“ಬಿ.ಇಡ್‌ ಮೂಲಕ ಜೀವನ ಕಟ್ಟಿಕೊಳ್ಳಿ: ಸರಿಯಾದ ಕಲಿಕೆ ಹಾಗೂ ಕೌಶಲ್ಯದಿಂದ ಭವಿಷ್ಯದಲ್ಲಿ ಉತ್ತಮ ಶಿಕ್ಷಕರಾಗಬಹುದು – ಡಾ. ಕೆ. ವೆಂಕಟೇಶ್”

ಚಿತ್ರದುರ್ಗ ನ. 10

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಬಿ.ಇ.ಡಿ.ನಲ್ಲಿ ಸರಿಯಾದ ರೀತಿಯಲ್ಲಿ ಕಲಿಯುವುದರ ಮೂಲಕ ನಿಮ್ಮ ಮುಂದಿನ ಜೀವನವನ್ನು ಸರಿಯಾದ ರೀತಿಯಲ್ಲಿ ಕಳೆಯಬಹುದಾಗಿದೆ, ಇಲ್ಲಿ ಕಲಿಕೆಯ ಜೊತೆಗೆ ಕೌಶಲ್ಯವನ್ನು ಸಹಾ ಹೊಂದುವ ಅಗತ್ಯ ಇದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ನಿಕಾಯ ಮುಖ್ಯಸ್ಥ ಡಾ.ಕೆ.ವೆಂಕಟೇಶ್ ದ್ವಿತೀಯ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯ, ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದವತಿಯಿಂದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ, ಹತ್ತು ಬೆಳದಿಂಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಇಡಿಯನ್ನು ಓದಲು ಬರುವವರು ರೈತ ಹಾಗೂ ಮಧ್ಯಮ ವರ್ಗದವರಾಗಿದ್ದಾರೆ ಶ್ರೀಮಂತರಾಗಿದ್ದರೆ ಅವರು ಇಂಜಿನಿಯರ್, ಡಾಕ್ಟರ್ ಓದುತ್ತಿದ್ದರು, ಇದು ಎಲ್ಲಾ ವೃತಿಗಿಂತ ಪವಿತ್ರವಾದ ವೃತ್ತಿಯಾಗಿದೆ ದೇಶದ ಉತ್ತ ಪ್ರಜೆಗಳನ್ನು ರೂಪಿಸುವ ಹೊಣೆಯನ್ನು ಹೊತ್ತವರು ಶಿಕ್ಷಕರಾಗಿದ್ದಾರೆ. ರೈತ ಮತ್ತು ಸೈನಿಕ ಇವರ ಸಾಮಥ್ರ್ಯ ಯಾರಿಗೂ ಸಹಾ ಬರುವುದಿಲ್ಲ ಇವರು ದೇಶವನ್ನು ಕಟ್ಟುವ ಕೆಲಸವನ್ನು ಮಾಡಿದರೆ ಇದರೊಂದಿಗೆ ಶಿಕ್ಷಕ ಸಹಾ ಉತ್ತಮವಾದ ಕೆಲಸವನ್ನು ಮಾಡುತ್ತಾನೆ,ಇವರು ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡುತ್ತಾರೆ ಎಂದರು.

ಬಿ.ಇ.ಡಿ.ನ್ನು ಕಲಿತ ನಂತರ ಜೀವನವನ್ನು ಸಾಗಿಸಲು ಹಲವಾರು ದಾರಿಗಳು ಇವೆ, ಬೇರೆ ಕಡೆಗಳಲ್ಲಿ ಶಿಕ್ಷಕರಾಗಿ ಖಾಸಗಿ ಅಥ್ವಾ ಸರ್ಕಾರಿ ಉದ್ಯೋಗವನ್ನು ಪಡೆಯಬಹುದೆ ಇಲ್ಲವಾದರೆ, ನೀವೇ ಸ್ವಂತ ಶಾಲೆಯನ್ನು ಪ್ರಾರಂಭ ಮಾಡಬಹುದು ಅದು ಇಲ್ಲವಾದರೆ ಮಕ್ಕಳಿಗೆ ಟ್ಯೂಷನ್ ಮಾಡುವುದರ ಮೂಲಕ ಬೇರೆಯವರಿಗೆ ಹೊರೆಯಾಗದಂತೆ ಜೀವನವನ್ನು ನಡೆಸಬಹುದಾಗಿದೆ. ಕಲಿಯುವ ಸಮಯದಲ್ಲಿ ಗಮನ ಇಟ್ಟು ಕಲಿಯದಿದ್ದೆರೆ ತಮ್ಮ ಶಿಕ್ಷಕ ವೃತ್ತಿಯಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ, ಈ ಹಿನ್ನಲೆಯಲ್ಲಿ ಕಲಿಯುವ ಸಮಯದಲ್ಲಿ ಬೇರೆ ಕಡೆಗಳಲ್ಲಿ ತಮ್ಮ ಮನಸ್ಸುನ್ನು ಹರಿ ಬಿಡದೇ ತರಗತಿಯಲ್ಲಿ ಉಪನ್ಯಾಸಕರು ಹೇಳುವ ಪಾಠವನ್ನು ಗಮನದಲ್ಲಿ ಇಟ್ಟು ಕಲಿಯುವುದರ ಮೂಲಕ ಮುಂದೆ ಉತ್ತಮವಾದ ಶಿಕ್ಷಕರಾಗಿ ಎಂದು ಶುಭ ಕೋರಿದರು.

ಸರ್ ಎಂ. ವಿಶ್ವೇಶ್ವರಯ್ಯ ವಿದ್ಯಾ ಮಂದಿರದ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆಯ ನಿವೃತ್ತ ವಿಷಯ ಪರಿವೀಕ್ಷಕ ಹೆಚ್.ಎಂ.ಬಸವರಾಜರವರು ದ್ವಿತೀಯ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದ ಸಮಾರೋಪ ನುಡಿಗಳನ್ನಾಡಿ ನಿಮ್ಮ ಪೋಷಕರು ಕಷ್ಟ ಪಟ್ಟು ನಿಮ್ಮನ್ನು ಕಾಲೇಜಿಗೆ ಕಳುಹಿಸಿದ್ದಾರೆ. ಅವರು ನಿಮ್ಮ ಮೇಲೆ ವಿವಿಧ ರೀತಿಯ ಭರವಸೆಯನ್ನು ಇಟ್ಟುಕೊಂಡಿದ್ದಾರೆ ಅವುಗಳನ್ನು ಹುಸಿ ಮಾಡಬೇಡಿ ಸಕಾರಗೊಳಿಸಿ, ಮುಂದಿನ ದಿನದಲ್ಲಿ ಶಿಕ್ಷಕರಾಗುವ ನಿಮ್ಮ ಭೋಧನೆ ಬೇರೆಯವರಿಗೆ ಮನ ಮುಟ್ಟುವಂತೆ ಇರಬೇಕಿದೆ, ಮಕ್ಕಳನ್ನು ನಿಮ್ಮ ಭೋಧನೆಯ ಮೂಲಕ ಆಕರ್ಷಿಸುವಂತ ವಾತಾವರಣ ನಿರ್ಮಾಣ ಮಾಡಬೇಕಿದೆ, ಹುಡುಗಾಟವನ್ನು ಬಿಟ್ಟು ಜೀವನದಲ್ಲಿ ಸೀರಿಯಸ್ ಇರಬೇಕಿದೆ, ಮುಂದಿನ ದಿನದಲ್ಲಿ ಬೇರೆಯವರನ್ನು ಅವಲಂಬೆ ಮಾಡದೆ ನಿಮ್ಮ ಕಾಲ ಮೇಲೆ ನಿಲ್ಲುವಂತ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದ ಸಾನಿಧವಹಿಸಿದ್ದ ಕಬೀರಾನಂದಾಶ್ರಮದ ಆಶ್ರಮದ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಜೀವನದಲ್ಲಿ ನಿಂದನೆ, ಕಷ್ಟ, ಅವಮಾನ, ಬರುತ್ತಿವೆ ಅದನ್ನು ಮೀರಿ ನಡೆದಾಗ ಮಾತ್ರ ಸನ್ಮಾನಗಳು ಸಿಗಲು ಸಾಧ್ಯವಿದೆ, ಜೀವನ ನಿಂತ ನೀರಲ್ಲ ಅದು ಹರಿಯುವ ನೀರಾಗಿದೆ ಬಂದ ಎಲ್ಲ ಕಷ್ಟಗಳನ್ನು ಎದುರಿಸಿ ನಡೆದಾಗ ಮಾತ್ರ ಜಯ ಸಿಗಲು ಸಾಧ್ಯವಿದೆ. ಜೀವನ ಎನ್ನುವುದು ಸುಖ- ದುಃಖದ ಸಾಗರವಾಗಿದೆ, ತಮ್ಮ ಜೀವನವನ್ನು ಮುಗಿಸುವ ಸಮಯದಲ್ಲಿ ಉತ್ತಮವಾದ ಕೆಲಸವನ್ನು ಮಾಡಬೇಕಿದೆ ಎಂದರು.

ಬಾಪೂಜಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಹನುಮಂತರೆಡ್ಡಿ, ಪತ್ರಕರ್ತರಾದ ಸುರೇಶ್ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಕೆ.ಸಿ.ರೇಖ ಪ್ರಾರ್ಥಿಸಿದರು, ಉಪನ್ಯಾಸಕರಾದ ಶ್ರೀಮತಿ ಗೀತಾ ಸ್ವಾಗತಿಸಿದರೆ, .ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ಡಾ.ಹನುಮಂತರೆಡ್ಡಿ ವಂದಿಸಿದರು, ಪ್ರಶಿಕ್ಷಣಾರ್ಥಿ ವೃಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದರಾದ ಉಮೇಶ್ ಪತ್ತಾರ್ ವಚನ ಹಾಗೂ ಕನ್ನಡ ಗೀತೆಗಳನ್ನು ಹಾಡಿದರು.

Views: 23

Leave a Reply

Your email address will not be published. Required fields are marked *