ಚಿತ್ರದುರ್ಗ|ಕಡ್ಲೆಗುದ್ದು ಗ್ರಾಮದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ರಾಜಾವೀರ ಮದಕರಿನಾಯಕ ಜಯಂತೋತ್ಸವ ಕಾರ್ಯಕ್ರಮ.

ಚಿತ್ರದುರ್ಗ ಆ. 28: ತಾಲ್ಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ರಾಜಾವೀರ ಮದಕರಿನಾಯಕ ಜಯಂತೋತ್ಸವ ಕಾರ್ಯಕ್ರಮ ನಡೆಸಲಾಯಿತು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಯುವ ಮುಖಂಡರಾದ ಜಿ.ಎಸ್.ಅನಿತ್‍ಕುಮಾರ್ ರಾಮಾಯಣವನ್ನು ಬರೆದ ವಾಲ್ಮೀಕಿ
ನಮಗೆಲ್ಲರಿಗೂ ಆದರ್ಶವಾಗಿದ್ದಾರೆ, ಅವರು ಬರೆದ ರಾಮಾಯಣ ನಮ್ಮ ಬದುಕಿಗೆ ದಾರಿದೀಪವಾಗಿದೆ, ಇದೇ ರೀತಿ ನಮ್ಮನ್ನಾಳಿದ ರಾಜ
ವೀರ ಮದಕರಿ ನಾಯಕ ಧೈರ್ಯಕ್ಕೆ ಹೆಸರಾಗಿದ್ದಾರೆ, ಮದವನ್ನು ಎರಿದ ಆನೆಯ ಮದವನ್ನು ಅಡಗಿಸುವುದರ ಮೂಲಕ ತಮ್ಮ
ಶೌರ್ಯವನ್ನು ಪ್ರದರ್ಶನ ಮಾಡುವುದರ ಮೂಲಕ ಉತ್ತಮವಾದ ಆಳ್ವಿಕೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಕಡ್ಲೇಗುದ್ದು ಗ್ರಾಮದಲ್ಲಿ
ಪಾದಯಾತ್ರೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ , ಮಾಜಿ ಸದಸ್ಯರಾದ ಮಧು, ಹಿರಿಯರಾದ ಮುತ್ತಣ್ಣ ಸ್ವಾಮಿ,
ಹರೀಶ್,ಓಬಳೇಶ್,ಮಾರುತಿ ಹಾಗು ಅನೇಕ ಯುವ ಮಿತ್ರರು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *