ಸರ್ಕಾರದ ಆರೋಗ್ಯ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ಸಮಾಜ ಕಲ್ಯಾಣ ಅಧಿಕಾರಿ ಪರಮೇಶ್ವರಪ್ಪ.

ಚಿತ್ರದುರ್ಗ ಸೆ. 27

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸರ್ಕಾರದ ಯೋಜನೆಗಳಲ್ಲಿ ಮಹತ್ವದಾದ ಆಯುಷ್ಮಾನ್ ಭಾರತ್ ಯೋಜನೆ ಭಾರತೀಯ ಪ್ರತಿಯೊಬ್ಬ ಕುಟುಂಬದವರಿಗೂ ಉಚಿತವಾಗಿ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ನೀಡುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವುದು ಅತ್ಯಂತ ಅವಶ್ಯಕವೆಂದು ಚಿತ್ರದುರ್ಗ ತಾಲೂಕು ಸಮಾಜ ಕಲ್ಯಾಣ ಇಲಾಖೆ ಗ್ರೇಡ್ -1 ಅಧಿಕಾರಿ ಪರಮೇಶ್ವರಪ್ಪ ತಿಳಿಸಿದರು.

ನಗರದ ಡಾ. ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಪ್ರಥಮ ಪಿಯುಸಿ ಬಾಲಕಿಯರ ವಸತಿಯಲ್ಲಿ ಶನಿವಾರ ಆಯುಷ್ಮಾನ್ ಭಾರತ್ ಕಾರ್ಡ್ ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಮನುಷ್ಯ ಒಂದಲ್ಲ ಒಂದು ಆರೋಗ್ಯದ ಸಮಸ್ಯೆಗಳನ್ನು ಪ್ರಸ್ತುತ ದಿನಮಾನಗಳಲ್ಲಿ ಎದುರಿಸುತ್ತಿದ್ದಾನೆ. ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಸರ್ಕಾರದ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಗಳನ್ನು ಬಳಸಿಕೊಳ್ಳುವುದು ಭಾರತೀಯ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ತಿಳಿಸಿ.

ಭಾರತ ಸರ್ಕಾರ ಆರೋಗ್ಯ ವಿಮೆ ಮತ್ತು ಅಪಘಾತ ವಿಮೆಗಳನ್ನ ನೀಡುವುದರ ಮೂಲಕ ಸಾಕಷ್ಟು ಕುಟುಂಬಗಳಿಗೆ ಆರ್ಥಿಕವರೆಯಾಗದಂತೆ ಯೋಜನೆಗಳನ್ನು ರೂಪಿಸಿದೆ ಇಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೆಂಕೆದರು. ಆಯುಷ್ಮಾನ್ ಕಾರ್ಡಿನಲ್ಲಿ ಸುಮಾರು 5 ಲಕ್ಷದ ವರಗೆ ಆಸ್ಪತ್ರೆಯ ವೆಚ್ಚವನ್ನು ಸರ್ಕಾರ ಉಚಿತವಾಗಿ ಬರಿಸಲಿದೆ ಹಾಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಸರ್ಕಾರಿ ವಸತಿ ಹಾಸ್ಟೆಲ್ ಗಳಲ್ಲಿ ಹೊರಗುತ್ತಿಗೆ ನೌಕರಿ ಸಿಬ್ಬಂದಿಗಳು ಕಡ್ಡಾಯವಾಗಿ ಆಯುಷ್ಮನ್ ಕಾರ್ಡನ್ನು ಮಾಡಿಸಿಕೊಂಡು ತಮ್ಮ ಕುಟುಂಬದ ಆರೋಗ್ಯದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಧರ್ಮಸ್ಥಳ ಸಂಘದ ಆಯುಷ್ಮಾನ್ ಕಾರ್ಡ್ ನೋಡಲ್ ಅಧಿಕಾರಿ ಶಿವರಾಜ್ ನಾಯಕ ಮಾತನಾಡಿ ಬಿಪಿಎಲ್ ಕಾರ್ಡಿನಲ್ಲಿ 5 ಲಕ್ಷದವರೆಗೆ ಆಸ್ಪತ್ರೆ ವೆಚ್ಚ ಮತ್ತು ಎಪಿಎಲ್ ಕಾಡ್ರ್ದಾರರಿಗೆ 2 ಲಕ್ಷದ ಆಸ್ಪತ್ರೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ, ಇಂತಹ ಯೋಜನೆಗಳನ್ನು ಸಾರ್ವಜನಿಕರು ಹೆಚ್ಚು ಹೆಚ್ಚು ಉಪಯೋಗಿಸಿಕೊಂಡು ತಮ್ಮ ಕುಟುಂಬದ ಆರೋಗ್ಯದ ನಿರ್ವಹಣೆಯನ್ನು ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ ಅವರು. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ನ ಸುಮಾರು ನೂರಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿಗಳು ಆಯುಷ್ಮಾನ್ ಕಾರ್ಡುಗಳನ್ನು ನೋಂದಾಯಿಸಿಕೊಂಡರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ನಾಗೇಂದ್ರಪ್ಪ, ದೀಪ, ಪ್ರಕಾಶ್, ಸನ್ನತ್, ಹೊನ್ನೇಶ್, ಗೋವಿಂದರಾಜು, ಹಾಗೂ ಧರ್ಮಸ್ಥಳ ಆಯುಷ್ಮಾನ್ ಕಾರ್ಡ್ ನೊಂದಣಿ ಅಧಿಕಾರಿಗಳಾದ ಸುರೇಶ್ ಉಲ್ಲಾಸ್ ಹಾಗೂ ವಸತಿ ಶಾಲೆ ಅಡುಗೆ ಸಿಬ್ಬಂದಿಗಳು ಇದ್ದರು.

Views: 43

Leave a Reply

Your email address will not be published. Required fields are marked *