ಜಾತಿ ಗಣತಿಯಲ್ಲಿ “ವೀರಶೈವ ಲಿಂಗಾಯತ” ಗುರುತಿಸಲು ಸಮಾಜ ಬಾಂಧವರಿಗೆ ಮಹಾಸಭಾ ಮನವಿ.

ಚಿತ್ರದುರ್ಗ ಸೆ. 29

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ವೀರಶೈವ ಲಿಂಗಾಯತ ಸಮಾಜ ಬಾಂಧವರಲ್ಲಿ ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಆರ್ಥಿಕ ಹಾಗೂ  ಶೈಕ್ಷಣಿಕ (ಜಾತಿ ಗಣತಿ)  ಸಮೀಕ್ಷೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯದ ಮೇರೆಗೆ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ(ಜಾತಿ ಗಣತಿ) ಯಲ್ಲಿ ಧರ್ಮದ ಕಾಲಂನಲ್ಲಿ”ವೀರಶೈವ ಲಿಂಗಾಯತ”,ಜಾತಿ ಕಾಲಂನಲ್ಲಿ  ಲಿಂಗಾಯತ ಅಥವಾ ವೀರಶೈವ ಅಂತಾ ಬರಿಸಿ ಉಪಜಾತಿ ಕಾಲಂನಲ್ಲಿ ನಿಮ್ಮ ನಿಮ್ಮ ಉಪಜಾತಿಗಳ ಹೆಸರನ್ನು ಬರೆಸಿ ಅಲಕ್ಷ ಮಾಡಬೇಡಿ ಎಂದು ಅಖಿಲ ಭಾರತ ವೀರಶೈವ ಮಹಾ ಸಭಾದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಮಹಡಿ ಶಿವಮೂರ್ತಿ ಸಮಾಜ ಬಾಂಧವರಲ್ಲಿ ಮನವಿ ಮಾಡಿದ್ದಾರೆ. 


ಎರಡನೇ ಬಾರಿ ಸಮೀಕ್ಷೆ ನಡೆದಿರುವುದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರ ಮತ್ತು ಪದಾಧಿಕಾರಿಗಳ ಒತ್ತಾಯದ ಮೇರೆಗೆ ಈ ಹಿನ್ನಲೆಯಲ್ಲಿ ಸಮಾಜ ಬಂದುಗಳೇ ಈ ರೀತಿಯಾಗಿ ಬರೆಸಿದಾಗ ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಎಷ್ಟು ಇದೆ ಅನ್ನುವುದು ನಿಖರವಾಗಿ ಗೊತ್ತಾಗುವುದು ಮತ್ತು ಆರ್ಥಿಕ ಸ್ಥಿತಿಗತಿ ಬಗ್ಗೆಯೂ ಗೊತ್ತಾಗುತ್ತದೆ ಇದನ್ನು ಅಲಕ್ಷ ಮಾಡಬೇಡಿ ಸಮಾಜ ಬಂಧುಗಳಲ್ಲಿ ಮನವಿ ಮಾಡಿದ್ದಾರೆ.

Views: 18

Leave a Reply

Your email address will not be published. Required fields are marked *