ಮಲೇರಿಯ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರೂ ತಮ್ಮ ಹೊಣೆ ನಿರ್ವಹಿಸಬೇಕು . ಡಾ. ನಳಿನಾಕ್ಷಿ.

ಚಿತ್ರದುರ್ಗ: ಏ.26 : ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಇವರ ಸಹಯೋಗದೊಂದಿಗೆ ಇಂದು ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ಮಲೇರಿಯಾ ದಿನ ದ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡುತ್ತಾ, ಮನೆಯ ಸುತ್ತ ಮುತ್ತ ಮತ್ತು ಪರಿಸರ ಸ್ವಚತೆಯಿಂದ ಸೊಳ್ಳೆಗಳ ಉತ್ಪತಿ ತಾಣಗಳ ನಾಶದಿಂದ ಮಲೇರಿಯಾದಂತಹ ಕೀಟಜನ್ಯ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡವುದು ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಹೊಣೆ ಅಗಿದೆ ಎಂದರು. ಮಳೆಗಾಲ
ಪ್ರಾರಂಭವಾಗುತ್ತಿದ್ದು ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟು ಸೊಳ್ಳೆಗಳ ಸಂತತಿ ಹೆಚ್ಚಾಗಿ ಸೊಳ್ಳೆಗಳಿಂದ ಹರಡುವ ಮಲೇರಿಯಾದಂತಹ ಕೀಟಜನ್ಯ ಸಾಂಕ್ರಾಮಿಕ ರೋಗಗಳು ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ’ ಎಂದರು.

‘ಮಲೇರಿಯಾ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆಯಿದ್ದು, ಜನ ಭಯಪಡುವ ಅವಶ್ಯಕತೆ ಇಲ್ಲ. ಯಾವುದೇ ಜ್ವರ ಇರಲಿ ಶೀಘ್ರವೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆ ಪಡೆಯಬೇಕು’ ಎಂದು ಹೇಳೀದರು.

ಬೆಳಗಟ್ಟ ಅರೋಗ್ಯ ನೀರಿಕ್ಷಣಾಧಿಕಾರಿ ಮಹೇಶ ಡಿ ಮಾತನಾಡಿ ‘ದೇಶದಾದ್ಯಂತ 2030ರ ಒಳಗಾಗಿ ಮಲೇರಿಯಾ ರೋಗವನ್ನು ಸಂಪೂರ್ಣ ನಿವಾರಣೆಗೊಳಿಸಲು ಗುರಿ ನಿಗದಿಪಡಿಸಿ ರಾಷ್ಟ್ರೀಯ ಮಲೇರಿಯಾ ನಿವಾರಣಾ ಮಾರ್ಗದರ್ಶಿ ಬಿಡುಗಡೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ’ ಎಂದು ತಿಳಿಸಿದರು.

‘2025ನೇ ಸಾಲಿನ ‘ವಿಶ್ವ ಮಲೇರಿಯ ದಿನಾಚರಣೆ’ಯ ಘೋಷಣೆಯು ‘ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಮರು ಹೂಡಿಕೆ, ಮರು ಕಲ್ಪನೆ, ಮರು ಉತ್ತೇಜನ ನೀಡೋಣ’ ಎಂಬುದಾಗಿದೆ. 2027ರ ವೇಳೆಗೆ ಜಿಲ್ಲೆಯನ್ನು ಸಂಪೂರ್ಣ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಅವರು ಮನವಿ ಮಾಡಿದರು. ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪಿಯ ಗ್ರಾಮಗಳಲ್ಲಿ 2021ರ ನಂತರ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬಂದಿರುವುದಿಲ್ಲ, ಅಶಾ ಕಾರ್ಯಕರ್ತೆಯರು ತಮ್ಮ ವ್ಯಾಪಿಯ ಗ್ರಾಮಗಳಲ್ಲಿ ಲಾರ್ವ ಸಮೀಕ್ಷೆಯ ಮಾಡುವಾಗ ಮಲೇರಿಯಾ ಪೀಡಿತ ಪ್ರದೇಶಗಳಿಂದ ಬರುವ ಜನರು ಹಾಗೂ ವಲಸೆ ಕಾರ್ಮಿಕರು ಕಂಡು ಬಂದಲ್ಲಿ ಕಡ್ಡಾಯವಾಗಿ ಅರೋಗ್ಯ ಸಿಬ್ಬಂದಿಗಳ ಗಮನಕ್ಕೆ ತನ್ನಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅರೋಗ್ಯ ನೀರಿಕ್ಷಣಾಧಿಕಾರಿ ನಾಗೇಶ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶುಭಶ್ರೀ, ಅಶಾ ಕಾರ್ಯಕರ್ತೆಯರು ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *