ಅನುಪಮ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ “ಬಿಲ್ವ ಪತ್ರಾರ್ಚನಂ “

ಚಿತ್ರದುರ್ಗ : ನಗರದ ಅನುಪಮ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ “ಬಿಲ್ವ ಪತ್ರಾರ್ಚನಂ ” ಕಾರ್ಯಕ್ರಮವನ್ನು ಶೃಂಗೇರಿ ಮಠದ ಶ್ರೀನಾಥ ಅರ್ಚಕರು ನೇತೃತ್ವದಲ್ಲಿ ನಡೆಸಲಾಯಿತು, ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳು ಶಿವನ ಅಷ್ಟೋತ್ತರವನ್ನು ಜಪಿಸುತ್ತಾ ಶಿವನಾಮ ಸ್ಮರಣೆಯನ್ನು ಮಾಡುತ್ತಾ ಭಕ್ತಿಯಲ್ಲಿ ಪರವಶವಾದರು, ಪೂಜೆಯ ನಂತರ ಪಂಚಾಮೃತ, ಪ್ರಸಾದವನ್ನು ವಿತರಿಸಲಾಯಿತು.

ಶಾಲೆಯ ಅಧ್ಯಕ್ಷರಾದ ಭಾಸ್ಕರ್. ಎಸ್, ಕಾರ್ಯದರ್ಶಿಗಳಾದ ರಕ್ಷಣ್. ಎಸ್.ಬಿ, ಪ್ರಾಚಾರ್ಯರಾದ ಸಂಪತ್ ಕುಮಾರ್. ಸಿ.ಡಿ,. ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋ ಆರ್ಡಿನೇಟರ್ ಬಸವರಾಜು.ಕೆ, ಶಾಲೆಯ ಶಿಕ್ಷಕ / ಶಿಕ್ಷಕಿಯರು, ಶಿಕ್ಷಕೇತರ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Views: 3

Leave a Reply

Your email address will not be published. Required fields are marked *