಯವರ ತತ್ವ-ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮರಸ್ಯ ಬದುಕನ್ನು
ಕಟ್ಟಿಕೊಳ್ಳಬೇಕಾದರೆ ಇಂತಹ ಮಹನೀಯರ ಜೀವನದ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ
ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ತಹಶೀಲ್ದಾರರಾದ ರಾಜೇಶ್ ಕುಮಾರ್, ತಾ.ಪಂ.ಕಾರ್ಯನಿರ್ವಹಣಾ ಅಧಿಕಾರಿ ಸತೀಶ್ ಕುಮಾರ್,
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜೆ.ದಿನೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ನಗರಸಭೆ
ಪೌರಾಯುಕ್ತರಾದ ವಾಸೀಂ, ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್, ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾ ಆರಾಧ್ಯ, ನಗರಸಭೆ
ಸದಸ್ಯರುಗಳಾದ ಅನಿಲ್ ಕುಮಾರ್, ಕವಿತಾಲೋಕೇಶ್, ಗಿರೀಶ್ ನಾಯಕ, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಮಂಜುನಾಥ್
ಮಾಳಿಗೆ, ಸಮಾಜದ ಮುಖಂಡರುಗಳಾದ ನಾಗರಾಜ್ ಸೊಂಡೇಕೆರೆ, ದಿವಾಕರ್ ನಾಯಕ, ಎಸ್.ಜೋಗಪ್ಪ, ಬಸವರಾಜ್ ನಾಯಕ,
ಮಸ್ಕಲ್ ಶ್ರೀನಿವಾಸ್, ತಾ.ಪಂ.ಮಾಜಿ ಅಧ್ಯಕ್ಷರುಗಳಾದ ಅಂಜಿನಪ್ಪ, ಚಂದ್ರಪ್ಪ, ಚಿತ್ರಲಿಂಗನಾಯಕ, ವಕೀಲರಾದ ಚಂದ್ರಪ್ಪ,

ಯುವಮುಖಂಡ ಲೋಕೇಶ್ ಸಿ.ಎನ್.ಮಾಳಿಗೆ, ಸೇರಿದಂತೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ
ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *