ಚಿತ್ರದುರ್ಗ: ಅ.2.
ತಾಲ್ಲೂಕಿನ ಜಂಪಣ್ಣನಾಯಕನಕೋಟೆ (ಜೆ ಎನ್ ಕೋಟೆ) ಗ್ರಾಮದ ಸರ್ಕಾರಿ ಆಯುಷ್ ಆಯುರ್ವೇದ ಕೇಂದ್ರದಲ್ಲಿ ಗುರುವಾರ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ 156ನೇ ಜನ್ಮದಿನವನ್ನು ಆಚರಿಸಲಾಯಿತು.
ಆಯುಷ್ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ|| ವಿಜಯಲಕ್ಷ್ಮೀ ಪಿ ಮಹಾತ್ಮಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮತ್ತು ಸತ್ಯ ಅಹಿಂಸೆಯ ಮಾರ್ಗವನ್ನು ಅನುಸರಿಸಿ ನಡೆಸಿದ ಹೋರಾಟ ಸಾರ್ವಕಾಲಿಕವಾಗಿ ಎಲ್ಲರಿಗೂ ಪ್ರೇರಣದಾಯಕವಾದದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೋಗ ತರಬೇತುದಾರ ರವಿ ಕೆ.ಅಂಬೇಕರ್, ಸಿಬ್ಬಂದಿ ಮಂಜುಳಮ್ಮ, ಗ್ರಾಮದ ಪಶು ಚಿಕಿತ್ಸಾಲಯದ ಸಹಾಯ ರಾಘವೇಂದ್ರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Views: 20